Showing posts with label ಪಾಂಡುರಂಗಾ ಮನದಿ ಬಾರೊ indiresha PANDURANGA MANADI BAARO. Show all posts
Showing posts with label ಪಾಂಡುರಂಗಾ ಮನದಿ ಬಾರೊ indiresha PANDURANGA MANADI BAARO. Show all posts

Wednesday, 25 August 2021

ಪಾಂಡುರಂಗಾ ಮನದಿ ಬಾರೊ ankita indiresha PANDURANGA MANADI BAARO

 


ಪಾಂಡುರಂಗಾ ಮನದಿ ಬಾರೊ l

ಮಂಗಳ ಮಹಿಮನೆ ಭಂಗಾರದಾರುತಿ ಬೆಳಗುವೆನು ll ಪ ll


ಇಟ್ಟಂಗಿ ಪೀಠವ ಕೊಟ್ಟ ಪುಂಡರೀಕ l

ಗಿಷ್ಟ ನೀಡಿದ ಶುಭ ವಿಟ್ಠಲಾಭೀಷ್ಟದ ll 1 ll


ಭೀಮ ಕುಲದಿ ನಿಜ ಧಾಮದೊಳಗೆ ಭೈಷ್ಮೀ l

ಭಾಮಾ ಸಹಿತ ನೀ ಭಕ್ತ ಕಾಮಿತಪ್ರದ ll 2 ll


ಮೂಲಿವೊಳಗೆ ಕೂಡುತಾಲಯದೊಳು ನಮ್ಮ l

ಶ್ರೀಮನೋಹರ ತನ್ನ ಧಾಮ ತೋರೀದಿ ll 3 ll


ಸುಂದರ ಭೂಷಣ ವೃಂದ ಶೋಭಿತ ನಿನ್ನ l

ಮಂದಿರದೊಳಗಿಹೆ ನೆಂದು ಪೇಳಿದಿ ll 4 ll


ಒಂದು ದಿವಸ ರಾತ್ರಿ ಬಂದು ಏಕಾದಶಿ l

ಇಂದಿರೇಶನೆ ಮುಖ ಬಂದು ತೋರೀದಿ, ಪಾಂಡುರಂಗನೆ ll 5 ll

***