..
ಸುಶರಣ ಸುರಪಾದಪ
ಸುಶೀಲೇಂದ್ರ ಸನ್ಮುನಿಪ ಪ
ಚಾರು ತುಳಸಿ ಸಾರಸಾಕ್ಷಮಣಿ
ಹಾರ ಶೋಭಿತ ಜಿತ ವಾರಿಜ ಚಾಪ 1
ಸಲೆ ಮಂತ್ರಾಲಯ ನಿಲಯರ ಒಲಿಸಿದ
ಅಲವ ಬೋಧಮತ ಜಲಧಿಗೆ ಉಡುಪ 2
ಕ್ಷಿತಿದೇವ ತತಿನುತ ವರದಾತಟ
ಸ್ಥಿತಯತಿ ಪತಿ ಪದ ವೃತತಿಜ ಮಧುಪ 3
ಕೋವಿದ ಜನ ಸಂಸೇವಿತ ವರ ವೃಂ
ದಾವನ ಮಂದಿರ ಪಾವನ ರೂಪ 4
ವರದ ಶಾಮಸುಂದರ ರಘುರಾಮನ
ಚರಣಾರಾಧಕ ದುರಿತ ನಿರ್ಭೀತ 5
***