Showing posts with label ಈ ಮಾತುರ ನೀಯದಿದ್ದರೆ ನಿನ್ನ ಧಾಮದಲ್ಲಿಗೆ vijaya vittala. Show all posts
Showing posts with label ಈ ಮಾತುರ ನೀಯದಿದ್ದರೆ ನಿನ್ನ ಧಾಮದಲ್ಲಿಗೆ vijaya vittala. Show all posts

Wednesday, 16 October 2019

ಈ ಮಾತುರ ನೀಯದಿದ್ದರೆ ನಿನ್ನ ಧಾಮದಲ್ಲಿಗೆ ankita vijaya vittala

ವಿಜಯದಾಸ
ಈ ಮಾತುರ ನೀಯದಿದ್ದರೆ ನಿನ್ನ |
ಧಾಮದಲ್ಲಿಗೆ ಪೋಗಿ ಸೇರಿ ಸುಖಿಪದೆಂತೋ ಪ

ಹುಟ್ಟಿದಾರಭ್ಯದಿ ಹೊಟ್ಟಿ ಬಟ್ಟಿಯಲಿಂದ |
ಕಷ್ಟ ಬಟ್ಟೆನೆಂದು ಹೇಳಲಿಲ್ಲಾ |
ಸೃಷ್ಟೇಶ ಕಾಡುವ ಅಷ್ಟ್ಟ ಮಹಾಮದಗಳ ನಷ್ಟಗೊಳಿಸಿ ನಿನ್ನ |
ನಿಷ್ಟಿಲಿಡೆಂದೆಲ್ಲದೆ 1

ಸತಿ ಸುತರಿಗೆ ಯೇನೋ |
ಗತಿ ಗೋತ್ರವಿಲ್ಲೆಂದು |
ಸತತ ನಿನ್ನ ಕೇಳಿ ದಣಿಸಿಲಿಲ್ಲಾ |
ಪತಿತ ಪಾವನ ಎನಗೆ ಗತಿಯಾಗುವುದಕೆ |
ಸುಪಥವನೆ ತೋರುವ |
ಮತಿಕೊಡೆಂದೆನಲ್ಲದೆ2

ಕರುಣಿ ಬೇಡಿಕೊಂಬೆ |
ಉರು ಕಾಲದಲಿ ನಿನ್ನ |
ಶರಣರ ಸಂಗತಿಲೆನ್ನ ಇಟ್ಟು |
ಪರಮ ಶುದ್ಧನ ಮಾಡಿ
ವಿಜಯವಿಠ್ಠಲ ನಿನ್ನ |
ಚರಣಸೇವೆ ನಿರಂತರ ಕೊಡೆಂದೆನಲ್ಲದೆ3
********