Showing posts with label ಶ್ರೀಪಾದರಾಯ ಗುರುವೆ vijaya vittala ankita suladi ಶ್ರೀಪಾದರಾಜರ ಸ್ತೋತ್ರ ಸುಳಾದಿ SRIPADARAYA GURUVE SRIPADARAJA STOTRA SULADI. Show all posts
Showing posts with label ಶ್ರೀಪಾದರಾಯ ಗುರುವೆ vijaya vittala ankita suladi ಶ್ರೀಪಾದರಾಜರ ಸ್ತೋತ್ರ ಸುಳಾದಿ SRIPADARAYA GURUVE SRIPADARAJA STOTRA SULADI. Show all posts

Monday, 9 December 2019

ಶ್ರೀಪಾದರಾಯ ಗುರುವೆ vijaya vittala ankita suladi ಶ್ರೀಪಾದರಾಜರ ಸ್ತೋತ್ರ ಸುಳಾದಿ SRIPADARAYA GURUVE SRIPADARAJA STOTRA SULADI


Audio by Mrs. Nandini Sripad

ವಿಜಯದಾಸಾರ್ಯ ವಿರಚಿತ  ಶ್ರೀಪಾದರಾಜರ ಸ್ತೋತ್ರ ಸುಳಾದಿ

 ರಾಗ ತೋಡಿ 

ಧ್ರುವತಾಳ

ಶ್ರೀಪಾದರಾಯ ಗುರುವೆ ಧೃಢಭಕುತಿಯಿಂದ ನಿಮ್ಮ
ಶ್ರೀಪಾದಪದುಮವನ್ನು ನೆರೆನಂಬಿದವನ ಭಾಗ್ಯ
ಆಪಾರವಲ್ಲದೆ ಲೇಶ ಕೊರತೆ ಇಲ್ಲ
ಗೋಪಾದ ಉದಕದೊಳು ರತುನ ದೊರಕಿದಂತೆ
ಪ್ರಾಪುತವಾಗುವದು ಬಾಹೀರಂತರ ಸೌಖ್ಯ
ಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನ
ಆಪಾರ್ಥ ಎನಿಸದು ಪೇಳಿದ ವಚನಂಗಳು
ಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿ
ತಾಪಸಿಯಾಗುವನು ಜನುಮ ಜನುಮ ಬಿಡದೆ
ಗೋಪಾಲಕೃಷ್ಣನ ಗುಣವೆ ಕೊಂಡಾಡುತ
ಆಪಾದಮೌಳಿ ಪರಿಯಂತ ನೋಡುವ ಮಹ -
ಪಾಪ ರಹಿತರಾಗಿ ಸಂಚರಿಸುವರು ನಿತ್ಯ
ಪ್ರಾಪುತವಲ್ಲದೆ ಒಂದಾದರವರಿಗೆ
ಭೂಪಾರ ಬೇಡಿದ ಮನೋರಥಂಗಳು
ಶ್ರೀಪಾದರಾಯ ಶಿರಿ ನಾರಾಯಣ ಯೋಗಿ 
ಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದ
ಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆ
ಪೋಪಾದಲ್ಲದೆ ಅವನ ಆಯುಷ್ಯ ವ್ಯರ್ಥವಾಗಿ
ಭಾಪು ಇವರ ಬಿರುದು ಪೊತ್ತು ತಿರುಗಿದರೆ
ಶಾಪಾದಪಿ ಶರಾದಪಿ ಎನಿಸಿಕೊಂಬ
ದೀಪದ ಬೆಳಕಿನಲ್ಲಿ ಸರ್ವವು ಕಂಡಂತೆ
ವ್ಯಾಪುತದರ್ಶಿಯಾಗಿ ಯೋಗ್ಯತದಂತೆ ಕಾಂಬ
ದ್ವಿಪಾದ ಪಶುಗಾಣೊ ಈ ಮುನಿಯ ನಂಬದವ
ಕೂಪಾರವೆಂಬ ಮಹ ಘೋರದೊಳಗೆ ಇಪ್ಪ
ಆಪತ್ಕಾಲ ಮಿತ್ರ ವಿಜಯವಿಠ್ಠಲರೇಯನ
ವ್ಯಾಪಾರವನ್ನೆ ನೆನೆದು ನಲಿನಲಿದಾಡುವುದು ॥ 1 ॥

ಮಟ್ಟತಾಳ

ಭಕುತಿ ಬೇಕಾದವರು ಇವರ ಪಾದದಲ್ಲಿ
ಸಕಲಕ್ಕಾಗೆ ಇದೇ ಸಾಧ್ಯವೆ ನಮಗೆಂದಾ -
ಸಕುತನಾಗಲಿ ಬೇಕು ರಾಗಂಗಳ ತೊರೆದು
ಮುಕುತಿ ಮಾರ್ಗಕೆ ಇನ್ನು ಯಾತಕೆ ಅನುಮಾನ 
ಕಕ್ಕುಲಾತಿಯಿಂದ ಕಂಡಲ್ಲಿ ತಿರುಗಿ
ಹಕ್ಕಲ ಮನಸಿನಲ್ಲಿ ಕೆಟ್ಟು ಪೋಗದಿರಿ
ಲಕುಮಿರಮಣ ನಮ್ಮ ವಿಜಯವಿಠ್ಠಲರೇಯನ
ಭಕುತರೊಳಗೆ ಮಹಮಹಿಮ ಎನಿಸಿಕೊಂಬಾ ॥ 2 ॥

ತ್ರಿವಿಡಿತಾಳ

ನಂಬಿರೋ ಶ್ರೀಪಾದರಾಯರ ಚರಣವ
ಹಂಬಲಿಸದಿರಿ ಅನ್ಯಮಾರ್ಗ
ತುಂಬಿ ತುಳುಕುತಿಪ್ಪದು ಇಹಪರದ ಭಾಗ್ಯ
ಉಂಬುವದುಡುವದು ಅಡಿಗಡಿಗೆ
ಡಿಂಬದೊಳಗೆ ಹರಿಯ ಧ್ಯಾನಂಗತನಾಗಿ
ಕಾಂಬುವ ಲೇಶ ಪಾಪಂಗಳಿಲ್ಲದೆ
ಗಂಭೀರ ಸಂಸಾರವಾದರೂ ಅದೆ ಅವಗೆ
ಇಂಬುಗೊಡುವದು ವೈದಿಕವೆನಿಸಿ
ಅಂಬುಜಸಖ ತೇಜ ವಿಜಯವಿಠ್ಠಲರೇಯನ
ಬೆಂಬಿಡದೆ ಭಜಿಸಬೇಕು ಈ ಪರಿಯಲ್ಲಿ ॥ 3 ॥

ಅಟ್ಟತಾಳ

ಇವರ ಪ್ರಸಾದವಾದರೆ ವ್ಯಾಸಮುನಿರಾಯ
ಕವಿರಾಯ ಪುರಂದರದಾಸರು ಮೊದಲಾ -
ದವರ ಕರುಣವನ್ನು ಸಿದ್ಧಿಸುವದು ಕೇಳಿ
ನವಭಕುತಿ ಪುಟ್ಟುವದು ವ್ಯಕ್ತವಾಗಿ
ತವಕದಿಂದಲಿ ಚರ್ಮ ದೇಹ ಬರುವದು
ದಿವಿಜರು ಒಲಿದು ಸತ್ಕರ್ಮ ಮಾಡಿಸುವರು 
ಅವಿರುದ್ಧರಾದ ಜನರೆಲ್ಲ ನೆರೆದು ಭಾ -
ಗ್ಯವನು ಬರಲಿ ಎಂದು ಕೊಂಡಾಡುವರು ನಿತ್ಯ
ಶ್ರವಣಕ್ಕೆ ತೋರುವ ವಿಜಯವಿಠ್ಠಲರೇಯನ
ದಿವರಾತ್ರಿಯಲಿ ನೋಡಿ ಸುಜನರ ಕೂಡುವಾ ॥ 4 ॥

ಆದಿತಾಳ

ನರಕ ನರಕದಲ್ಲಿ ಹೊರಳುವ ಆ ಮನುಜ
ಧರೆಯೊಳು ಇವರ ಚರಿತೆ ಒಂದೊಂದದ್ಭುತವಾಗಿ
ನಿರುತದಲ್ಲಿ ನೋಡೆ ತುಂಬಿ ಸೂಸುತಲಿದೆ
ಅರುಣೋದಯದಲೆದ್ದು ಶ್ರೀಪಾದರಾಯರೆಂದು
ಸ್ಮರಿಸಿದ ಮಾನವಂಗೆ ಸರ್ವ ಸಾಧನದಿಂದ
ಪರಮಗತಿ ಆದಂತೆ ಆಗುವದು ಸಿದ್ಧ
ಪರಿಹಾಸವಲ್ಲ ಕೇಳಿ ಅನುಭವ ತಿಳಿದವಗೆ 
ಸುರ ಭೂಸುರರ ಪ್ರಿಯ ವಿಜಯವಿಠ್ಠಲನ
ಕರುಣದಿಂದಲಿ ಮಹ ಉನ್ನತದಲ್ಲಿಪ್ಪರೂ ॥ 5 ॥

ಜತೆ

ಧ್ರುವ ಮರಿಯದಲೆ ಇದನೆ ಓದಿದವಗೆ ಬಂದ
ಭವರೋಗ ಪರಿಹಾರ ವಿಜಯವಿಠ್ಠಲ ವಲಿವಾ ॥
******


ಶ್ರೀಪಾದರಾಜರ ಮೇಲೆ ಸ್ತೋತ್ರ ಸುಳಾದಿ 
ಧ್ರುವತಾಳ
ಶ್ರೀ ಪಾದರಾಯ ಗರುವೆ ಧೃಢಭಕುತಿಯಿಂದ ನಿಮ್ಮ
ಶ್ರೀಪಾದ ದ್ರುಮವನ್ನು ನೆರೆನಂಬಿದವನ ಭಾಗ್ಯ
ಅಪಾರವಲ್ಲದೆ ಲೇಶ ಕೊರತೆ ಇಲ್ಲ
ಗೋಪಾದ ಉದಕದೊಳು ರತುನ ದೊರಕಿದಂತೆ
ಪ್ರಾಪುತವಾಗುವುದು ಬಾಹೀರಂತರ ಸೌಖ್ಯ
ಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನ
ಆಪಾರ್ಥ ಎನಿಸದು ಪೇಳಿದ ವಚನಂಗಳು
ಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿ
ತಾಪಸಿಯಾಗುವನು ಜನುಮಜನುಮದವು ಬಿಡದೆ
ಗೋಪಾಲಕೃಷ್ಣನ ಗುಣವೆ ಕೊಂಡಾಡುತ
ಆಪಾದಮೌಳಿ ಪರಿಯಂತ ನೋಡುವ ಮಹ
ಪಾಪರಹಿತರಾಗಿ ಸಂಚರಿಸುವರು ನಿತ್ಯ
ಪ್ರಾಪುತವಲ್ಲದೆ ಒಂದಾದರವರಿಗೆ
ಭೂಪಾರ ಬೇಡಿದ ಮನೋರಥಂಗಳು
ಶ್ರೀಪಾದರಾಯ ಶಿರಿ ನಾರಾಯಣಯೋಗಿ
ಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದ
ಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆ
ಪೋಪಾದಲ್ಲದೆ ಅವನ ಆಯುಷ್ಯ ವ್ಯರ್ಥವಾಗಿ
ಭಾಪು ಇವರ ಬಿರುದು ಪೊತ್ತು ತಿರುಗಿದರೆ
ಶಾಪಾದಪಿಶರಾದಪಿ ಎನಿಸಿಕೊಂಬ
ದೀಪದ ಬೆಳಕಿನಲ್ಲಿ ಸರ್ವವು ಕಂಡಂತೆ
ವ್ಯಾಪುತದರ್ಶಿಯಾಗಿ ಯೋಗ್ಯತದಂತೆ ಕಾಂಬ
ದ್ವಿಪಾದ ಪಶುಗಾಣೊ ಈ ಮುನಿಯ ನಂಬದವ
ಕೂಪಾರವೆಂಬ ಮಹ ಘೋರದೊಳಗೆ ಇಪ್ಪ
ಆಪತ್ಕಾಲ ಬತ್ತಿ ವಿಜಯ ವಿಠ್ಠಲರೇಯನ
ವ್ಯಾಪಾರವನ್ನೆ ನೆನೆದು ನಲಿನಲಿದಾಡುವ ||1||

ಮಟ್ಟತಾಳ
ಭಕುತಿ ಬೇಕಾದವರು ಇವರ ಪಾದದಲ್ಲಿ
ಸಕಲಕಾಗಿ ಇದೇ ಸಾಧ್ಯವೆ ನಮಗೆಂದು
ಸಕುತನಾಗಲಿ ಬೇಕು ರಾಗಂಗಳ ತೊರೆದು
ಮುಕುತಿ ಮಾರ್ಗಕೆ ಇನ್ನು ಯಾತಕೆ ಅನುಮಾನ
ಕಕುಲಾತಿಯಿಂದ ಕಂಡಲ್ಲಿ ತಿರುಗಿ
ಹಕ್ಕಲ ಮನಸಿನಲ್ಲಿ ಕೆಟ್ಟುಪೋಗದಿರಿ
ಲಕುಮಿರಮಣ ನಮ್ಮ ವಿಜಯವಿಠಲರೇಯನ
ಭಕುತರೊಳಗೆ ಮಹಮಹಿಮ ಎನಿಸಿಕೊಂಬ||2||

ತ್ರಿವಿಡಿತಾಳ
ನಂಬಿರೋ ಶ್ರೀಪಾದರಾಯರ ಚರಣವ
ಹಂಬಲಿಸದಿರಿ ಅನ್ಯಮಾರ್ಗ
ತುಂಬಿ ತುಳುಕುತಿಪ್ಪುದು ಇಹಪರದ ಭಾಗ್ಯ
ಉಂಬುವುದುಡುವದು ಅಡಿಗಡಿಗೆ
ಡಿಂಬದೊಳಗೆ ಹರಿಯ ಧ್ಯಾನಂಗತವಾಗಿ
ಕಾಂಬುವ ಲೇಶ ಪಾಪಂಗಳಿಲ್ಲದೆ
ಗಂಭೀರ ಸಂಸಾರವಾದುದು ಅದೆ ಅವಗೆ
ಇಂಬುಗೊಡುವುದು ವೈದೀಕವೆನಿಸಿ
ಅಂಬುಜಸಖ ತೇಜ ವಿಜಯವಿಠ್ಠಲರೇಯ
ಬೆಂಬಿಡದೆ ಭಜಿಸಬೇಕು ಈ ಪರಿಯಲ್ಲಿ||3||

ಅಟ್ಟತಾಳ
ಇವರ ಪ್ರಸಾದವಾದರೆ ವ್ಯಾಸ ಮುನಿರಾಯ
ಕವಿರಾಯ ಪುರಂದರದಾಸರು ಮೊದಲಾ
ದವರ ಕರುಣವದು ಸಿದ್ಧಿಸುವುದು ಕೇಳಿ
ನವಭಕುತಿ ಪುಟ್ಟುವುದು ವ್ಯಕ್ತವಾಗಿ
ತವಕದಿಂದಲಿ ಚರಮ ದೇಹ ಬರುವುದು
ದಿವಿಜರು ಒಲಿದು ಸತ್ಕರ್ಮ ಮಾಡಿಸುವರು
ಸುವಿರುದ್ಧವಾದ ಜನರೆಲ್ಲ ನೆರೆದು ಭಾ
ಗ್ಯವನು ಬರಲಿ ಎಂದು ಕೊಂಡಾಡುವರು ನಿತ್ಯ
ಶ್ರವಣಕ್ಕೆ ತೋರುವ ವಿಜಯವಿಠ್ಠಲರೇಯನ
ದಿವಾರಾತ್ರಿಯಲಿ ನೊಡಿ ಸುಜನರ ಕೊಡುವಾ||4||

ಆದಿತಾಳ
ನರಕ ನರಕದಲ್ಲಿ ಹೊರಳುವ ಆ ಮನುಜ
ಧರೆಯೊಳು ಇವರ ಚರಿತೆ ಒಂದೊಂದದ್ಭುತವಾಗಿ
ನಿರುತದಲ್ಲಿ ನೋಡೆ ತುಂಬಿ ಸೂಸುತಲಿದೆ
ಅರುಣೋದಯದಲೆದ್ದು ಶ್ರೀ ಪಾದರಾಯರೆಂದು
ಸ್ಮರಿಸಿದ ಮಾನವಂಗೆ ಸರ್ವಸಾಧನದಿಂದ
ಮರಮಗತಿಯಾದಂತೆ ಆಗುವದು ಸಿದ್ಧ
ಪರಿಹಾಸವಲ್ಲ ಕೇಳಿ ಪ್ರೀಯ ವಿಜಯ ವಿಠಲನೆ
ಕರುಣದಿಂದಲಿ ಮಹ ಉನ್ನತದಲ್ಲಿಪ್ಪರೊ||5||

ಜತೆ
ಧ್ರುವ ಮರಿಯದಲೆ ಇದನೆ ಓದಿದವಗೆ ಬಂದ
ಭವರೋಗ ಪರಿಹಾರ ವಿಜಯವಿಠಲ ಒಲಿವಾ||6||

************