varadendra teertha rayara mutt yati 1785 stutih
ರಾಗ : ಭೈರವಿ ತಾಳ : ಆದಿ
ಪರಮ ಸಂಭ್ರಮದಿ
ರಾಜಿಸುವ ನೋಳ್ಪರಿಗೆ ।। ಪಲ್ಲವಿ ।।
ಸುರರಾಜನಂತೆ ಭೂಸುರಗಣ ಮಧ್ಯದಲ್ಲಿ ।
ಮೆರೆವ ದುರ್ವಿಷಯಕೆ ಪಾವಕಾ ।
ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ । ವರ ದಂಡ ।
ಧರನಂತೆ ಇರುವ ದಿಗ್ವಿಜಿಯಿಸುವ ।। ಚರಣ ।।
ಜ್ಞಾನಾದಿ ಗುಣ ರತ್ನಾಕರನೆನಿಸಿ ಕುಮತ ।
ಪಾನೀಯಧರಗಳಿಗೆ ಪವಮಾನನೆನಿಪ ।
ದೀನ ಜನರಿಗೆ ಧನಪ ವೈರಾಗ್ಯ ತಪದಲಿ ।
ಕೃಶಾನುಕೇತನ ತೆರದಲೊಪ್ಪುವ ಜಸ್ರ ।। ಚರಣ ।।
ಸೂರಿಕುಲವರಿಯ ವಸುಧೇಂದ್ರರಾಯ । ಕರಸ ।
ರೋರಹದಿ ಜನಿಸಿ ಪರಮೋತ್ಸಹದಲಿ ।
ಶ್ರೀ ರಾಮ ವ್ಯಾಸ ಜಗನ್ನಾಥವಿಠಲನ । ಚರ ।
ಣಾರವಿಂದರ್ಚನೆಯ ಪಡೆದು ಸಂತೋಷಿಸುವ ।। ಚರಣ ।।
*****