ಬೇವು ಬೆಲ್ಲದೊಳಿಡಲೇನು ಫಲ ?
ಹಾವಿಗೆ ಹಾಲೆರೆದೇನು ಫಲ ? ||ಪ||
ಕುಟಿಲವ ಬಿಡದಿಹ ಕುಜನರು ಮಂತ್ರದ
ಪಠನವ ಮಾಡಿದರೇನು ಫಲ ? |
ಸಟೆಯನ್ನಾಡುವ ಮನುಜರು ಮನದಲಿ
ವಿಠಲನ ನೆನೆದರೇನು ಫಲ? ||
ಕಪಟತನದಿ ವಂಚಿಸುವ ಮನುಜರು
ಜಪಗಳ ಮಾಡಿದರೇನು ಫಲ? |
ಕುಪಿತಬುದ್ಧಿಯನು ತ್ಯಜಿಸದೆ ನಿತ್ಯದಿ
ಉಪವಾಸವಿದ್ದರಿನ್ನೇನು ಫಲ ? ||
ಮಾತಾಪಿತರನು ಬಳಲಿಸುವ ಮಗ
ಯಾತ್ರೆಯ ಮಾಡಿದರೇನು ಫಲ ? |
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ ? ||
ಪತಿಯನು ನಿಂದಿಸಿ ಬೊಗಳುವ ಸತಿಯಳು
ವ್ರತಗಳ ಮಾಡಿದರೇನು ಫಲ ? |
ಅತಿಥಿಗಳೆಡೆಯಲಿ ಭೇದವ ಮಾಡುತ
ಗತಿಯನು ಬಯಸಿದರೇನು ಫಲ ? ||
ಹೀನಕೃತ್ಯಗಳ ಮಾಡುತ ನದಿಯಲಿ
ಸ್ನಾನವ ಮಾಡಿದರೇನು ಫಲ ? |
ಶ್ರೀನಿಧಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ ||
***
ರಾಗ ಬೇಹಾಗ್ ಆದಿತಾಳ (raga tala may differ in audio)
pallavi
bEvu belladoLiDalEnu bala hAvige hAleredEnu bala
caraNam 1
kuTilava biDadiha manujaru japagaLa mADidarEnu bala
kupita buddhiyanu tyajisade nityadi upavAsaviddarinnEnu bala
caraNam 2
mAtA pitaranu baLalisuva mga yAtreya mADidarEnu bala
ghAtakavanu biDade nirantara gIteyanodidarEnu bala
caraNam 3
patiyanu nindisi pogaLuva satiyaLu vratagaLa mADidarEnu bala
atithigaLeDeyali bhEdava mADuta gatiyanu bayasidarEnu bala
caraNam 4
hIna krtyangaLa mADuta nadiyali snAnava mADidarEnu bala
shrInidhi purandara viTTalana neneyade maunava mADidarEnu bala
***
ಬೇವು ಬೆಲ್ಲದೊಳಿಡಲೇನು ಫಲ || P ||
ಹಾವಿಗೆ ಹಾಲೆರೆದೇನು ಫಲ || A.P ||
ಕುಟಿಲವ ಬಿಡದಿಹ ಕುಜನರು ಮಂತ್ರವ ಪಠನೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಮನದಲಿ ವಿಠಲನ ನೆನೆದರೇನು ಫಲ || 1 ||
ಮಾತಾಪಿತರನು ಬಳಲಿಸುವಾತನು ಯಾತ್ರೆಯ ಮಾಡಿದರೇನು ಫಲ
ಘಾತಕತನವನು ಬಿಡದೆ ನಿರಂತರ ಗೀತೆಯನೋದಿದರೇನು ಫಲ || 2 ||
ಕಪಟತನದಲಿ ಕಾಡುವರೆಲ್ಲರು ಜಪಗಳ ಮಾಡಿದರೇನು ಫಲ
ಕುಪಿತ ಬುದ್ಧಿಯನು ಬಿಡದೆ ನಿರಂತರ ಉಪವಾಸ ಮಾಡಿದರೇನು ಫಲ || 3 ||
ಪತಿಗಳ ನಿಂದಿಸಿ ಬೊಗಳುವ ಸತಿಯರು ವ್ರತಗಳ ಮಾಡಿದರೇನು ಫಲ
ಅತಿಥಿಗಳೆಡೆಯಲಿ ಭೇದವ ಮಾಡಿ ಸದ್ಗತಿಯನು ಬಯಸಿದರೇನು ಫಲ || 4 ||
ಹೀನಕೃತ್ಯಗಳ ಮಾಡುತ ನದಿಯಲಿ ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಪುರಂದರವಿಠ್ಠಲನ ನೆನೆಯದೆ ಮೌನವ ಮಾಡಿದರೇನು ಫಲ || 5 ||
***
Bēvu belladoḷiḍalēnu phala || P || hāvige hāleredēnu phala || A.P ||
kuṭilava biḍadiha kujanaru mantrava paṭhaneya māḍidarēnu phala
saṭeyannāḍuva manujaru manadali viṭhalana nenedarēnu phala || 1 ||
mātāpitaranu baḷalisuvātanu yātreya māḍidarēnu phala
ghātakatanavanu biḍade nirantara gīteyanōdidarēnu phala || 2 ||
kapaṭatanadali kāḍuvarellaru japagaḷa māḍidarēnu phala
kupita bud’dhiyanu biḍade nirantara upavāsa māḍidarēnu phala || 3 ||
patigaḷa nindisi bogaḷuva satiyaru vratagaḷa māḍidarēnu phala
atithigaḷeḍeyali bhēdava māḍi sadgatiyanu bayasidarēnu phala || 4 ||
hīnakr̥tyagaḷa māḍuta nadiyali snānava māḍidarēnu phala
śrīnidhi purandaraviṭhṭhalana neneyade maunava māḍidarēnu phala || 5 ||
Plain English
Bevu belladolidalenu phala || P || havige haleredenu phala || A.P ||
kutilava bidadiha kujanaru mantrava pathaneya madidarenu phala
sateyannaduva manujaru manadali vithalana nenedarenu phala || 1 ||
matapitaranu balalisuvatanu yatreya madidarenu phala
ghatakatanavanu bidade nirantara giteyanodidarenu phala || 2 ||
kapatatanadali kaduvarellaru japagala madidarenu phala
kupita bud’dhiyanu bidade nirantara upavasa madidarenu phala || 3 ||
patigala nindisi bogaluva satiyaru vratagala madidarenu phala
atithigaledeyali bhedava madi sadgatiyanu bayasidarenu phala || 4 ||
hinakrtyagala maduta nadiyali snanava madidarenu phala
srinidhi purandaraviththalana neneyade maunava madidarenu phala || 5 ||
***