Showing posts with label ನಿನ್ನ ಮಹಿಮೆಯನಾರು ಬಲ್ಲರು prasannavenkata. Show all posts
Showing posts with label ನಿನ್ನ ಮಹಿಮೆಯನಾರು ಬಲ್ಲರು prasannavenkata. Show all posts

Wednesday, 13 November 2019

ನಿನ್ನ ಮಹಿಮೆಯನಾರು ಬಲ್ಲರು ankita prasannavenkata

by ಪ್ರಸನ್ನವೆಂಕಟದಾಸರು
ನಿನ್ನ ಮಹಿಮೆಯನಾರು ಬಲ್ಲರುಚಿನ್ಮಯಾತ್ಮಕನಂತರೂಪನೆಮುನ್ನೆ ಕಮಲಜ ನಿನ್ನ ನಾಭಿಯೊಳುನ್ನತೋನ್ನತದಿಘನ್ನ ತಪವಂಗೈದು ಕಾಣನುಇನ್ನು ಶ್ರುತಿಸ್ಮøತಿ ಅರಸಿ ಅರಿಯವುಪನ್ನಗೇಂದ್ರನು ಪೊಗಳಲರಿಯ ಪ್ರಸನ್ವೆಂಕಟನೆ 1

ಹರಿಯೆ ತ್ರಿದಶರ ದೊರೆಯೆ ಭಕುತರಸಿರಿಯೆ ದಿತಿಜರರಿಯೆಅನವರತಮರೆಯದಿಹ ಅಜಹರಯತೀಶ್ವರರರಿಯರಿನ್ನುಳಿದಇರವು ಮನುಜ ನಾನರಿಯಲಾಪೆನೆಪೊರೆಯೊ ಬಿಡದೆ ಪ್ರಸನ್ವೆಂಕಟಗಿರಿಯರಸ ಜಗದೆರೆಯ ಸುರವರವರಿಯ ಮಾಸಹನೆ 2

ನಾಗರಿಪುಗಮನಾಗಭೃತಶುಭನಾಗಪಾಕ್ಷಘನಾಗಮನಿಗಮನಾಗಪತಿ ವದನೈಕಸ್ತುತ ಸುಗುಣ ಗುಣಾರ್ಣವನೆನಾಗಹರಸಖ ನಾಗಘನಮಣಿನಾಗಗ್ರಸಿತಭಾ ನಾಗದ್ವಿಟಮುಖನಾಗಧರನುತ ನಾಗಮದಹ ಪ್ರಸನ್ವೆಂಕಟೇಶ 3
********