Showing posts with label ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ vijaya vittala. Show all posts
Showing posts with label ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ vijaya vittala. Show all posts

Thursday, 17 October 2019

ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ ankita vijaya vittala

ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು |
ಇಲ್ಲಿ ಅಡಗಿದ ಬಲ್ಲಿದ ತನವೇ

ಬಿಡೆ ಬಿಡೆನೊ ಎನ್ನ ಒಡಿಯ ತಿರುಮಲ ನಿನ್ನ |
ಉಡಿಯ ಪೀತಾಂಬರ ಪಿಡಿದು ನಿಲಿಸಿಕೊಂಬೆ ||1||

ಎರವು ಎರವು ಮಾಡಿ ತಿರುಗಿಸಿದಿ ನೀ ಎನ್ನ
ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ ||2||

ಅತ್ತ ಇತ್ತಲಿ ನೋಡಿನೆತ್ತ ಪೋಗಲಿ ಎನ್ನ |
ಚಿತ್ತದಲಿ ನಿನ್ನ ಹತ್ತೆಗಟ್ಟಿಕೊಂಬೆ ||3||

ಅತ್ತಿಯ ಮಕ್ಕಳಿಗೆ ತೆತ್ತಿಗ ನೀನಾಗಿ |
ವಿತ್ತವಿತ್ತದರಾದ ರಾಸಿ ಸಿರಿಯಲ್ಲಿ ||4||

ಇರಳು ಹಗಲು ಬಿಡದೆ ಗುರು ಪುರಂದರಗೊಲಿದೆ |
ಬಿರಿದು ಏನೊ ಇಷ್ಟು ವಿಜಯವಿಠಲಾ||5||
*******