Showing posts with label ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ mahipati. Show all posts
Showing posts with label ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ mahipati. Show all posts

Wednesday, 11 December 2019

ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ ankita mahipati

by ಮಹಿಪತಿದಾಸರು
ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ
ಗಳಿಸಿದಾಗಳಿಗೆ ಅಂತಃಕರಣದೊಳಗೆ ||ಧ್ರುವ||

ಗಳಿಸಿದೆನು  ಗುರುಕರುಣ, ಗಳಿಸಿದೆನು  ಗುರುಚರಣ
ಗಳಿಸಿದೆನು  ಗುರುಸ್ಮರಣ ಚಿಂತನಿಯನು ||೧||

ಗಳಿಸಿದೆನು ಗುರುಜ್ಞಾನ, ಗಳಿಸಿದೆನು  ಗುರುಮೋನ
ಗಳಿಸಿದೆನು   ಗುರುಜ್ಞಾನ ಧಾರಣವನು ||೨||

ಗಳಿಸಿದೆನು  ಇಳೆಯೊಳು ಮಹಿಪತಿ ಇಹಪರದೊಳು
ಸಾಯುಜ್ಯ ಸದ್ಗತಿಯ ಮುಕ್ತಿಗಳು ||೩||
****

ಕಾಖಂಡಕಿ ಶ್ರೀ ಮಹಿಪತಿರಾಯರು

ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ ಗಳಿಸಿದಾಗಳಿಗೆ ಅಂತಃಕರಣದೊಳಗೆ ಪ 


ಗಳಿಸಿದೆನು ಗುರುಕರುಣ ಗಳಿಸಿದೆನು ಗುರುಚರಣ ಗಳಿಸಿದೆನು ಗುರುಸ್ಮರಣ ಚಿಂತನಿಯನು 1 

ಗಳಿಸಿದೆನು ಗುರುಙÁ್ಞನ ಗಳಿಸಿದೆನು ಗುರುಮೋನ ಗಳಿಸಿದೆನು ಗುರುಙÁ್ಞನ ಧಾರಣವನು 2 

ಗಳಿಸಿದೆನು ಇಳಯೊಳು ಮಹಿಪತಿ ಇಹ್ಯ ಪರದೊಳು ಸಾಯುಜ್ಯ ಸದ್ಗತಿಯ ಮುಕ್ತಿಗಳು 3

****