ಪುರಂದರದಾಸರು
ರಾಗ ಭೈರವಿ ಆದಿತಾಳ
ಜಯ ಜಯ ಶ್ರೀರಾಮ ನಮೋ
ಜಯ ಜಯ ಶ್ರೀ ಕೃಷ್ಣ ನಮೋ ||ಪ||
ಸಿರಿಯರಸನು ಶೃಂಗಾರವ ಮಾಡಿ
ಶ್ರೀ ಗಂಧವನೆ ಹಣೆಗಿಟ್ಟು
ತರುಣ ತುಲಸಿ ಮಾಲೆಯ ಧರಿಸಿ
ಕರುತುರುಗಾಯಲು ಹೊರಗೆ ಹೊರಟನು ||ಅ||
ಹೊತ್ತು ಹೋಯಿತು ತುರು ಬಿಡಿರೆನ್ನುತ
ಅಚ್ಯುತ ನುಡಿದ ಗೋಪಿಯರೊಡನೆ
ತುತ್ತುರಿ ನಾದವು ತುರುರೆನ್ನುತ
ಒತ್ತಿ ಸ್ವರದಿ ಪೊಂಗೊಳಲನೂದಲು ||
ಹರಿಸ್ವರವೆನ್ನುತ ಒಬ್ಬಳು ಪೋಗಿ
ನೆರೆಮನೆಗ್ಹೋಗಿ ತಾ ಕೇಳಿದಳು
ಒರಳ ಕೊಟ್ಟೀರಾ ಪರಮಾನ್ನ ಮಾಡಿ
ತ್ವರದಿ ಮರಳಿ ತಂದಿಪ್ಪೆನೆನುತಲಿ ||
ವನಿತೆ ಸೌಟಿನೊಳಕ್ಕಿಯ ತೊಳೆಸಿ
ಒನಕೇಲಿ ಓಗರ ಹದ ನೋಡಿ
ಘನತರ ಸೀರೆ ತಲೆಗೆ ಸುತ್ತಿಕೊಂಡು
ತನುವಿಗೆ ಕುಪ್ಪಸ ಸುತ್ತುತಲಿ ||
ದಿಟ್ಟನೋಲೆ ಮೊಣಕಾಲಿಗೆ ತಗಲಿಸಿ
ಗಟ್ಟಿ ಕಂಕಣ ಕಿವಿಗಿಟ್ಟು
ತೊಟ್ಟಿಲೊಳಗೆ ಶಿಶು ಅಳುವುದ ಕಂಡು
ಕಟ್ಟಿದ ನವಿಲನು ತೂಗಿದಳು ||
ಅಂಗನೆ ಚೌರಿ ಕಾಲಿಗೆ ಕಟ್ಟಿ
ಮುಂಗೈಗೆ ತಾಳಿಯ ಬಿಗಿದು
ಶೃಂಗಾರ ಸರವ ನಡುವಿಗೆ ಕಟ್ಟಿ
ರಂಗನ ಸ್ಮರಿಸುತ ಹೊರಗೆ ನಡೆದಳು ||
ಹಸುವಿಗಿಟ್ಟಳು ಹಾಲು ಓಗರವ
ಬಿಸಿ ಮಡ್ಡಿಯ ಗಂಡಗೆ ಹಾಕಿ
ಸೊಸೆಯನು ಅಟ್ಟಿ ತೊತ್ತನೆ ಪಾಲಿಸಿ
ಮೊಸರು ಕಾಸಿ ಹೆಪ್ಪು ಕೊಡುತಲಿದ್ದಳು ||
ಗಿಳಿಗೆ ಹಾಸಿದಳು ಹಾಸು ಮಂಚವ
ಅಳಿಯನ ಪಂಜರದೊಳಗಿರಿಸಿ
ತಳಿಗೆಯನಿಟ್ಟು ತಮ್ಮನ ಮಲಗಿಸಿ
ತೊಟ್ಟಿಲೊಳಗೆ ಎಡೆ ಮಾಡಿದಳು ||
ಅಟ್ಟವೆಂದ್ಹತ್ತಿ ಅಗಳಿಯ ಮೇಲೆ
ಇಟ್ಟಳು ಸಾದೆಂದು ಸಗಣಿಯನು
ಕಟ್ಟ ಬಾಯಿಗೆ ಕಾಡಿಗೆ ಹಚ್ಚಿ
ಕೃಷ್ಣನ ಸ್ಮರಿಸುತ ಹೊರಗ್ಹೊರಟಳು ಸಕಿ ||
ಮಾನಿನಿ ಒಬ್ಬಳು ಸಂನ್ಯಾಸಿಯ ಕಂಡು
ಧೇನಿಸಿ ಕೂಸೆಂದತ್ತಬರಲು
ಏನು ಗಾಳಿ ಅವರಿಗೆ ಸೋಕಿತೆ ಎಂದು
ಪುರಂದರವಿಠಲ ನಗುತಲಿದ್ದನು |
***
ರಾಗ ಭೈರವಿ ಆದಿತಾಳ
ಜಯ ಜಯ ಶ್ರೀರಾಮ ನಮೋ
ಜಯ ಜಯ ಶ್ರೀ ಕೃಷ್ಣ ನಮೋ ||ಪ||
ಸಿರಿಯರಸನು ಶೃಂಗಾರವ ಮಾಡಿ
ಶ್ರೀ ಗಂಧವನೆ ಹಣೆಗಿಟ್ಟು
ತರುಣ ತುಲಸಿ ಮಾಲೆಯ ಧರಿಸಿ
ಕರುತುರುಗಾಯಲು ಹೊರಗೆ ಹೊರಟನು ||ಅ||
ಹೊತ್ತು ಹೋಯಿತು ತುರು ಬಿಡಿರೆನ್ನುತ
ಅಚ್ಯುತ ನುಡಿದ ಗೋಪಿಯರೊಡನೆ
ತುತ್ತುರಿ ನಾದವು ತುರುರೆನ್ನುತ
ಒತ್ತಿ ಸ್ವರದಿ ಪೊಂಗೊಳಲನೂದಲು ||
ಹರಿಸ್ವರವೆನ್ನುತ ಒಬ್ಬಳು ಪೋಗಿ
ನೆರೆಮನೆಗ್ಹೋಗಿ ತಾ ಕೇಳಿದಳು
ಒರಳ ಕೊಟ್ಟೀರಾ ಪರಮಾನ್ನ ಮಾಡಿ
ತ್ವರದಿ ಮರಳಿ ತಂದಿಪ್ಪೆನೆನುತಲಿ ||
ವನಿತೆ ಸೌಟಿನೊಳಕ್ಕಿಯ ತೊಳೆಸಿ
ಒನಕೇಲಿ ಓಗರ ಹದ ನೋಡಿ
ಘನತರ ಸೀರೆ ತಲೆಗೆ ಸುತ್ತಿಕೊಂಡು
ತನುವಿಗೆ ಕುಪ್ಪಸ ಸುತ್ತುತಲಿ ||
ದಿಟ್ಟನೋಲೆ ಮೊಣಕಾಲಿಗೆ ತಗಲಿಸಿ
ಗಟ್ಟಿ ಕಂಕಣ ಕಿವಿಗಿಟ್ಟು
ತೊಟ್ಟಿಲೊಳಗೆ ಶಿಶು ಅಳುವುದ ಕಂಡು
ಕಟ್ಟಿದ ನವಿಲನು ತೂಗಿದಳು ||
ಅಂಗನೆ ಚೌರಿ ಕಾಲಿಗೆ ಕಟ್ಟಿ
ಮುಂಗೈಗೆ ತಾಳಿಯ ಬಿಗಿದು
ಶೃಂಗಾರ ಸರವ ನಡುವಿಗೆ ಕಟ್ಟಿ
ರಂಗನ ಸ್ಮರಿಸುತ ಹೊರಗೆ ನಡೆದಳು ||
ಹಸುವಿಗಿಟ್ಟಳು ಹಾಲು ಓಗರವ
ಬಿಸಿ ಮಡ್ಡಿಯ ಗಂಡಗೆ ಹಾಕಿ
ಸೊಸೆಯನು ಅಟ್ಟಿ ತೊತ್ತನೆ ಪಾಲಿಸಿ
ಮೊಸರು ಕಾಸಿ ಹೆಪ್ಪು ಕೊಡುತಲಿದ್ದಳು ||
ಗಿಳಿಗೆ ಹಾಸಿದಳು ಹಾಸು ಮಂಚವ
ಅಳಿಯನ ಪಂಜರದೊಳಗಿರಿಸಿ
ತಳಿಗೆಯನಿಟ್ಟು ತಮ್ಮನ ಮಲಗಿಸಿ
ತೊಟ್ಟಿಲೊಳಗೆ ಎಡೆ ಮಾಡಿದಳು ||
ಅಟ್ಟವೆಂದ್ಹತ್ತಿ ಅಗಳಿಯ ಮೇಲೆ
ಇಟ್ಟಳು ಸಾದೆಂದು ಸಗಣಿಯನು
ಕಟ್ಟ ಬಾಯಿಗೆ ಕಾಡಿಗೆ ಹಚ್ಚಿ
ಕೃಷ್ಣನ ಸ್ಮರಿಸುತ ಹೊರಗ್ಹೊರಟಳು ಸಕಿ ||
ಮಾನಿನಿ ಒಬ್ಬಳು ಸಂನ್ಯಾಸಿಯ ಕಂಡು
ಧೇನಿಸಿ ಕೂಸೆಂದತ್ತಬರಲು
ಏನು ಗಾಳಿ ಅವರಿಗೆ ಸೋಕಿತೆ ಎಂದು
ಪುರಂದರವಿಠಲ ನಗುತಲಿದ್ದನು |
***
pallavi
jaya jaya shrI rAma namO jaya jaya shrI krSna namO
anupallavi
siriyarasanu shrngArava mADi shrIkandhavane hanegiTTu taruNa tulasi vana mAleya dharisi karuturugAyelu horage horaDanu
caraNam 1
hottu hOyitu turu biDirennuta acyuta nuDida gOpiyaroDane
tutturi nAdavu turu tururennuta otti svaradi pongoLalUdalu
caraNam 2
hari svaravennuta obbaLu pELi nere maneghOgi tA kELidaLu
oraLa koTTIrA paramAnna mADi dravadi maraLi tandippenenutali
caraNam 3
vanite seLaTinoLakkya toLesi onakEli Ogara hada nODi
ghanatara sIre talage sutti koNDu tanuvige kuppasa suttutali
caraNam 4
diTTanOle moNa kAlige tagalisi gaTTi kankaNa kivigiTTu
toTTilolage shishu aLuvuta kaNDu kaTTida navilanu tUgidaLu
caraNam 5
angane cauri kAlige kaTTi mungaige tALiya bigidu
shrngArava sarava naDuvige kaTTi rangana smarasuta horage horaTaLu
caraNam 6
hasuvigiTTaLu hAlu Ogara bisi maDDiya gaNDage hAki
soseyanu aTTi tottane pAlisi mosaru kAsi heppu koDutiddaLu
caraNam 7
kiLige hAsidaLu hAsumancava aLiyana panjaradoLagirisi
taLigeyaniTTu tammana malagisi toTTi loLage eDe mADidaLobbaLu
caraNam 8
aTTavandhatti agaLiya mEle iLLaLu sAdendu sagaNiyanu
kaTTa bAyige kADige hacci krSNana smarisuta horaghoraTaLu saki
caraNam 9
mAnini obba sanyAsiya kaNDu dhEnisi kUsendatta baralu
Enu kALi avarige sOkite endu purandara viTTala tannoLu nagudiddanu
***
ಜಯ ಜಯ ಶ್ರೀ ರಾಮ ನಮೋ |
ಜಯ ಜಯ ಶ್ರೀ ಕೃಷ್ಣ ನಮೋ ಪ.
ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1
ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2
ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3
ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4
ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5
ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6
ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7
ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8
ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9
ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
******