RESTART MOBILE IF AUDIO IS NOT PLAYING
CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama/ CLICK-> HOME
ಉಮಾ ಕಾತ್ಯಾಯಿಣಿ ಗೌರಿ ದಾಕ್ಷಾಯಣಿ
ಹಿಮವಂತ ಗಿರಿಯ ಕುಮಾರಿ
||ಉಮಾ||
ರಮೆಯರಸನಪದಕಮಲಮದುಪೆನಿತ್ಯ
ಅಮರವಂದಿತೆಗಜಗಮನೆ ಭವಾನಿ
ಭವಾನಿ...ಭವಾನಿ... ||ಉಮಾ||
ಫನ್ನಗಧರನ ರಾಣಿ ಪರಮಪಾವಣಿ
ಪುಣ್ಯ ಫಲ ಪ್ರದಾಯಿಣೀ
ಫನ್ನಗವೇಣಿ ಶರ್ವಾಣಿ ಕೋಕಿಲವಾಣಿ
ಉನ್ನತ ಗುಣಗಳ ಶ್ರೇಣಿ
ಎನ್ನ ಮನದ ಅಭಿಮಾನಿ ದೇವತೆಯೆ
ಸ್ವರ್ಣಗಿರಿಸಂಪನ್ನಭಾಗ್ಯ ನಿದಿ
ನಿನ್ನ ಮಹಿಮೆಯನು ಭಿನ್ನಹದಲಿ ನಾ
ಬಣ್ಣಿಸಲಳವೆ ಪ್ರಸನ್ನವದನಳೆ
||ಉಮಾ||
ಮುತ್ತಿನ ಪದಕಹಾರ ಮೋಹನಸರ
ಉತ್ತಮಾಂಗದಲಂಕಾರ
ಜೊತ್ಯಾಗೆ ಇಟ್ಟ ಪಂಜರದೋಲೆ ವಯ್ಯಾರ
ರತ್ನ ಕಂಕಣದುಂಗುರಾ
ತೆತ್ತಿಸಕೋಟಿ ದೇವತೆಗಳ ಪೊಗಳುತ
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ
ಸುತ್ತಲು ಆಡುವ ನರ್ತನ ಸಂದಣಿ
ಎತ್ತ ನೋಡಿದರೈ ತತ್ತೈ ವಾದ್ಯ
||ಉಮಾ||
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ
ತಳಿಪ ಮೂಗುತಿ ನಾಸಿಕಾ
ತಳಿತ ಮಳ್ಳಿಗೆ ಗಂಧಿಕ ಮುಡಿದ ಸೂಸುಕ
ತಲೆಭುಜ ಕೀರ್ತಿಪಾಟಿಕ
ಇಳೆಯೊಳು ಮಧುರಪುರದೊಳು ವಾಸಳೆ
ಅಲಗಿರಿವಿಜಯವಿಠ್ಠಲನ ಕೊಂಡಾಡುವ
ಸುಲಭ ಜನರಿಗೆಲ್ಲ ಒಳಿದು ಮತಿಯನೀವ
ಗಿರಿಕರ ಶೋಭಿತೆ ಪರಮ ಮಂಗಳೆಯೆ
||ಉಮಾ||
***
Umā kātyāyiṇi gauri dākṣāyaṇi |
Himavanta giriya kumāri ||
Rameyarasanapada kamalamadupe nitya |
Amaravandite gajagamane bhavāni ||
Phannagadharana rāṇi paramapāvaṇi |
Puṇya phala pradāyiṇī ||
Enna manada abhimāni dēvataye |
Ninna mahimeyanu baṇṇisalalive ||
Muttina padakahāra mōhanasara |
Uttamāngadalaṅkāra ||
Tettisakōṭi dēvategaḷa pogaḷuta |
Suttalu āḍuva nartana sandaṇi ||
Poḷeva vasana kañchuka kastūri tilaka |
Taḷipa mūguti nāsikā ||
Alagiri vijayaviṭhalana koṇḍāḍuva |
Sulabha janarigella oḷidu matiyanīva ||
***
Pronunciation Guide
Retroflex Sounds (ḍ, ḷ, ṇ, ṣ, ṭ): These are produced by curling the tip of your tongue back against the roof of the mouth; they are distinct from the soft 'd', 'l', 'n', 's', and 't' sounds.
Aspirated Consonants: Letters like 'dh' in "Udhō" or 'gh' in "Ghalisi" require a soft puff of air immediately following the consonant.
The 'J' and 'Ch' Sounds: Use 'j' as in "jump" and 'ch' as in "chair"; the 'ś' sound is similar to the soft "sh" in "shoe."
Rhythmic Flow: Maintain a consistent, steady tempo; in Kannada devotional singing, the final syllable of each phrase is often slightly elongated to match the musical meter.
***
Summary (Kannada)
ವಿಜಯದಾಸರು ರಚಿಸಿರುವ ಈ ಸುಂದರ ಕೀರ್ತನೆಯು ಪಾರ್ವತೀದೇವಿಯ ವೈಭವವನ್ನು ವರ್ಣಿಸುತ್ತದೆ. ದೇವಿಯು ಹಿಮವಂತನ ಪುತ್ರಿಯಾಗಿ, ಶಿವನ ಪತ್ನಿಯಾಗಿ ಹೇಗೆ ಭಕ್ತರಿಗೆ ಅನುಗ್ರಹ ನೀಡುತ್ತಾಳೆ ಎಂಬುದನ್ನು ಇಲ್ಲಿ ಚಿತ್ರಿಸಲಾಗಿದೆ. ಆಕೆಯ ಆಭರಣಗಳು, ನೃತ್ಯ ಮತ್ತು ಆಕೆಯ ದಿವ್ಯ ರೂಪವನ್ನು ವರ್ಣಿಸುತ್ತಾ, ವಿಜಯವಿಠ್ಠಲನ ಭಕ್ತರಿಗೆ ಸಕಲ ಸೌಭಾಗ್ಯಗಳನ್ನು ನೀಡುವ ಅವಳು ಪರಮ ಮಂಗಳ ಸ್ವರೂಪಿಣಿ ಎಂದು ದಾಸರು ಸ್ತುತಿಸಿದ್ದಾರೆ.
Padyada Artha (Kannada)
ಪಲ್ಲವಿ:
ಉಮಾ ಕಾತ್ಯಾಯಿಣಿ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ||
ಅರ್ಥ: ಉಮಾ, ಕಾತ್ಯಾಯಿಣಿ, ಗೌರಿ, ದಾಕ್ಷಾಯಣಿ ಎಂಬಿತ್ಯಾದಿ ನಾಮಗಳಿಂದ ಕರೆಯಲ್ಪಡುವವಳೇ, ನೀನು ಹಿಮವಂತನ ಮಗಳು.
ಚರಣ 1:
ರಮೆಯರಸನ ಪದಕಮಲ ಮದುಪೆ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ||
ಅರ್ಥ: ಶ್ರೀಹರಿಯ ಪಾದಕಮಲಗಳಲ್ಲಿ ಭಕ್ತಿ ಇಟ್ಟಿರುವವಳು, ದೇವತೆಗಳಿಂದ ಪೂಜಿಸಲ್ಪಡುವವಳು, ಆನೆಯಂತೆ ಗಂಭೀರ ನಡಿಗೆಯ ಭವಾನಿ ನೀನು.
ಚರಣ 2:
ಫನ್ನಗಧರನ ರಾಣಿ ಪರಮಪಾವಣಿ | ಪುಣ್ಯ ಫಲ ಪ್ರದಾಯಿಣೀ ||
ಎನ್ನ ಮನದ ಅಭಿಮಾನಿ ದೇವತೆಯೆ | ನಿನ್ನ ಮಹಿಮೆಯನು ಬಣ್ಣಿಸಲಳವೆ ||
ಅರ್ಥ: ಶಿವನ ಪತ್ನಿಯೇ, ನೀನು ಅತ್ಯಂತ ಪವಿತ್ರಳು ಮತ್ತು ಪುಣ್ಯಗಳನ್ನು ನೀಡುವವಳು. ನನ್ನ ಮನಸ್ಸಿನ ದೇವತೆಯಾದ ನಿನ್ನ ಮಹಿಮೆಯನ್ನು ವರ್ಣಿಸಲು ಯಾರಿಂದ ಸಾಧ್ಯ?
ಚರಣ 3:
ಮುತ್ತಿನ ಪದಕಹಾರ ಮೋಹನಸರ | ಉತ್ತಮಾಂಗದಲಂಕಾರ ||
ತೆತ್ತಿಸಕೋಟಿ ದೇವತೆಗಳ ಪೊಗಳುತ | ಸುತ್ತಲು ಆಡುವ ನರ್ತನ ಸಂದಣಿ ||
ಅರ್ಥ: ಮುತ್ತಿನ ಹಾರಗಳನ್ನು ಧರಿಸಿರುವ ತಾಯಿ, ನಿನ್ನನ್ನು ಕೋಟಿ ದೇವತೆಗಳು ಸ್ತುತಿಸುತ್ತಿದ್ದಾರೆ. ನಿನ್ನ ಸುತ್ತಲೂ ನೃತ್ಯ ಸಂಭ್ರಮವು ಕಂಗೊಳಿಸುತ್ತಿದೆ.
ಚರಣ 4:
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ | ತಳಿಪ ಮೂಗುತಿ ನಾಸಿಕಾ ||
ಅಲಗಿರಿ ವಿಜಯವಿಠ್ಠಲನ ಕೊಂಡಾಡುವ | ಸುಲಭ ಜನರಿಗೆಲ್ಲ ಒಳಿದು ಮತಿಯನೀವ ||
ಅರ್ಥ: ಸುಂದರ ವಸ್ತ್ರ, ಕಸ್ತೂರಿ ತಿಲಕ ಧರಿಸಿದವಳೇ, ವಿಜಯವಿಠ್ಠಲನ ಭಕ್ತರಿಗೆ ನೀನು ಒಲಿದು ಸದ್ಬುದ್ಧಿಯನ್ನು ನೀಡುತ್ತೀಯೆ.
***
Summary (English)
This song by Vijaya Dasaru describes the divine glory of Goddess Parvati. She is addressed by various names like Uma, Katyayani, and Gauri. The poet marvels at her beauty, divine ornaments, and the grand atmosphere where gods surround her with music and dance. She is portrayed as the compassionate mother who blesses the devotees of Vijaya Vittala with wisdom and prosperity.
Meaning (English)
Pallavi:
Uma katyayani gauri dakshayani | Himavanta giriya kumari
Meaning: O Uma, Katyayani, Gauri, Dakshayani, You are the daughter of the Himavan mountain.
Stanza 1:
Rameyarasanapada kamalamadupe nitya | Amaravandite gajagamane bhavani
Meaning: You are always devoted to the lotus feet of Lord Vishnu, worshipped by gods, and walk with the grace of an elephant, O Bhavani.
Stanza 2:
Phannagadharana rani paramapavani | Punyaphala pradayini || Enna manada abhimani devateye | Ninna mahimeyanu bannisalalive
Meaning: O Queen of Shiva (the one who wears serpents), You are the purest and bestower of merit. O my beloved deity, who can describe Your greatness?
Stanza 3:
Muttina padakahara mohanasara | Uttamangadalamkara || Tettisakoti devategala pogaluta | Suttalu aduva nartana sandani
Meaning: Adorned with pearl necklaces and beautiful jewelry, You are surrounded by thirty-three crore deities who praise You with dance and music.
Stanza 4:
Poleva vasana kanchuka kasturi tilaka | Talipa muguti nasika || Alagiri vijayaviththalana kondaduva | Sulabha janarigella olidu matiyaniva
Meaning: Dressed in shining garments and wearing a kasturi tilaka, You bestow grace and wisdom upon those who praise Alagiri Vijaya Vittala.
***
Uma Kathyayani gowri dhakshayaani
heemaavantha giriya kumaari|
ramayerasa padha kamala madhupe nitya
amara vandhitha gaja gamane bavaani||
pannakadharana raani parama paavani
punya pala prathayini
pannaga veni sarvaani gokila vaani
unnadha gunadha susroni
enna manadha abhimani devateya
svarna giri sampanna baghya nidhi
ninna mahima yannu binnana dhali na
bannisalalave prasanna vadhanale||1||
mutthina padhaka haara mohanna sara
uttamaangadha lankaara
jatthagi yutta panjara dhole oyyara
rathna kankana dhungura
thetthila koti devathegalu pogalutha
satthige samara vetthi hidiyuthire
sutthalu aduva nardhana sandhani
ettha nodi tharathha thathai vaadhya||2||
poleva vasana kanjuka kasthuri tilaka
dalipa mukuthi naasiga
dhalidammalige gandhiga mudidha susuka
salebuja keerthi naasika
ilayolu madhuraapuradholu vaasane
alagiri vijaya vittalana kondaduva
sulapajanari gella olidhu madhiya neeve
kilikara sobhithe parama mangalahe||3||
***
ಪಾರ್ವತೀದೇವಿ
ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ |
ಹಿಮವಂತ ಗಿರಿಯ ಕುಮಾರಿ ಪ
ನಿತ್ಯ |
ಅಮರವಂದಿತೆ ಗಜಗಮನೆ ಭವಾನಿ ಅ. ಪ.
ಪನ್ನಗಧರನ ರಾಣಿ ಪರಮಪಾವನಿ |
ಪುಣ್ಯಫಲ ಪ್ರದಾಯಿನಿ ||
ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ |
ಉನ್ನತ ಗುಣಗಣ ಶ್ರೇಣಿ |
ಎನ್ನ ಮನದ ಅಭಿಮಾನ ದೇವತೆಯೆ |
ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ ||
ನಿನ್ನ ಮಹಿಮೆಯನು ಬಿನ್ನಾಣದಲಿ ನಾ |
ಬಣ್ಣಿಸಲಳವೆ ಪ್ರಸನ್ನ ವದನಳೆ 1
ಮುತ್ತಿನ ಪದಕ ಹಾರ ಮೋಹನ ಸರ |
ಉತ್ತಮಾಂಗದಲಂಕಾರ ||
ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ |
ರತ್ನಕಂಕಣದುಂಗುರ ||
ತೆತ್ತೀಸ ಕೋಟಿ ದೇವತೆಗಳ್ ಪೊಗಳುತ |
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ ||
ಸುತ್ತಲು ಆಡುವ ನರ್ತನ ಸಂದಣಿ |
ಎತ್ತ ನೋಡಿದರತ್ತ ಕಥ್ಥೈ ವಾದ್ಯ2
ಕಂಚುಕ ತಿಲಕ |
ನಾಸಿಕ ||
ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ |
ಸಲೆ ಭುಜ ಕೀರ್ತಿಪಾಠಿಕ ||
ಇಳೆಯೊಳು ಮಧುರಾ ಪೊಳಲೊಳು ವಾಸಳೆ |
ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ ||
ಸುಲಭ ಜನರಿಗೆಲ್ಲ ಒಲಿದು ಮತಿಯನೀವ |
ಗಳಿಕರ ಶೋಭಿತೆ ಪರಮಮಂಗಳ ಹೇ 3
*****
ಪನ್ನಗಧರನ ರಾಣಿ ಪರಮಪಾವನೀ ಪುಣ್ಯಫಲಪ್ರದಾಯಿನೀ
ಮುತ್ತಿನಪದಕ ಹಾರ ಮೋಹನ್ನಸರ ಉತ್ತಮಾಂಗದಲಂಕಾರ
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ ಥಳಿಪ ಮೂಗುತಿ ನಾಸಿಕ
pallavi
umA kArtyAyanI gaurI dAkSAyaNi himavanta giriya kumAri
anupallavi
ramayarasana padakalama madhupe nitya amaravandite gajagamane bhavAnI
caraNam 1
pannagadharana rANi parama pAvanI puNya phalapradAyini
pannagavENI sharvANI kOkilavANI unnata guNagaNa shrENi
enna manada abhimAnI dEvateyE svarNagiri sampannE bhAgyanidhE
ninna mahimeyanu bhinnANadali nA baNNi salaLve prasannavadanaLe
caraNam 2
muttina padaka hAra mOhana sara uttamAngadalankAra
jattAgi iTTa panjaradOle oyyAra ratna kankaNadungura
tettIsakOTi dEvategaL pogaLuta sattige cAmaravetti tiDiyutire
suttalu Aluva nartana sandaNi etta nODidaratta tatthai vAdya
caraNam 3
oLeva vasana kancuka kastUri tilaka thaLipa mUguti nAsika
taLita mallige gandhika muDida sUsukha salebhuja kIrti mANika
iLeyoLu madhureya poLala vAsaLe aLigiri vijayaviThalana koNDADuva
sulabha janarigeyella olidu matiye nIvE shrIkara shObhite parama mangaLe hE
***
ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ |
ಹಿಮವಂತ ಗಿರಿಯ ಕುಮಾರಿ ಪ
ನಿತ್ಯ |
ಅಮರವಂದಿತೆ ಗಜಗಮನೆ ಭವಾನಿ ಅ. ಪ.
ಪನ್ನಗಧರನ ರಾಣಿ ಪರಮಪಾವನಿ |
ಪುಣ್ಯಫಲ ಪ್ರದಾಯಿನಿ ||
ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ |
ಉನ್ನತ ಗುಣಗಣ ಶ್ರೇಣಿ |
ಎನ್ನ ಮನದ ಅಭಿಮಾನ ದೇವತೆಯೆ |
ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ ||
ನಿನ್ನ ಮಹಿಮೆಯನು ಬಿನ್ನಾಣದಲಿ ನಾ |
ಬಣ್ಣಿಸಲಳವೆ ಪ್ರಸನ್ನ ವದನಳೆ 1
ಮುತ್ತಿನ ಪದಕ ಹಾರ ಮೋಹನ ಸರ |
ಉತ್ತಮಾಂಗದಲಂಕಾರ ||
ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ |
ರತ್ನಕಂಕಣದುಂಗುರ ||
ತೆತ್ತೀಸ ಕೋಟಿ ದೇವತೆಗಳ್ ಪೊಗಳುತ |
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ ||
ಸುತ್ತಲು ಆಡುವ ನರ್ತನ ಸಂದಣಿ |
ಎತ್ತ ನೋಡಿದರತ್ತ ಕಥ್ಥೈ ವಾದ್ಯ2
ಕಂಚುಕ ತಿಲಕ |
ನಾಸಿಕ ||
ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ |
ಸಲೆ ಭುಜ ಕೀರ್ತಿಪಾಠಿಕ ||
ಇಳೆಯೊಳು ಮಧುರಾ ಪೊಳಲೊಳು ವಾಸಳೆ |
ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ ||
ಸುಲಭ ಜನರಿಗೆಲ್ಲ ಒಲಿದು ಮತಿಯನೀವ |
ಗಳಿಕರ ಶೋಭಿತೆ ಪರಮಮಂಗಳ ಹೇ 3
*****
ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ
ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ
ಪನ್ನಗಧರನ ರಾಣಿ ಪರಮಪಾವನೀ ಪುಣ್ಯಫಲಪ್ರದಾಯಿನೀ
ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನಂತಗುಣಗಣ ಶ್ರೇಣಿ
ಎನ್ನ ಮನದ ಅಭಿಮಾನಿ ದೇವತೆಯೇ ಸ್ವರ್ಣಗಿರಿ ಸಂಪನ್ನೆ ಭಾಗ್ಯನಿಧಿ
ನಿನ್ನ ಮಹಿಮೆಯ ನಾ ಬಿನ್ನಾಣದಲ್ಲಿ ಬಣ್ಣಿಸಲಸಳವೇ ಪ್ರಸನ್ನವದನಳೇ
ಮುತ್ತಿನಪದಕ ಹಾರ ಮೋಹನ್ನಸರ ಉತ್ತಮಾಂಗದಲಂಕಾರ
ಜೊತ್ಯಾಗಿಟ್ಟ ಪಂಜರದೋಲೆ ಒಯ್ಯಾರ ರತ್ನಕಂಕಣದುಂಗುರ
ತೆತ್ತೀಸಕೋಟಿ ದೇವತೆಗಳು ಪೊಗಳುತ ಸತ್ತಿಗೆ ಚಾಮರವೆತ್ತಿ ಪಿಡಿಯುತಿರೇ
ಸುತ್ತಲೂ ಆಡುವ ನರ್ತನಸಂದಣಿ ಎತ್ತ ನೋಡಿದರತ್ತ ತತ್ಥೈವಾದ್ಯ
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ ಥಳಿಪ ಮೂಗುತಿ ನಾಸಿಕ
ತಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ ಸಲೇ ಭುಜಕೀರ್ತಿಪಾಠಿಕ
ಇಳೆಯೊಳು ಮಧುರಪೊಳಲೊಳುವಾಸಳೇ ಅಳಗಿರಿ ವಿಜಯವಿಟ್ಠಲನ ಕೊಂಡಾಡುವ
ಸುಲಭ ಜನರಿಗೆ ಒಲಿದು ಮತಿವ ಕೊಡುವ ಗಿಳಿಕರ ಶೋಭಿತೇ ಪರಮಮಂಗಳೇ ಹೇ
**********