Showing posts with label ಭಾಪು ಬಲ್ಲಿದಹನುಮ ಭೂಪ prasannavenkata. Show all posts
Showing posts with label ಭಾಪು ಬಲ್ಲಿದಹನುಮ ಭೂಪ prasannavenkata. Show all posts

Thursday, 14 November 2019

ಭಾಪು ಬಲ್ಲಿದಹನುಮ ಭೂಪ ankita prasannavenkata

by ಪ್ರಸನ್ನವೆಂಕಟದಾಸರು
ಭಾಪುಬಲ್ಲಿದಹನುಮ ಭೂಪ ಹನುಮಶ್ರೀಪದ್ಮನಾಭನ ದಾಸ ಭಕ್ತರ ವಿಲಾಸ ಪ.

ಹಾಟಕಯಜೊÕೀಪವೀತಕಚ್ಚುಟಕರ್ಣಕುಂಡಲ ಮುಖ್ಯಕೋಟಿಕಟಕ ಸಮಗಾತ್ರ ದಿಟ್ಟವಟು ಪಿಂಗಳನೇತ್ರದುಷ್ಟದಶಶಿರನಗರುವಮುಷ್ಟಿಯಿಂದಲ್ಹೊಡೆದೆ ಉರಕೆಕೋಟಿ ಪ್ಲವಗರ ಪೊರೆದಭಯ ಕೊಟ್ಟು ಪಾಲಿಸೆನ್ನಜೀಯ1

ದುರುಳಕುನೃಪನಟ್ಟಿಘನಗರಳನುಂಗಿ ಪುರೋಚನನಉರುಹಿ ಧರ್ಮಾದ್ಯರನು ಪೊರೆದೆ ಕಿರ್ಮೀರಕರರಿದೆಕ್ರೂರ ಕೌರವನಪಾವಕಹರಿಶರಣ ಜನಪಾಲಕಮರೆಹೊಕ್ಕೆ ಬಿಡದಿರು ಕೈಯ ಧೀರ ಶ್ರೀ ಭೀಮಸೇನರಾಯ 2

ಎಸೆವ ದಂಡಕಮಂಡಲವ ಧರಿಸಿ ಮಾರಶರವ ಜಯಿಸಿಬಿಸಜಾಕ್ಷನ ಪೊಳಲ ತೋರಿದೆ ಕಶ್ಮಲಮತವಳಿದೆವಸುಧೆಗೆ ವೈಷ್ಣವರೊಡೆಯ ನೋಯಿಸದೆಪೊರೆನಿನ್ನ ಪಡೆಯಶ್ರೀಶ ಪ್ರಸನ್ನವೆಂಕಟೇಶಾಂಘ್ರಿ ಸರೋಜರಜಭೃಂಗ 3
*******