Saturday, 1 May 2021

ಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ ankita jagannatha vittala varadendra teertha stutih

 varadendra teertha rayara mutt yati 1785 stutih

ರಾಗ : ಭೈರವಿ ತಾಳ : ಆದಿ


ಪರಮ ಸಂಭ್ರಮದಿ 

ರಾಜಿಸುವ ನೋಳ್ಪರಿಗೆ ।। ಪಲ್ಲವಿ ।।


ಸುರರಾಜನಂತೆ ಭೂಸುರಗಣ ಮಧ್ಯದಲ್ಲಿ ।

ಮೆರೆವ ದುರ್ವಿಷಯಕೆ ಪಾವಕಾ ।

ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ । ವರ ದಂಡ ।

ಧರನಂತೆ ಇರುವ ದಿಗ್ವಿಜಿಯಿಸುವ ।। ಚರಣ ।।


ಜ್ಞಾನಾದಿ ಗುಣ ರತ್ನಾಕರನೆನಿಸಿ ಕುಮತ ।

ಪಾನೀಯಧರಗಳಿಗೆ ಪವಮಾನನೆನಿಪ ।

ದೀನ ಜನರಿಗೆ ಧನಪ ವೈರಾಗ್ಯ ತಪದಲಿ ।

ಕೃಶಾನುಕೇತನ ತೆರದಲೊಪ್ಪುವ ಜಸ್ರ ।। ಚರಣ ।।


ಸೂರಿಕುಲವರಿಯ ವಸುಧೇಂದ್ರರಾಯ । ಕರಸ ।

ರೋರಹದಿ ಜನಿಸಿ ಪರಮೋತ್ಸಹದಲಿ ।

ಶ್ರೀ ರಾಮ ವ್ಯಾಸ ಜಗನ್ನಾಥವಿಠಲನ । ಚರ ।

ಣಾರವಿಂದರ್ಚನೆಯ ಪಡೆದು ಸಂತೋಷಿಸುವ ।। ಚರಣ ।।

*****

No comments:

Post a Comment