Showing posts with label ಸಕಲವೆಲ್ಲವು ಹರಿ ಸೇವೆಯೆನ್ನಿ ರುಕುಮಿಣಿಯ ಪತಿಯಿಲ್ಲ purandara vittala SAKALAVELLAVU HARI SEVEYENNI RUKUMINIYA PATIYILLA. Show all posts
Showing posts with label ಸಕಲವೆಲ್ಲವು ಹರಿ ಸೇವೆಯೆನ್ನಿ ರುಕುಮಿಣಿಯ ಪತಿಯಿಲ್ಲ purandara vittala SAKALAVELLAVU HARI SEVEYENNI RUKUMINIYA PATIYILLA. Show all posts

Sunday 7 November 2021

ಸಕಲವೆಲ್ಲವು ಹರಿ ಸೇವೆಯೆನ್ನಿ ರುಕುಮಿಣಿಯ ಪತಿಯಿಲ್ಲ purandara vittala SAKALAVELLAVU HARI SEVEYENNI RUKUMINIYA PATIYILLA



ಸಕಲವೆಲ್ಲವು ಹರಿ ಸೇವೆಯೆನ್ನಿ
ರುಕುಮಿಣಿ ಪತಿಯಿಲ್ಲದನ್ಯವಿಲ್ಲವೆನ್ನಿ

ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ
ನಡೆವುದೆಲ್ಲವು ದೇವರ ಯಾತ್ರೆಯೆನ್ನಿ
ಕೊಡುವ ದಾನವ ಕಾಮಜನಕಗರ್ಪಿತವೆನ್ನಿ
ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ

ಹೊಸ ವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ
ಕುಸುಮ ಪರಿಮಳವು ಶ್ರೀಕೃಷ್ಣಗೆನ್ನಿ
ಎಸೆವ ಆಭರಣಗಳು ಯಶೋದೆನಂದನಗೆನ್ನಿ
ಶಶಿಮುಖಿಯರೊಡನಾಟ ಸೊಬಗ ಗೋವಳಗೆನ್ನಿ

ಆಟಪಾಟಗಳೆಲ್ಲ ಅಂತರ್ಯಾಮಿಗೆ ಎನ್ನಿ
ಕೂಟ ನೋಟಗಳೆಲ್ಲ ಕಂಜನಾಭಗೆ ಎನ್ನಿ
ನೀಟಾದ ವಸ್ತುಗಳು ಕೈಟಭಾಂತಕಗೆನ್ನಿ
ಕೋಟಲೆ ಸಂಸಾರ ನಾಟಕಧರಗೆಯೆನ್ನಿ

ನಿದ್ರೆ ಜಾಗರವು ಸಮುದ್ರಶಯನಗೆನ್ನಿ
ಭದ್ರನಿಧಿ ಗಜರಾಜ ವರದಗೆನ್ನಿ
ರೌದ್ರ ದಾರಿದ್ರ್ಯವು ರಾಘವನಡಿಗೆನ್ನಿ
ಶ್ರೀಮುದ್ರೆಗಳ ಧಾರಣವು ಹರಿಯ ದಾಸರಿಗೆನ್ನಿ

ಅಣು ರೇಣು ತೃಣ ಕಾಷ್ಠ ಪರಿಪೂರ್ಣನಹುದೆನ್ನಿ
ಎಣಿಸಲಾಗದನಂತ ಮಹಿಮನೆನ್ನಿ
ಸೆಣಸುವ ದೈತ್ಯರ ಗಂಡ ಪ್ರಚಂಡನೆನ್ನಿ
ಫಣಿಶಾಯಿ ಪುರಂದರವಿಠಲನೆ ಪರದೈವವೆನ್ನಿ
***


ರಾಗ ಶಂಕರಾಭರಣ ಅಟ ತಾಳ (raga, taala may differ in audio)

pallavi

sakalavellavu hari sEvEyenni rukumiNi patiyilladanyavilla venni

caraNam 1

nuDivudellavu nArAyaNa kIrtaneyenni naDevudellavu dEvara yAtreyenni
koDuva tAnavu kAyajanaka garpitavenni eDeya annavu hariya prasAdavenni

caraNam 2

hosa vastra uDuvalli hariya beLLuDeyenni kusuma parimaLavu shrI krSNagenni
eseva AbharanagaLu yashOde nandanagenni shashimukhiyaroDanADa sobaga gOvaLagenni

caraNam 3

Ata pATagaLella antaryAmige enni kUTa nOTagaLella kanjanAbhage enni
nITAda vastugaLu kaiTabhAntakagenni koDale samsAra nATaka dharageyenni

caraNam 4

nidre jAgaravu samudra shayagenni bhadranidhi gajarAja varadagenni
raudra dAridravu rAghavanaDigenni shrI mudregaLa dhAraNavu hariya dAsarigenni

caraNam 5

aNu rEnu trNa kASTha paripUNanadenni eNisalAgadanenta mahimanenni
seNasuva daityara gaNDa pracaNDanenni phaNishAyi purandara viTTalane paradaivavenni
***

ಸಕಲವೆಲ್ಲವು ಹರಿಸೇವೆಯೆನ್ನಿ 
ರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.

ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿನಡೆವುದೆಲ್ಲವು ಹರಿಯಾತ್ರೆಯೆನ್ನಿ ||ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ 1

ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿಕುಸುಮ ಪರಿಮಳವು ಕಂಜನಾಭಗೆನ್ನಿ ||ಎಸೆವಾಭರಣವು ಯಶೋಧೆನಂದನಗೆನ್ನಿಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ 2

ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿಕೋಟಲೆ ಸಂಸಾರ ಕಪಟನಾಟಕಗೆನ್ನಿ 3

ನಿದ್ರೆ ಜಾಗರವು ಸಮುದ್ರಶಯನಗೆನ್ನಿಭದ್ರಗಜನಿಧಿ ವರದಗೆನ್ನಿರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀಮುದ್ರೆ ಧರಿಸಿದವ ಹರಿದಾಸನೆನ್ನಿ 4

ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿಎಣಿಸಬಾರದನಂತ ಮಹಿಮನೆನ್ನಿಸೆಣಸುವ ರಕ್ಕಸರ ಶಿರವ ಚಂಡಾಡುವಪ್ರಣವಗೋಚರ ಪುರಂದರವಿಠಲರಾಯನೆನ್ನಿ 5
****