ಉಮಾ ಕಾತ್ಯಾಯಿಣಿ ಗೌರಿ ದಾಕ್ಷಾಯಣಿ
ಹಿಮವಂತ ಗಿರಿಯ ಕುಮಾರಿ
||ಉಮಾ||
ರಮೆಯರಸನಪದಕಮಲಮದುಪೆನಿತ್ಯ
ಅಮರವಂದಿತೆಗಜಗಮನೆ ಭವಾನಿ
ಭವಾನಿ...ಭವಾನಿ... ||ಉಮಾ||
ಫನ್ನಗಧರನ ರಾಣಿ ಪರಮಪಾವಣಿ
ಪುಣ್ಯ ಫಲ ಪ್ರದಾಯಿಣೀ
ಫನ್ನಗವೇಣಿ ಶರ್ವಾಣಿ ಕೋಕಿಲವಾಣಿ
ಉನ್ನತ ಗುಣಗಳ ಶ್ರೇಣಿ
ಎನ್ನ ಮನದ ಅಭಿಮಾನಿ ದೇವತೆಯೆ
ಸ್ವರ್ಣಗಿರಿಸಂಪನ್ನಭಾಗ್ಯ ನಿದಿ
ನಿನ್ನ ಮಹಿಮೆಯನು ಭಿನ್ನಹದಲಿ ನಾ
ಬಣ್ಣಿಸಲಳವೆ ಪ್ರಸನ್ನವದನಳೆ
||ಉಮಾ||
ಮುತ್ತಿನ ಪದಕಹಾರ ಮೋಹನಸರ
ಉತ್ತಮಾಂಗದಲಂಕಾರ
ಜೊತ್ಯಾಗೆ ಇಟ್ಟ ಪಂಜರದೋಲೆ ವಯ್ಯಾರ
ರತ್ನ ಕಂಕಣದುಂಗುರಾ
ತೆತ್ತಿಸಕೋಟಿ ದೇವತೆಗಳ ಪೊಗಳುತ
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ
ಸುತ್ತಲು ಆಡುವ ನರ್ತನ ಸಂದಣಿ
ಎತ್ತ ನೋಡಿದರೈ ತತ್ತೈ ವಾದ್ಯ
||ಉಮಾ||
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ
ತಳಿಪ ಮೂಗುತಿ ನಾಸಿಕಾ
ತಳಿತ ಮಳ್ಳಿಗೆ ಗಂಧಿಕ ಮುಡಿದ ಸೂಸುಕ
ತಲೆಭುಜ ಕೀರ್ತಿಪಾಟಿಕ
ಇಳೆಯೊಳು ಮಧುರಪುರದೊಳು ವಾಸಳೆ
ಅಲಗಿರಿವಿಜಯವಿಠ್ಠಲನ ಕೊಂಡಾಡುವ
ಸುಲಭ ಜನರಿಗೆಲ್ಲ ಒಳಿದು ಮತಿಯನೀವ
ಗಿರಿಕರ ಶೋಭಿತೆ ಪರಮ ಮಂಗಳೆಯೆ
||ಉಮಾ||
***
Uma Kathyayani gowri dhakshayaani
heemaavantha giriya kumaari|
ramayerasa padha kamala madhupe nitya
amara vandhitha gaja gamane bavaani||
pannakadharana raani parama paavani
punya pala prathayini
pannaga veni sarvaani gokila vaani
unnadha gunadha susroni
enna manadha abhimani devateya
svarna giri sampanna baghya nidhi
ninna mahima yannu binnana dhali na
bannisalalave prasanna vadhanale||1||
mutthina padhaka haara mohanna sara
uttamaangadha lankaara
jatthagi yutta panjara dhole oyyara
rathna kankana dhungura
thetthila koti devathegalu pogalutha
satthige samara vetthi hidiyuthire
sutthalu aduva nardhana sandhani
ettha nodi tharathha thathai vaadhya||2||
poleva vasana kanjuka kasthuri tilaka
dalipa mukuthi naasiga
dhalidammalige gandhiga mudidha susuka
salebuja keerthi naasika
ilayolu madhuraapuradholu vaasane
alagiri vijaya vittalana kondaduva
sulapajanari gella olidhu madhiya neeve
kilikara sobhithe parama mangalahe||3||
***
ಪಾರ್ವತೀದೇವಿ
ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ |
ಹಿಮವಂತ ಗಿರಿಯ ಕುಮಾರಿ ಪ
ನಿತ್ಯ |
ಅಮರವಂದಿತೆ ಗಜಗಮನೆ ಭವಾನಿ ಅ. ಪ.
ಪನ್ನಗಧರನ ರಾಣಿ ಪರಮಪಾವನಿ |
ಪುಣ್ಯಫಲ ಪ್ರದಾಯಿನಿ ||
ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ |
ಉನ್ನತ ಗುಣಗಣ ಶ್ರೇಣಿ |
ಎನ್ನ ಮನದ ಅಭಿಮಾನ ದೇವತೆಯೆ |
ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ ||
ನಿನ್ನ ಮಹಿಮೆಯನು ಬಿನ್ನಾಣದಲಿ ನಾ |
ಬಣ್ಣಿಸಲಳವೆ ಪ್ರಸನ್ನ ವದನಳೆ 1
ಮುತ್ತಿನ ಪದಕ ಹಾರ ಮೋಹನ ಸರ |
ಉತ್ತಮಾಂಗದಲಂಕಾರ ||
ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ |
ರತ್ನಕಂಕಣದುಂಗುರ ||
ತೆತ್ತೀಸ ಕೋಟಿ ದೇವತೆಗಳ್ ಪೊಗಳುತ |
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ ||
ಸುತ್ತಲು ಆಡುವ ನರ್ತನ ಸಂದಣಿ |
ಎತ್ತ ನೋಡಿದರತ್ತ ಕಥ್ಥೈ ವಾದ್ಯ2
ಕಂಚುಕ ತಿಲಕ |
ನಾಸಿಕ ||
ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ |
ಸಲೆ ಭುಜ ಕೀರ್ತಿಪಾಠಿಕ ||
ಇಳೆಯೊಳು ಮಧುರಾ ಪೊಳಲೊಳು ವಾಸಳೆ |
ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ ||
ಸುಲಭ ಜನರಿಗೆಲ್ಲ ಒಲಿದು ಮತಿಯನೀವ |
ಗಳಿಕರ ಶೋಭಿತೆ ಪರಮಮಂಗಳ ಹೇ 3
*****
ಪನ್ನಗಧರನ ರಾಣಿ ಪರಮಪಾವನೀ ಪುಣ್ಯಫಲಪ್ರದಾಯಿನೀ
ಮುತ್ತಿನಪದಕ ಹಾರ ಮೋಹನ್ನಸರ ಉತ್ತಮಾಂಗದಲಂಕಾರ
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ ಥಳಿಪ ಮೂಗುತಿ ನಾಸಿಕ
pallavi
umA kArtyAyanI gaurI dAkSAyaNi himavanta giriya kumAri
anupallavi
ramayarasana padakalama madhupe nitya amaravandite gajagamane bhavAnI
caraNam 1
pannagadharana rANi parama pAvanI puNya phalapradAyini
pannagavENI sharvANI kOkilavANI unnata guNagaNa shrENi
enna manada abhimAnI dEvateyE svarNagiri sampannE bhAgyanidhE
ninna mahimeyanu bhinnANadali nA baNNi salaLve prasannavadanaLe
caraNam 2
muttina padaka hAra mOhana sara uttamAngadalankAra
jattAgi iTTa panjaradOle oyyAra ratna kankaNadungura
tettIsakOTi dEvategaL pogaLuta sattige cAmaravetti tiDiyutire
suttalu Aluva nartana sandaNi etta nODidaratta tatthai vAdya
caraNam 3
oLeva vasana kancuka kastUri tilaka thaLipa mUguti nAsika
taLita mallige gandhika muDida sUsukha salebhuja kIrti mANika
iLeyoLu madhureya poLala vAsaLe aLigiri vijayaviThalana koNDADuva
sulabha janarigeyella olidu matiye nIvE shrIkara shObhite parama mangaLe hE
***
ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ |
ಹಿಮವಂತ ಗಿರಿಯ ಕುಮಾರಿ ಪ
ನಿತ್ಯ |
ಅಮರವಂದಿತೆ ಗಜಗಮನೆ ಭವಾನಿ ಅ. ಪ.
ಪನ್ನಗಧರನ ರಾಣಿ ಪರಮಪಾವನಿ |
ಪುಣ್ಯಫಲ ಪ್ರದಾಯಿನಿ ||
ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ |
ಉನ್ನತ ಗುಣಗಣ ಶ್ರೇಣಿ |
ಎನ್ನ ಮನದ ಅಭಿಮಾನ ದೇವತೆಯೆ |
ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ ||
ನಿನ್ನ ಮಹಿಮೆಯನು ಬಿನ್ನಾಣದಲಿ ನಾ |
ಬಣ್ಣಿಸಲಳವೆ ಪ್ರಸನ್ನ ವದನಳೆ 1
ಮುತ್ತಿನ ಪದಕ ಹಾರ ಮೋಹನ ಸರ |
ಉತ್ತಮಾಂಗದಲಂಕಾರ ||
ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ |
ರತ್ನಕಂಕಣದುಂಗುರ ||
ತೆತ್ತೀಸ ಕೋಟಿ ದೇವತೆಗಳ್ ಪೊಗಳುತ |
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ ||
ಸುತ್ತಲು ಆಡುವ ನರ್ತನ ಸಂದಣಿ |
ಎತ್ತ ನೋಡಿದರತ್ತ ಕಥ್ಥೈ ವಾದ್ಯ2
ಕಂಚುಕ ತಿಲಕ |
ನಾಸಿಕ ||
ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ |
ಸಲೆ ಭುಜ ಕೀರ್ತಿಪಾಠಿಕ ||
ಇಳೆಯೊಳು ಮಧುರಾ ಪೊಳಲೊಳು ವಾಸಳೆ |
ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ ||
ಸುಲಭ ಜನರಿಗೆಲ್ಲ ಒಲಿದು ಮತಿಯನೀವ |
ಗಳಿಕರ ಶೋಭಿತೆ ಪರಮಮಂಗಳ ಹೇ 3
*****
ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ
ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ
ಪನ್ನಗಧರನ ರಾಣಿ ಪರಮಪಾವನೀ ಪುಣ್ಯಫಲಪ್ರದಾಯಿನೀ
ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನಂತಗುಣಗಣ ಶ್ರೇಣಿ
ಎನ್ನ ಮನದ ಅಭಿಮಾನಿ ದೇವತೆಯೇ ಸ್ವರ್ಣಗಿರಿ ಸಂಪನ್ನೆ ಭಾಗ್ಯನಿಧಿ
ನಿನ್ನ ಮಹಿಮೆಯ ನಾ ಬಿನ್ನಾಣದಲ್ಲಿ ಬಣ್ಣಿಸಲಸಳವೇ ಪ್ರಸನ್ನವದನಳೇ
ಮುತ್ತಿನಪದಕ ಹಾರ ಮೋಹನ್ನಸರ ಉತ್ತಮಾಂಗದಲಂಕಾರ
ಜೊತ್ಯಾಗಿಟ್ಟ ಪಂಜರದೋಲೆ ಒಯ್ಯಾರ ರತ್ನಕಂಕಣದುಂಗುರ
ತೆತ್ತೀಸಕೋಟಿ ದೇವತೆಗಳು ಪೊಗಳುತ ಸತ್ತಿಗೆ ಚಾಮರವೆತ್ತಿ ಪಿಡಿಯುತಿರೇ
ಸುತ್ತಲೂ ಆಡುವ ನರ್ತನಸಂದಣಿ ಎತ್ತ ನೋಡಿದರತ್ತ ತತ್ಥೈವಾದ್ಯ
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ ಥಳಿಪ ಮೂಗುತಿ ನಾಸಿಕ
ತಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ ಸಲೇ ಭುಜಕೀರ್ತಿಪಾಠಿಕ
ಇಳೆಯೊಳು ಮಧುರಪೊಳಲೊಳುವಾಸಳೇ ಅಳಗಿರಿ ವಿಜಯವಿಟ್ಠಲನ ಕೊಂಡಾಡುವ
ಸುಲಭ ಜನರಿಗೆ ಒಲಿದು ಮತಿವ ಕೊಡುವ ಗಿಳಿಕರ ಶೋಭಿತೇ ಪರಮಮಂಗಳೇ ಹೇ
**********
good work guruji
ReplyDelete