Showing posts with label ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದ ಎತ್ತಿ bheemesha krishna. Show all posts
Showing posts with label ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದ ಎತ್ತಿ bheemesha krishna. Show all posts

Tuesday, 1 June 2021

ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದ ಎತ್ತಿ ankita bheemesha krishna

ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದ ಎತ್ತಿ

ಕೊಂಡು ಮುದ್ದಿಸಿದಳೆ ಯದುನಾಥನ್ನ ಪ


ಪಾಲವಾರಿಧಿ ಮಧ್ಯದಲ್ಲಿ ಶ್ರೀದೇವಿ ಸಹಿತ್ವೊಂ

ದಾಲದೆಲೆಯ ಮ್ಯಾಲಾಡುತಲಿ

ಕಾಲಬೆರಳು ಕಟಬಾಯಲಿ ಚೀಪುವ

ನೀಲವರ್ಣದಲಿ ತನ್ನ ಬಾಲನೆಂದೆನುತ 1


ಕೋಟಿ ಸೂರ್ಯದ ಕಾಂತಿ ಹರಣಮಾಡುವ ಮುಖ ಕಿ-

ರೀಟ ಕೌಂಸ್ತುಭ ಮಣಿಯಾಭರಣ

ಹಾಟಕಾಂಬರನುಟ್ಟ ನಾಟಕಧಾರಿ ಕಿ

ರೀಟಿ ಸಾರಥಿ ಪಕ್ಷಿರಾಟವಾಹನನ 2


ಚೆನ್ನವಾಗೀರೇಳು ಲೋಕವನು ತನ್ನುದರದೊಳಡಗಿಸಿ

ಪನ್ನಂಗಶಾಯಿ ಪರಮಾತ್ಮನ್ನ

ಚಿನ್ನ ಮಾಣಿಕ್ಯದ ತೊಟ್ಟಿಲೊಳಿಟ್ಟು ತೂಗುತ

ಎನ್ನ ಕಂದ ನೀ ತೋಳನ್ನಾಡೆಂದೆನುತ 3


ಕಡಗ ಕಿರುಗೆಜ್ಜೆ ಚರಣದಿಂದಲಿ ನಡೆಯುತಲಿ ಬಂದು ದಧಿ-

ಗಡಿಗೆ ತಾ ಒಡೆದನೆ

ಕಡಗೋಲಿಂದ ಹಿಡಿದು ಕಟ್ಟಲು ಒರಳೆಳೆದ್ವಿಮಳಾರ್ಜುನ

ಗಿಡವ ಕೆÀಡಹಿ ಮುಕ್ತಿಕೊಡುವ ಶ್ರೀ ಕೃಷ್ಣನ 4


ದಾಸಜನ ಪೋಷ ಭವ ಭಯ ನಾಶ ಮಾಡುವಾತ ಭುವ-

ನೇಶ ಹದಿನಾಲ್ಕು ಲೋಕದ ವಾಸ

ರಾಸಕ್ರೀಡೆಲಿ ವ್ರಜದ್ವನಿತೆಯರ ಸಂತೋಷಬಡಿಸಿದ ಭೀ-

ಮೇಶ ಕೃಷ್ಣನ ಮುಖ5

****