Showing posts with label ತರುಣ ಅರುಣ vijaya vittala ankita suladi ಪಾಂಡುರಂಗ ಚರಣ ಸ್ತೋತ್ರ ಸುಳಾದಿ TARUNA ARUNA PANDURANGA CHARANA STOTRA SULADI. Show all posts
Showing posts with label ತರುಣ ಅರುಣ vijaya vittala ankita suladi ಪಾಂಡುರಂಗ ಚರಣ ಸ್ತೋತ್ರ ಸುಳಾದಿ TARUNA ARUNA PANDURANGA CHARANA STOTRA SULADI. Show all posts

Monday, 9 December 2019

ತರುಣ ಅರುಣ vijaya vittala ankita suladi ಪಾಂಡುರಂಗ ಚರಣ ಸ್ತೋತ್ರ ಸುಳಾದಿ TARUNA ARUNA PANDURANGA CHARANA STOTRA SULADI


Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ   ಶ್ರೀಪಾಂಡುರಂಗ ದೇವರ ಚರಣಸ್ತೋತ್ರ ಸುಳಾದಿ 

 ರಾಗ ಮಾಂಡ್ 

 ಧ್ರುವತಾಳ 

ತರುಣ ಅರುಣ ಕಿರಣದಂತೆ ಪೋಲುವ ಚರಣ 
ತರಣಿ ಹರಿಣಾಂಕರನು ಧರಣ ಮಾಡುವ ಚರಣ 
ವರುಣ ವಾರಣ ನಿತ್ಯಾಚರಣೆ ಮಾಡುವ ಚರಣ 
ತರುಣಿ ದ್ರೌಪದಿಯ ಭಯ ನಿವಾರಣ ಮಾಡಿದ ಚರಣ 
ಧರಣಿಯೊಳು ಪುಟ್ಟಿ ಸಂಚರಣ ಮಾಡಿದ ಚರಣ 
ಕರುಣದಲ್ಲಿ ದಾಸರನಾದರಣೆ ಮಾಡಿದ ಚರಣ 
ಸ್ಮರಣೆಮಾಡುವರಿಗೆ ಸಾಭರಣವಾಗುವ ಚರಣ 
ಶರಣಾಗತಿ ಸತತ ಪಂಢರಿಪುರವಾಸ 
ವರಣವಾಗಿ ಎನ್ನ ಹರಣ ಉಳ್ಳನಕ ನಿನ್ನ 
ಚರಣ ಸಂದರುಶನ ಲೇಸಾಗಿ ಈವುತ್ತ 
ಶಿರದಲ್ಲಿ ಇಡುವುದು ಶಿರಿ ರಮೆಯ ಸಿರಿ -
ವರ ಕರುಣಿ ವಿಜಯವಿಠ್ಠಲರೇಯ ನಿರುತ 
ಪರಣ ನಿನ್ನದು ಸದಾ ಪರಿಣಾಮನೆನಿಸೊ ॥ 1 ॥

 ಮಟ್ಟತಾಳ 

ಭಕುತರಾಪತ್ತು ಪರಿಹರಿಸುವ ಚರಣ 
ಲಕುಮಿಯ ಮೊಗಕ್ಕೆ ಕನ್ನಡಿಯಾದ ಚರಣ 
ತ್ವಕುವೇಂದ್ರಿಯಗಳನ್ನು ತುಳಿದು ನಿಲ್ಲಿಪ ಚರಣ 
ಮುಕುತವಂದಿತ ವಿಜಯವಿಠ್ಠಲ ನಿನ್ನ ಚರಣ 
ಸಕಲ ಪಾಪಂಗಳಿಗೆ ಪ್ರಾಯಶ್ಚಿತ್ತದ ಚರಣ 
ಭಕುತರಾಪತ್ತು ಪರಿಹರಿಸುವ ಚರಣ ॥ 2 ॥

 ತ್ರಿವಿಡಿತಾಳ 

ಕಂಸನ ಉರದಲ್ಲಿ ನಾಟ್ಯವಾಡಿದ ಚರಣ 
ಹಂಸಡಿಂಬರನಾ ಭೂತಳಕ ವರಿಸಿದ ಚರಣ 
ಹಂಸವಾಹನನ ಮನದಲ್ಲಿ ಪೊಳೆವ ಚರಣ 
ಸಂಸಾರಾಂಬುಧಿಯನ್ನು ಉತ್ತರಿಸುವ ಚರಣ 
ಪುಂಸಪುಂಗವ ನಮ್ಮ ವಿಜಯವಿಠ್ಠಲ ಕರುಣೀ 
ಅಂಶದಿಂದಲಿ ಜಗವ ಬೆಳಗುವ ಸಿರಿಚರಣ ॥ 3 ॥

 ಅಟ್ಟತಾಳ 

ಇದೆ ಚರಣವು ಇದೆ ಚರಣವು 
ಹೃದಯದೊಳಗೆ ಬಂದು ವದನಕ್ಕೆ ವೊದಗಲಿ 
ಇದೆ ಚರಣ ಸಕಲ ಸದಾ ಸಂ -
ಪದವಿಗೆ ಪರಿಪರಿ ಸಾಧನ ತೋರಲು 
ಇದೆ ಚರಣವು ಸದನವಾಗಲಿ ಎನಗೆ 
ಅಧಿಕ ದೈವವೆ ರಂಗಾ ವಿಜಯವಿಠ್ಠಲ ನಿನ್ನ 
ಸದಮಲಚರಣ ಸದಾನಂದ ಚರಣ ॥ 4 ॥

 ಆದಿತಾಳ 

ಇಟ್ಟಿಗೆ ಗದ್ದಿಗೆ ಮೆಟ್ಟಿನಿಂದ ಚರಣ 
ಜಟ್ಟಿಗಳೆಲ್ಲರ ಕುಟ್ಟಿ ಕೆಡಹಿದ ಚರಣ 
ಪುಟ್ಟಗೆಜ್ಜೆ ಪೊನ್ನಂದಿಗೆಯಿಟ್ಟ ಚರಣ 
ಕಟ್ಟುಗ್ರ ದೈವವೆ ವಿಜಯವಿಠ್ಠಲ ನಿನ್ನ ಚರಣ ॥ 5 ॥

 ಜತೆ 

ಬೇಡಿದಿಷ್ಟಾರ್ಥ ವೇಗ ಕೊಡುವ ಚರಣ 
ಗೂಢಮಹಿಮ ವಿಜಯವಿಠ್ಠಲ ರಂಗನ ಚರಣ ॥
********
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಪಾಂಡುರಂಗದೇವರ ಚರಣಸ್ತೋತ್ರ ಸುಳಾದಿ 

 ರಾಗ ಮಾಂಡ್ 

 ಧ್ರುವತಾಳ 

ತರುಣ ಅರುಣ ಕಿರಣದಂತೆ ಪೋಲುವ ಚರಣ 
ತರಣಿ ಹರಿಣಾಂಕರನು ಧರಣ ಮಾಡುವ ಚರಣ 
ವರುಣ ವಾರುಣ ನಿತ್ಯಾಚರಣೆ ಮಾಡುವ ಚರಣ 
ತರುಣಿ ದ್ರೌಪದಿಯ ಭಯ ನಿವಾರಣ ಮಾಡಿದ ಚರಣ 
ಧರಿಣಿಯೊಳು ಪುಟ್ಟಿ ಸಂಚರಣ ಮಾಡಿದ ಚರಣ 
ಕರುಣಾದಲ್ಲಿ ದಾಸರನಾದರಣೆ ಮಾಡಿದ ಚರಣ 
ಸ್ಮರಣೆಮಾಡುವರಿಗೆ ಸಾಭರಣವಾಗುವ ಚರಣ 
ಶರಣಾಗತಿ ಸತತ ಪಂಢರಿಪುರವಾಸ 
ವರಣವಾಗಿ ಎನ್ನ ಹರಣ ಉಳ್ಳನಕ ನಿನ್ನ 
ಚರಣ ಸಂದರುಶನ ಲೇಸಾಗಿ ಈವುತ್ತ 
ಶಿರದಲ್ಲಿ ಇಡುವದು ಶಿರಿ ರಮೆಯ ಸಿರಿ 
ವರ ಕರುಣಿ ವಿಜಯವಿಠಲರೇಯ ನಿರುತ 
ಪರಣ ನಿನ್ನದು ಸದಾ ಪರಿಣಾಮನೆನಿಸೊ ॥ 1 ॥

 ಮಟ್ಟತಾಳ 

ಭಕುತರಾಪತ್ತು ಪರಿಹರಿಸುವ ಚರಣ 
ಲಕುಮಿಯ ಮೊಗಕ್ಕೆ ಕನ್ನಡಿಯಾದ ಚರಣ 
ತ್ವಕುವೇಂದ್ರಿಗಳನ್ನು ತುಳಿದು ನಿಲ್ಲಿಪ ಚರಣ 
ಮುಕುತ ವಂದಿತ ವಿಜಯವಿಠಲ ನಿನ್ನ ಚರಣ 
ಸಕಲ ಪಾಪಂಗಳಿಗೆ ಪ್ರಾಯಶ್ಚಿತ್ತದ ಚರಣ 
ಭಕುತರಾಪತ್ತು ಪರಿಹರಿಸುವ ಚರಣ ॥ 2 ॥

 ತ್ರಿವಿಡಿತಾಳ 

ಕಂಸನ ಉರದಲ್ಲಿ ನಾಟ್ಯವಾಡಿದ ಚರಣ 
ಹಂಸಡಿಂಬರನಾ ಭೂತಳಕ ವರಿಸಿದ ಚರಣ 
ಹಂಸವಾಹನನ ಮನದಲ್ಲಿ ಪೊಳೆವ ಚರಣ 
ಸಂಸಾರಾಂಬುಧಿಯನ್ನು ಉತ್ತರಿಸುವ ಚರಣ 
ಪುಂಸಪುಂಗವ ನಮ್ಮ ವಿಜಯವಿಠಲ ಕರುಣೀ 
ಅಂಶಾದಿಂದಲಿ ಜಗವ ಬೆಳಗುವ ಸಿರಿಚರಣ ॥ 3 ॥

 ಅಟ್ಟತಾಳ 

ಇದೆ ಚರಣವು ಇದೆ ಚರಣವು 
ಹೃದಯದೊಳಗೆ ಬಂದು ವದನಕ್ಕೆ ವೊದಗಲಿ 
ಇದೆ ಚರಣ ಸಕಲ ಸದಾ ಸಂಪದವಿಗೆ ಪರಿಪರಿ 
ಸಾಧನ ತೋರಲು ಇದೆ ಚರಣವು 
ಸದನವಾಗಲಿ ಎನಗೆ 
ಅಧಿಕ ದೈವವೆ ರಂಗಾ ವಿಜಯವಿಠಲ ನಿನ್ನ 
ಸದಮಲಚರಣ ಸದಾನಂದ ಚರಣ ॥ 4 ॥

 ಆದಿತಾಳ 

ಇಟ್ಟಿಗೆ ಗದ್ದಿಗೆ ಮೆಟ್ಟಿನಿಂದ ಚರಣ 
ಜಟ್ಟಿಗಳೆಲ್ಲರ ಕುಟ್ಟಿ ಕೆಡಹಿದ ಚರಣ 
ಪುಟ್ಟಗೆಜ್ಜೆ ಪೊನ್ನಂದಿಗೆಯಿಟ್ಟ ಚರಣ 
ಕಟ್ಟುಗ್ರ ದೇವವೆ ವಿಜಯವಿಠಲ ನಿನ್ನ ಚರಣ ॥ 5 ॥

 ಜತೆ 

ಬೇಡಿದಿಷ್ಟಾರ್ಥವೇಗ ಕೊಡುವ ಚರಣ 
ಗೂಢಮಹಿಮ ವಿಜಯವಿಠಲ ರಂಗನ ಚರಣ ॥

*********