Showing posts with label ನಮೋ ನಮೋ ಮಾತೇ ಎನ್ನಯ ಶ್ರಮಾವ ಕÀಳಿ ದ್ಯೋತೆ gurujagannatha vittala. Show all posts
Showing posts with label ನಮೋ ನಮೋ ಮಾತೇ ಎನ್ನಯ ಶ್ರಮಾವ ಕÀಳಿ ದ್ಯೋತೆ gurujagannatha vittala. Show all posts

Wednesday, 1 September 2021

ನಮೋ ನಮೋ ಮಾತೇ ಎನ್ನಯ ಶ್ರಮಾವ ಕÀಳಿ ದ್ಯೋತೆ ankita gurujagannatha vittala

 ..

ನಮೋ ನಮೋ ಮಾತೇ ಎನ್ನಯ

ಶ್ರಮಾವ ಕÀಳಿ ದ್ಯೋತೆ ಪ


ಕ್ಷಮಾತಳದಿ ನಿ ಸುಮಾಹಕಲ್ಪ

ದೃಮೋಪಮಾಗಿಹೆ ಸಮಾನ ಸೋತ್ತಮೆ ಅ.ಪ


ರಮಾಧವನರಾಣೀ ನೀ

ತಮೋರೂಪ ಕಲ್ಯಾಣೀ

ನಮಿಪೆ ನಿನ್ನನು

ಕ್ಷಮಾದಿಪತ್ಯವ

ಮಮೈವ ಪಾಲಿಸು

ವಿಮಾನ ನಿಲಯಳೆ 1


ಧರಾತಳದಿ ಬಂದೂ ನೀ

ದುರಾಳ ತತಿ ಕೊಂದೂ

ಭರಾದಿ ಲೋಕದಿ

ಮೆರಾದ ನಿನ್ನನು

ಶಿರಾದಿ ನಮಿಸಿದೆ

ವರಾವ ಪಾಲಿಸು 2


ಪಿತಾಮಹನ ಮಾತೇ ನೀ

ವಿತಾತ ಗುಣ ಖ್ಯಾತೇ

ದಾತಾ ಗುರುಜಗ -

ನ್ನಾಥಾ ವಿಠಲನ್ನ

ಪ್ರೀತಿಯ ಮಾನಿನಿ

ದೂತಾನ ಪೊರೆವೋದು 3

***