Showing posts with label ದರ್ಪಣದಲಿ ಮುಖ ನೋಡಿಕೊಂಡನೆ indiresha. Show all posts
Showing posts with label ದರ್ಪಣದಲಿ ಮುಖ ನೋಡಿಕೊಂಡನೆ indiresha. Show all posts

Monday, 2 August 2021

ದರ್ಪಣದಲಿ ಮುಖ ನೋಡಿಕೊಂಡನೆ ankita indiresha

ದರ್ಪಣದಲಿ ಮುಖ ನೋಡಿಕೊಂಡನೆ ಪ

ನಮ್ಮ ವೆಂಕಟೇಶ ಸರ್ಪಶಯನಸರ್ವೋತ್ತಮ ಕಮಲೆಯ ಅಪ್ಪುತ ಸರ್ವೇಶ ಅ.ಪ.

ಮಲ್ಲಿಗೆ ಮುಗುಳಿನ ತೆರದಲಿ ಶೋಭಿಪ ಪಲ್ಲುಗಳಲೆ ಸಿರಿಯುಗಲ್ಲವು ಭೂಪತಿಯಂದದಿ ಬೃಸ್ವರಾಬಿಲ್ಲಿನ ಸೌಭಗವು1

ಶರದುದಿತಾಮಲ ತರುಣಿಕರಾರ್ಚಿತ ಸರಸಿಜದಳನಯನಾಕರುಣಪೂರ್ಣ ಕಟಾಕ್ಷ ರಕ್ಷಣ ವರಪಲ್ಲವರರಸನು 2

ರತ್ನಕುಂಡಲದ್ವಯ ಸಂಶೋಭಿತ ಸ್ತೋತ್ರಯುಗಳ ನೇಮಮಸ್ತಕದಲಿ ಮಾಣಿಕ ಮುಕುಟ ಶ್ರೀ ಉತ್ತಮ ಮುಖಧಾಮ 3

ನಿತ್ಯಾನಂದ ಚಿದಾತ್ಮಕ ಶಕ್ತನು ಭಕ್ತಕಾಮಿತದಾತಎತ್ತುವೆ ಕರಯುಗ ತವ ಕಮಲಕೆ ಚಿತ್ರ ಚರಿತ್ರ ಗಾತ್ರಾ 4

ನಾಸಕ ಚಂಪಕ ಕೋಶವು ಬಿಂಬಾಧರ ಯುಗಳದೋಷರಹಿತ ಸುರಾಹ ಸರೋಜ ಇಂದಿರೇಶ ವದನ 5

****