Audio by Mrs. Nandini Sripad
ಹರಪನಹಳ್ಳಿ ಶ್ರೀ ವೆಂಕಟದಾಸರ ರಚನೆ
(ವರದವೆಂಕಟವಿಠಲ ಅಂಕಿತ)
ರಾಗ ಆನಂದಭೈರವಿ ಆದಿತಾಳ
ಕೃಷ್ಣವರ್ಯ ಪಾಲಿಸೆನ್ನನು । ಇಭರಾಮಪುರದ ।
ಕೃಷ್ಣವರ್ಯ ಪಾಲಿಸೆನ್ನನು ॥ ಪ ॥
ಕೃಷ್ಣವರ್ಯ ಪಾಲಿಸೆನ್ನ । ನಿಷ್ಠಿಯಿಂದ ಭಜಿಪೊ ಜನರ ।
ಕಷ್ಟಗಳನೆ ದೂರ ಮಾಡಿ । ಇಷ್ಟನೀವ ಶಿಷ್ಟ ಬಂಧು ॥ ಅ ಪ ॥
ನಿಮ್ಮ ಪಾದಪದುಮ ಮನದಲಿ । ನಿರುತ ತೋ - ।
ರೆನ್ನುತಾಲಿ ನಮಿಪೆ ಮುದದಲಿ ॥
ಘನ್ನ ಮಹಿಮ ಹರಿಯ ಧ್ಯಾನವನ್ನು ಮಾಡುವಂಥ ।
ಚೆನ್ನ ಮತಿಯನಿತ್ತು ಪೊರೆಯೋ ಅನ್ಯವಿಷಯಕ್ಕೆರಗಿಸಾದೆ॥1॥
ತಂದೆತಾಯಿ ಬಂಧು ಗುರುವರಾ । ಎನಗೆ ನೀನೆ ।
ಎಂದು ನಂಬಿಹೇನು ಪ್ರಭುವರಾ ॥
ಸಿಂಧುಶಯನ ಹರಿಯಪಾದ ದ್ವಂದ್ವ ಧ್ಯಾನವನ್ನೆ ಮಾಳ್ಪ ।
ಪೊಂದಿದವರ ಪೊರೆವೆ ನೀ ಎಂದು ಇಂದು ವಂದಿಸುವೆನು ॥2॥
ತರುಳ ಸ್ವಪ್ನದಲ್ಲಿ ನಿನ್ನನು ಈ । ತೆರದಿ ಪಾಡೆ ।
ಹರುಷದಿಂದ ವಿರಚಿಸೀದೆನೋ ॥
ಅರಿತವಾರು ಆರು ತಾಸು ಚರಿತೆ ಧರೆಯೊಳಿನ್ನು ತೋರು ।
ಸ್ವರತ ವರದವೆಂಕಟವಿಠಲ ಮರೆತಿರೋನು ಎಂದು ತಿಳಿಯೆ ॥ 3 ॥
*********