Showing posts with label ಶ್ರೀರಮಣಿಯ ಮನೋಹರ ಸುಜನ ಮಂದಾರ helavana katte. Show all posts
Showing posts with label ಶ್ರೀರಮಣಿಯ ಮನೋಹರ ಸುಜನ ಮಂದಾರ helavana katte. Show all posts

Tuesday, 1 June 2021

ಶ್ರೀರಮಣಿಯ ಮನೋಹರ ಸುಜನ ಮಂದಾರ ankita helavana katte

 ಚಂದ್ರಹಾಸನ ಕಥೆ

ಶ್ರೀರಮಣಿಯ ಮನೋಹರ ಸುಜನ ಮಂದಾರ
ತ್ರೈಭುವನೋದ್ಧಾರ
ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ 1
ಕಡಲಶಯನ ಕಲ್ಪತರುವೆ ಇಷ್ಟಾರ್ಥವ ಕೊಡುವ
ಭಕ್ತರ ಭಾಗ್ಯನಿಧಿಯೆ
ನಡೆಸುವೆ ನಿಮ್ಮ ತಂತ್ರದಲಿ ಈ ಕೃತಿಯನು
ನುಡಿಸಯ್ಯ ಎನ್ನ ಜಿಹ್ವೆಯಲಿ 2
ಭುಜಗನ ಹಿಡಿದು ಗರ್ಭವ ಸುತ್ತಿದಾತನೆ
ಅಜಹರಿಸುರ ವಂದಿತನೆ
ಭಜನೆಗಿಷ್ಟಾರ್ಥವ ಕೊಡುವ ವಿಘ್ನೇಶ್ವರ
ನಿಜವಾಗೊ ಮತಿಗೆ ಮಂಗಳವ 3
ಶೃಂಗಪುರದ ನೆಲವಾಸೆ ಸಜ್ಜನಪೋಷೆ
ಸಂಗೀತಲೋಲೆ ಸುಶೀಲೆ
ಮಂಗಳಗಾತ್ರೆ ಶಾರದೆ ಎನ್ನ ಜಿಹ್ವೆಯಲಿ
ಹಿಂಗದೆ ನೆಲಸೆನ್ನ ತಾಯೆ 4
ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ
ಹೆತ್ತೋರ ಮನೆದೈವ ಶ್ರೀ ಮೈಲಾರಗೆ ಹಸ್ತವ
ಮುಗಿದು ವಂದಿಸುವೆ 5
ಪೃಥಿವಿ ಆಕಾಶ ಸೂರ್ಯ ಚಂದ್ರರಿಗೆರಗುವೆ
ಪತಿಯ ಚರಣವನ್ನು ನೆನೆವೆ
ಸ್ತುತಿಸುವೆ ಗುರುಹಿರಿಯರಿಗೇಕಚಿತ್ತದಿ ಮತಿಗೆ
ಮಂಗಳವಾಗಲೆಂದು 6
ಸುರಪುರವಾಸ ಲಕ್ಷ್ಮಿಯಕಾಂತ ಭಕ್ತರ್ಗೆ
ಒರೆದಂಥ ಜೈಮಿನಿಯೊಳಗೆ
ಪರಮಭಕ್ತ ಚಂದ್ರಹಾಸನ ಕಥೆಯನು ಚರಿತೆಯ
ಮಾಡಿ ವರ್ಣಿಸುವೆ 7
ಇಂದ್ರಜ ತುರಗವ ಕಾಣದೆ ಮನದಲ್ಲಿ
ಸಂದೇಹ ಮಾಡುತ್ತಿರಲು
ಚಂದ್ರಹಾಸನ ಕಥಾಮೃತಸಾರವನು ನಾರಂದ
ಪೇಳಿದ ಫಲುಗುಣಗೆ 8
ಬಂದರು ಕೃಷ್ಣಾರ್ಜುನರು ತುರಂಗವ
ಮುಂದೊತ್ತಿ ರಥವ ಬೆಂಬತ್ತಿ
ಚಂದದಿ ದಿಗ್ದೇಶ ತಿರುಗಿದ ಹಯವ ತಾ
ನಿಂದಿರಿಸಿದ ಚಂದ್ರಹಾಸ 9
ಕಟ್ಟಿದನೆರಡು ತುರಂಗವ ಲಿಖಿತವ
ಬಿಚ್ಚೋದಿಕೊಂಡು ನೋಡಿದನು
ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು 10
ಪಿಡಿಕೊಂಡು ಬಂದರು ತುರಗವ ಚರರು ತ
ನ್ನೊಡೆಯಗೆ ಪೇಳಿದರಾಗ
ಪಿಡಿದು ತುರಂಗವ ಕಟ್ಟಿದರಾರೆಂದು
ಕಡುಚಿಂತೆಯಲಿ ಪಾರ್ಥನಿದ್ದ 11
ಮನದಲಿ ಆಲೋಚನೆಯ ಮಾಡುತಲಿರೆ
ದಿನಕರ ಪ್ರತಿಬಿಂಬದಂತೆ
ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ12
ಇಟ್ಟಿಹ ಕರ್ಣಕುಂಡಲವ ಕೃಷ್ಣಾಜಿನ
ಉಟ್ಟಿಹ ಕರದಿ ವೇಣುವನು
ಮುಟ್ಟಿ ಬಾರಿಸುತ ಶ್ರೀಹರಿನಾಮ ಸ್ಮರಿಸುತ
ಶ್ರೇಷ್ಠÀ ಬಂದನು ಇವರೆಡೆಗೆ 13
ಏನಿದು ಬಂದ ಕಾರಣ ಎನುತಲಿ ಇಂದ್ರಸೂನು
ಕೃಷ್ಣರು ಇದಿರೆದ್ದು
ಗಾನವಿನೋದಿಯಾಗಮನವಿದೇನೆಂದು
ಆನಂದದಿಂದ ಕೇಳಿದರು 14
ಕುಳ್ಳಿರಿಸಿದರು ಗದ್ದುಗೆಯಿಟ್ಟು ಮುನಿಪಗೆ
ಎಲ್ಲ ವೃತ್ತಾಂತವನರುಹಿ
ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು15
ಗಮನವಾಗಿದ್ದ ತುರಂಗವ ಕಟ್ಟಿದ
ಪ್ರಮುಖರಿಲ್ಲ್ಯಾರು ಪೇಳೆನುಲು
ನಿಮಗಿದ ವಿವರಿಸಿ ಪೇಳುವೆನೆಂದರೆ
ಸಮಯವಲ್ಲವು ಪೇಳೆನಲು 16
ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ
ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ17
ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು
ಆಳುವ ಪ್ರಭು ಧಾರ್ಮಿಕನೆಂಬಾತನ ಬಾಳನೆಂಬರು
ಪ್ರಧಾನಿಯನು 18
ನೀತೀಲಿ ರಾಜ್ಯವನಾಳುತಿರಲು ಕಂದ
ಭೂತಮೂಲದಲಿ ಪುಟ್ಟಿದನು
ಜಾತಕರ್ಮನಾಮಕರಣ ಮಾಡದೆ ಅವನ
ತಾತ ಕಾಲವಾಗಿ ಪೋದ 19
ನಾಯಕರಿಲ್ಲದ ಕಾಯವಿದೇಕೆಂದು
ಸಾಯಲಾದಳು ರಾಜಪತ್ನಿ
ಮಾಯವಾಯಿತು ಸಿರಿ ಮತ್ತೆ ರಾಜ್ಯವ
ಪರರಾಯರು ಬಂದು ಕಟ್ಟಿದರು20
ಪೋಷಣೆ ಮಾಡುವರಿಲ್ಲದಿರಲು ಪರದೇಶಿಯಂದದಿ
ಬಾಲನಿರಲು
ದಾಸಿಯೊಬ್ಬಳು ಕಂಡು ಮನದಲ್ಲಿ ಮರುಗುತ
ಆ ಶಿಶುವೆತ್ತಿ ನಡೆದಳು 21
ಚಿಂತಿಸಿ ಹಲವು ಯೋಚನೆಯ ಮಾಡುತಲಾಗ
ಕುಂತಳಪುರಕಾಗಿ ಬಂದು
ಸಂತತ ನೆರೆಯಲಿ ಶಿಶುವನಿಟ್ಟುಕೊಂಡು ನಿಂತಳು
ಆ ಗ್ರಾಮದಲ್ಲಿ 22
ತಿರಿದು ಹಾಕುವಳು ಪಾಲ್ಬೆಣ್ಣೆಯ ಶಿಶುವಿಗೆ
ಎರೆದು ಪೋಷಣೆಯ ಮಾಡುವಳು
ತರಳಗೆ ಬೇಕಾದುದಿಲ್ಲದಿರಲು ದಾಸಿ
ಮರುಗುತಿರ್ದಳು ಮನದೊಳಗೆ 23
ದೇಶಾಧಿಪತಿಯ ಗರ್ಭದಿ ಬಂದು ನಿನಗೀಗ
ಹಾಸುವ ವಸ್ತ್ರಗಳಿಲ್ಲ
ಬೀಸಿ ತೂಗುವರೆ ತೊಟ್ಟಿಲು ಇಲ್ಲ ಎನುತಲಿ
ಬೇಸತ್ತು ಅಳಲುವಳೊಮ್ಮೆ 24
ಪಾಲನೆ ಮಾಡುವಳು ಪರಿಪರಿಯಲಿ ಬಾಲಲೀಲೆಯ
ನೋಡಿ ಹಿಗ್ಗುವಳು
ಶ್ರೀ ಲೋಲನೆ ನೀ ಗತಿಯೆಂದು ತರಳನ
ಆಲಂಬದಲ್ಲಿರುತಿಹಳು 25
ತೊಂಗಲಗುರುಳು ತೋರುತಲಿಹ ಮೊಳೆವಲ್ಲು
ಕಂಗಳ ಕುಡಿನೋಟವೆಸೆಯೆ
ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ-
ದೊಳಗಾಡುತಿಹನು 26
ಇರುತಿರೆ ದಾಸಿ ಅಂತರಿಸಿ ಪೋದಳು ಬಾಲ
ಪರಪುಟ್ಟನಾದುದ ಕಂಡು
ನೆರೆಯ ನಾರಿಯರೆಲ್ಲ ತಮ್ಮ ಮಕ್ಕಳ ಕೂಡೆ ಎರೆದು
ಮಡಿಯ ಪೊದಿಸುವರು 27
ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ-
ರೋಗರವನ್ನು ಉಣಿಸುವರು
ತೂಗುವರು ತೊಟ್ಟಿಲೊಳಗಿಟ್ಟು ತರಳನ
ರಾಗಗಾನದಲಿ ಪಾಡುವರು 28
ಓರಗೆ ಮಕ್ಕಳು ಒಡಗೊಂಡು ಹೋಗಿ
ಎಣ್ಣೂರಿಗೆಯನು ಕೊಡಿಸುವರು
ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ29
ಸೂಳೆವೆಣ್ಣುಗಳೆಲ್ಲ ಸೆಳೆದೆತ್ತಿಕೊಂಡು
ತಮ್ಮಾಲಯದೊಳು ಕರೆದೊಯ್ದು
ಕಾಲತೊಳೆದು ಕಸ್ತೂರಿಯನಿಟ್ಟು ಮಲ್ಲಿಗೆ
ಮಾಲೆಯನವಗೆ ಹಾಕುವರು 30
ಕದಳಿ ಖರ್ಜೂರ ಕಿತ್ತಲೆ ಜಂಬುನೇರಿಲ ಮಧುರ
ಮಾವಿನ ಫಲಗಳನು
ಚದುರೆಯರೆಲ್ಲ ಕೊಟ್ಟು ಮನ್ನಿಸುವರು
ಮದನನಯ್ಯನ ಕಿಂಕರಗೆ 31
ಬಟ್ಟೆವಿಡಿದು ಬಾಲ ಬರುತಿರೆ ಕಂಡನು ಪುಟ್ಟ
ಸಾಲಿಗ್ರಾಮ ಶಿಲೆಯ
ಗಟ್ಟುಳ್ಳ ಗೋಲಿಯು ತನಗೆ ದೊರಕಿತೆಂದು
ಅಷ್ಟು ಜನರಿಗೆ ತೋರಿಸಿದ 32
ಭಯದಿಂದಲಿದ್ದ ಬಾಲಗೆ ದೊರೆಕಿತು
ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು
ಕೈಯ ದುಡುಕಿಲಿ ತೆಕ್ಕೊಂಡನು ಹರುಷದಿ
ಲಕ್ಷ್ಮಿನಾರಾಯಣ ಮೂರುತಿಯ 33
ಆಡಿಗೆಲ್ಲುವ ನಾಲ್ಕುಯಿಮ್ಮಡಿ ಗಟ್ಟುಗವ
ಕೂಡಿದ ಗೆಳೆಯರ ಕೂಡೆ
ನೋಡಿ ಬಚ್ಚಿಡುವರೆ ಮನೆಯಿಲ್ಲದಿರೆ ಬಾಲ
ದೌಡೆಯೊಳಿಟ್ಟು ಕೊಂಡಿಹನು 34
ಹಿಂಡುಗೆಳೆಯರ ಕೂಡಿಕೊಂಡಾಡುವ ಲಗ್ಗೆ ಚೆಂಡು
ಬುಗುರಿ ಚನ್ನಿಗಳನು
ಗಂಡುಗಲಿಯು ತಾನಾಗಿ ಅವರೆಲ್ಲರ
ಮಂಡೆಗಳನು ತಗ್ಗಿಸುವನು 35
ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು
ಬಚ್ಚಿಡುವರೆ ಮನೆಯಿಲ್ಲದಿರಲು ಬಾಲ ಅರ್ಚಿಸಿ
ಬಾಯೊಳಗಿಡುವ 36
ಒಂದು ದಿವಸ ಕುಂತಳೇಂದ್ರನ ಮಂತ್ರಿಯು
ಮಂದಿರದಲಿ ವಿಪ್ರರಿಗೆ ಆ-
ನಂದದಿಂದಲಿ ಭೋಜನ ಮಾಡಿಸುವೆನೆಂದ
ಬಂದರು ಬುಧಜನರೆಲ್ಲ 37
ಮೃಷ್ಟಾನ್ನವನ್ನು ಭೋಜನ ಮಾಡಿಸಿ ಸಂತುಷ್ಠಿ
ಬಡಿಸಿದ ಬ್ರಾಹ್ಮರನು
ಪಟ್ಟಸಾಲೆಯೊಳೆಲ್ಲ ಹರಡಿ ಗದ್ದುಗೆಯಿಟ್ಟು
ಶ್ರೇಷ್ಠರೆಲ್ಲರ ಕುಳ್ಳಿರಿಸಿ 38
ದಕ್ಷಿಣೆ ತಾಂಬೂಲವನು ತೆಕ್ಕೊಂಡು
ಮಂತ್ರಾಕ್ಷತೆಯನು ಮಂತ್ರಿಗಿತ್ತು
ಮಕ್ಕಳೊಡನೆ ಕೂಡಿ ಆಡುವ ತರಳನ
ಲಕ್ಷಣವನ್ನೆ ನೋಡಿದರು 39
ಇವನಾರ ಮಗನೆಂದು ನೆರೆದಿರ್ದ ಸಭೆಯಲ್ಲಿ
(last few lines incomplete?)
****