Showing posts with label ಕೇಶವನ ನಾಮವನು ಏಸುಬಾರಿ purandara vittala. Show all posts
Showing posts with label ಕೇಶವನ ನಾಮವನು ಏಸುಬಾರಿ purandara vittala. Show all posts

Wednesday, 4 December 2019

ಕೇಶವನ ನಾಮವನು ಏಸುಬಾರಿ purandara vittala

ಪುರಂದರದಾಸರು
ಕೇಶವ ನಾರಾಯಣಮಾಧವ ಹರಿ |ವಾಸುದೇವಎನಬಾರದೆ ?ಪ.

ಕೇಶವನ ನಾಮವನು ಏಸುಬಾರಿ ನೆನೆದರೂ |ದೋಷಪರಿಹವಪ್ಪುದು - ಏ ಜಿಹ್ವೆ ಅಪ

ಜಲಜನಾಭನ ನಾಮವು - ಈ ಜಗ - |ದೊಳು ಜನಭಯಹರಣ ||ಸುಲಭವೇದ್ಯನೆನಲೇಕೆ ಸುಖಕೆ ಸಾಧನವಿದು |ಬಲಿಯೆಂಬ ಭಕ್ತನು ಬಗೆದು ರಸವನುಂಡು ಹೇಜಿಹ್ವೆ1

ಹೇಮಕಶ್ಯಪ ಸಂಹಾರ - ಭಕ್ತರು ನಿನ್ನ |ನಾಮವ ಸವಿದುಂಬರು ||ವಾಮನ ವಾಮನನೆಂದು ವಂದಿಸಿದವರಿಗೆ |ಶ್ರೀಮದನಂತ ಪುರಂದರವಿಠಲನುಕಾಮಿತ ಫಲವೀವನು - ಹೇಜಿಹ್ವೆ3
******