Showing posts with label ಪಾಲಿಸೋ ವೆಂಕಟಗಿರಿ ರಾಯಾ pranesha vittala. Show all posts
Showing posts with label ಪಾಲಿಸೋ ವೆಂಕಟಗಿರಿ ರಾಯಾ pranesha vittala. Show all posts

Wednesday 13 November 2019

ಪಾಲಿಸೋ ವೆಂಕಟಗಿರಿ ರಾಯಾ ankita pranesha vittala

by ಪ್ರಾಣೇಶದಾಸರು
ಪಾಲಿಸೋ ವೆಂಕಟಗಿರಿ ರಾಯಾ ಲಕ್ಷ್ಮೀ |ಲೋಲನೀಲಾಂಬುದ ಸಮ ಕಾಯಾ ಪ

ಮಾಕಮಲಾಸನವಾಸವ- ಸುರ |ನೀಶ ಕರಾಧ್ಯ ಕೇಶವ ||ಲೋಕೇಶ ಯನ್ನಲ್ಲಿ ವಾಸವ-ಮಾಡಿನೂಕು ತುಚ್ಛತರ ಕ್ಲೇಶವ 1

ಹಿಂದಿನ ಜನುಮಗಳೆಣಿಕಿಲ್ಲ - ದಯಾ |ಸಿಂಧುಸಾಧನವೀಗಲಿನಿತೆಲ್ಲಾ ||ಮುಂದಿನ ಗತಿಯೇನೋ ತಿಳಿದಿಲ್ಲ - ಇದ |ರಿಂದಲಂಜುವೆ ಜಾಂಬವತೀ ನಲ್ಲ 2

ಬಾಲಕನಾದೆ ಕೆಲವು ದಿನ - ಪ್ರಾಯ |ಕಾಲವೊದಗಲು ಪರಾಂಗನಾ ||ಮೇಲೆ ಅಭಕ್ಷಣೆಯಲಿ ಮನವಿಟ್ಟೆ - ಹೇ |ಳಲೊಂದೆರಡೇ ಯನ್ನವಗುಣ 3

ಉದಯ ಸ್ನಾನವು ಸಂಧ್ಯಾವಂದನೆ - ಅಘ್ರ್ಯ |ವಿಧಿಗುರುಹಿರಿಯರ ವಂದನೆ |ಮೊದಲಾಗಿ ಪಿತರಾರಾಧನೆ ಬಿಟ್ಟೆ |ಮದದಿಂದ ಹೀನನೆಂಬುವ ನಾನೇ4

ಅನ್ಯರ ಮನೆ ದ್ವಾರ ಕಾಯ್ವೆನೋ - ಸ್ವಾಮಿ |ನಿನ್ನ ಸ್ಮರಣೆಯ ಕ್ಷಣ ಮಾಡೆನೋ ||ಅನ್ನಕ್ಕೆ ಬಹುದೂರ ಪೋಪೆನೋ - ಸಾರೆ |ಪುಣ್ಯಕ್ಷೇತ್ರಗಳಿರೆ ನೋಡೆನೋ 5

ಧನಹೀನನಾದ ಕಾರಣದಿಂದ -ಸತಿ|ಮನೆ ಹೊಂದಿಸಳೋ ಪರಮಾನಂದ ||ತನುಜರಶನ ವಸನಗಳಿಂದ ಕಾಡು |ವಣು ಮಾತ್ರ ಸುಖವಿಲ್ಲ ಇದರಿಂದ6

ಏಸುಹೇಳಲಿ ಮಾತ ಲಾಲಿಸೋ - ಶ್ರೀ ಪ್ರಾ- |ಣೇಶ ವಿಠ್ಠಲ ನೀನೇ ತಾರಿಸೋ ||ಆ ಸತ್ಕರ್ಮದಿ ಮನ ಪ್ರೇರಿಸೋ - ನಿನ್ನ |ದಾಸವರ್ಗದೊಳೆನ್ನ ಕೂಡಿಸೋ 7
*******