..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಸ್ಕಂಧ ಸ್ತೋತ್ರ
ಸ್ಕಂಧ ದೇವಾ ಸ್ಕಂಧ ದೇವಾ
ಪಾಹಿ ಪಾಹಿ ಪಾಹಿಮಾಂ ಸ್ಕಂಧ ದೇವಾ ಪ
ಇಂದಿರೇಶ ಪ್ರಿಯ ನಮೋ ಶರಣು ಶರಣೆಂಬೆ
ಸುಂದರಾಂಗ ತೇಜೋರೂಪಿ ಸ್ಕಂಧ ನಮಸ್ತೆ ತ್ರ
ಕ್ರೌಶೀಕಸ ವಿಶ್ವಾಮಿತ್ರ ಋಷಿ ಸಂಸ್ತುತ್ಯ
ಈಶ ಶ್ರೀಶ ದೇವ ನಿನ್ನೊಳ್ ಸುಪ್ರಸನ್ನತ 1
ಕಾತ್ಯಾಯಿನಿ ಸುತ ವಹ್ನಿ ವರ್ಣ ಷಣ್ಮುಖ
ನೀದಾವಾನ್ನಿ ಎನ್ನ ಕಷ್ಟ ಕಲುಷ ಕಾನನಕೆ 2
ವಾಮಸೌಂದರ್ಯೋ ಜ್ವಲನೇ ಧನುಶ್ಶಕ್ತಿ ಧರನೇ ಶರಣು
ಕಾಮದನೇ ಭಯಹರನೇ ಎನಗೆ ದಯವಾಗೋ 4
ಕುಸುಮಭವಪಿತ ಪ್ರಸನ್ನ ಶ್ರೀನಿವಾಸನ
ದಾಸವರಶ್ರೇಷ್ಠನಮೋ ಭರತ ಪ್ರದ್ಯುಮ್ನ 5
|| ಶ್ರೀಮಧ್ವಾಂತರ್ಗತ ಕೃಷ್ಣಾರ್ಪಣಮಸ್ತು ||
***