ರಾಗ - : ತಾಳ -
ಬಾಲನಲ್ಲವೇ ಕೃಷ್ಣಯ್ಯಾ ಯಶೋದೆ ಲಕ್ಷ್ಮಿ l
ಲೋಲ ಬ್ರಹ್ಮನ ಪೆತ್ತಯ್ಯಾ ll ಪ ll
ಜಲವ ಪೊಕ್ಕು ಶಿಲೆಯ ಪೊತ್ತು ನೆಲನೆ ಹಲ್ಲಿನಿಂದಲೆತ್ತಿ l
ಛಲದಿ ಬಾಲ ಕರಿಯೆ ಕಂಭದಿಂದ ತೊಲಗಿ ಬಂದವನೂ ll ೧ ll
ಬಲಿಯ ದಾನವನ್ನೆ ಬೇಡಿ ತಲೆಯಾಕಡಿದಾ ತಾಯನೋಡಿ l
ಮಲತರಾವಣನ್ನಾ ಕೊಂದು ಮಾವನ್ನ ಮರ್ದಿಸಿದಾನವ್ವ ll ೨ ll
ಉಡವ ವಸ್ತ್ರವನ್ನೆ ಬಿಟ್ಟ ಕುದುರಿನೇರಿ ದಿಟ್ಟ ಸೃಷ್ಠಿ l
ಕರ್ತ ಜನಾರ್ದನವಿಟ್ಠಲ ಬಲು ಭಕ್ತರೊಡಿಯಾ ll ೩ ll
***