ವಿಜಯದಾಸ
ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು
ಸರಸಿಜಭವಾದ್ಯರಿಗೆ ಬಿಡದು ಪ
ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ
ದಿರದಾವ ಜನುಮವಾಗೆ ಪ್ರಾಣಿ ಅ.ಪ.
ವಾರಿಜಭವನ ನೋಡು ಮುನಿಶಾಪದಿಂ
ಧಾರುಣಿಯೊಳು ಪೂಜೆ ತೊರೆದ
ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ-
ತಾರವಿಲ್ಲದವನಾದನೋ ಪ್ರಾಣಿ1
ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು
ಯುಗದೊಳಗೆ ಕೋತ್ಯಾದನಲ್ಲೋ
ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ
ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ 2
ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ
ಅವನಿಪತಿ ಮೊರೆ ಹೊಕ್ಕನಲ್ಲೊ
ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ
ಸ್ರವಿಸುವುದು ಶಿರಸಿನಲ್ಲೀ ಪ್ರಾಣಿ 3
ಇಂದ್ರ ತರ್ಕವನೋದಿ ನರಿಯಾದ ಪರಸತಿ-
ಯಿಂದ ಮೇಷ ವೃಷಣನಾಭ
ಕಂದರ್ಪ ಶರೀರದಿಂದ ನಾಶನನಾಗಿ
ಬಂದ ಮೀನಿನ ಗರ್ಭದಿಂದ ಪ್ರಾಣಿ4
ಸೂರ್ಯ ಚಂದ್ರರ ನೋಡು ಮೂಲ ರೂಪದಿ ಪರ
ಭಾರ್ಯರಿಗೆ ಶಿಲುಕಿ ತಮ್ಮಾ
ವೀರ್ಯವನು ಕಳಕೊಂಡು ಬರಿದಾದರೋ ಕರ್ಮ-
ಕಾರ್ಯ ವಾರಿಗು ಬಿಡದೆಲೋ ಪ್ರಾಣಿ 5
ಪಾವಕನು ಸರ್ವಭಕ್ಷಕನಾದ ಮಿಕ್ಕಾದ
ಅವಾವ ಸುರರ ಕರ್ಮಂಗಳ
ಯಾವತ್ತು ವರ್ಣಿಸಲಳವಲ್ಲ ಎಚ್ಚತ್ತು
ಪಾವನ್ನ ನೀನಾಗೆಲೋ ಪ್ರಾಣಿ 6
ಆವಾವ ಸ್ಥಳದಲ್ಲಿ ಜನನ ಸ್ಥಿತಿಗತಿ ಮತ್ತೆ
ಸಾವು ಸಾಕಲ್ಯದಿ ಮರೆಯದಲೆ
ಕ್ಲುಪ್ತ ಮಾಡಿಪ್ಪನೋ ಅದನು
ಆವನಾದರು ಮೀರಲೊಳÀವೇ ಪ್ರಾಣಿ 7
ಉಣಬೇಕು ಉಣಬೇಕು ಮತ್ತೆ ಉಣಲೀಬೇಕು
ತ್ರಿ-ಗುಣ ಕಾರ್ಯರ ಭವಣೆ ಮನುಜ
ತೃಣ ಜನ್ಮ ಬಂದ ಕಾಲಕ್ಕು ತ್ರೈತಾಪಗಳು
ಅಣುಮಾತ್ರವೂ ತಪ್ಪವೋ ಪ್ರಾಣಿ 8
ಧೀರನಾಗಲಿ ಮಹಾಶೂರನಾಗಲಿ ಮತ್ತೆ
ಧಾರುಣೀಪತಿ ಭಾಗ್ಯನಾಗೆ
ಆರಿಗಾದರು ಬಿಡದು ಪರೀಕ್ಷಿತರಾಯನು
ನೀರೊಳಗಿದ್ದ ತಿಳಿಯೋ ಪ್ರಾಣಿ 9
ಜಲಗಿರಿವನ ಪೊದೆ ಹೊದರು ಗಹ್ವರ ಹುತ್ತ-
ಬಿಲ ಸಪ್ತದ್ವೀಪ ಪಾತಾಳದಿ
ನಭ ಸ್ವರ್ಗಾದಿಲೋಕ ಜನನಿಯ ಜಠರ-
ದೊಳಗಿರೆ ತಪ್ಪುವುದೆ ಬರಹಾ ಪ್ರಾಣಿ 10
ಅಣಿಮಾದಿ ಅಷ್ಟಾಂಗ ಯೋಗ ಮಾಡಲು ಮಹಾ
ಗುಣವಂತ ಜನರು ಒಂದು
ಕ್ಷಣವ ಮೀರಲುಬಹುದೆ ಮೃತ್ಯು ಬಂದೆದುರಾಗಿ
ಸೆಣಸುತಿರೆ ಬೇರುಂಟೆ ಕಾರ್ಯ ಪ್ರಾಣಿ 11
ಎಲ್ಲೆಲ್ಲೆ ಅನ್ನ ಮತ್ತೆಲ್ಲೆಲ್ಲಿ ಉದಕ ಇ-
ನ್ನೆಲ್ಲೆಲ್ಲಿ ನಿದ್ರೆ ಜಾಗರಣಿಯೊ
ಎಲ್ಲೆಲ್ಲಿ ಹೆಜ್ಜೆಗಳನಿಡುವ ಪರಿಮಿತಿಯುಂಟೊ
ಅಲ್ಲಿಲ್ಲಿಗೊಯ್ಯುವುದೊ ಬಿಡದೆ ಪ್ರಾಣಿ 12
ಧಿಕ್ಕಾರ ಸತ್ಕಾರ ನಿಂದೆ ವಂದನೆಗಳು
ರೊಕ್ಕಾ ಸುಖ ದುಃಖ ಕಾರಣಗಳು
ಉಕ್ಕೇರಿದಂತೆ ಬರುತಿಹುದೊ ನಮ್ಮ ದೇ-
ವಕ್ಕಿ ಕಂದನ ಆಜ್ಞಯಿಂದ ಪ್ರಾಣಿ 13
ಕಾಶಿಯಲ್ಲಿರೆ ಮರಣ ಆವಲ್ಲಿ ಇಪ್ಪುದಾ-
ದೇಶಕ್ಕೆ ಒಯ್ಯುವುದು ಕಾಲ
ಕಾಶಿರಾಯನ ನೋಡು ಒಡನೆ ಅಪಮೃತ್ಯು ವೇದ-
ವ್ಯಾಸರಿದ್ದರು ತಪ್ಪಲಿಲ್ಲ ಪ್ರಾಣಿ 14
ಮಾರುತ ಭಾರತಿ ಶೇಷ ಶಿವ ಪಾರ್ವತಿ-
ಸರಸಿಜ ಬಾಂಧವಾಗ್ನಿ ಧರ್ಮ
ಕಾಲ ಮೃತ್ಯು ಕಾಲನ ದೂತರು
ಅರಸುತಿಪ್ಪರು ಲವ ತೃಟಿಯ ಪ್ರಾಣಿ 15
ಇವರಿವರಿಗುತ್ತಮರು ಇವರಿವರಗಧಮರು
ಇವರೆಲ್ಲರಿಗೆ ಶ್ರೀ ಭೂಮಿ ದುರ್ಗಾ
ಅವಳಿಗೆ ಶ್ರೀ ಹರಿಯು ತಾನೆ ನಿಯಾಮಕನು
ವಿವರದಲಿ ತಿಳಿ ತಾರತಮ್ಯ ಪ್ರಾಣಿ 16
ಲಕುಮಿ ಮೊದಲು ಮಾಡಿ ಇವರೆಲ್ಲರಿಗೆ ಲೇಶ
ಶಕುತಿಯಿಲ್ಲವೊ ಕಾಣೊ ಮರುಳೆ
ಅಕಟಕಟ ಗುಣಪೂರ್ಣ ಸರ್ವ ಸ್ವಾತಂತ್ರ ವ್ಯಾ-
ಪಕ ಸರ್ವಾಂತರ್ಯಾಮಿಯೆನ್ನೋ ಪ್ರಾಣಿ 17
ಕರುಣಾ ಕಟಾಕ್ಷವುಳ್ಳನಕ
ಸುರ ನರೋರಗ ಯಕ್ಷಲೋಕದಲ್ಲಿದ್ದವರು
ಬರಿದೆ ಕೂಗಿದರೇನು ಆಹುದೋ ಪ್ರಾಣಿ 18
ಕಾಲ ತಪ್ಪಿಸಿ ಕಾವ ಹರಿತಾನು
ಸಾವ ಕಾಲವ ಮಾತ್ರ ತಪ್ಪಿಸನೋ
ಕಾವ ಕೊಲ್ಲುವ ಸ್ವಾಮಿ ಕಾಲನಾಮಕ ಪುರುಷ
ಜೀವಿಗಳು ಮುಖ್ಯವಲ್ಲ ಕಾಣೋ ಪ್ರಾಣಿ 19
ಭಗವವÀಸ್ವತಂತ್ರವನು ತಿಳಿಯದೆ ಮರುಳಾಗಿ
ಜಗದೊಳಗೆ ಚರಿಸದಿರೊ ಮಾನವ
ಅಘ ದೂರನಾಗೊ ನಾನಾ ಬಗೆಯಿಂದಲ-
ನ್ಯಗರ ಚಿಂತೆಗಳಲ್ಲಿ ಬಿಟ್ಟು ಪ್ರಾಣಿ 20
ಹಲವು ಮಾತೇನಿನ್ನು ದಾಸಭಾವವ ವಹಿಸಿ
ಕಲಿಯುಗದೊಳಗೆ ಸಂಚರಿಸೆಲೊ
ಬಲವಂತ ವಿಜಯವಿಠ್ಠಲನ ಪಾದಾಂಬುಜವ
ನಿಲಿಸಿ ವಲಿಸಿಕೊ ಮನಸಿನಲ್ಲಿ ಪ್ರಾಣಿ 21
********
ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು
ಸರಸಿಜಭವಾದ್ಯರಿಗೆ ಬಿಡದು ಪ
ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ
ದಿರದಾವ ಜನುಮವಾಗೆ ಪ್ರಾಣಿ ಅ.ಪ.
ವಾರಿಜಭವನ ನೋಡು ಮುನಿಶಾಪದಿಂ
ಧಾರುಣಿಯೊಳು ಪೂಜೆ ತೊರೆದ
ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ-
ತಾರವಿಲ್ಲದವನಾದನೋ ಪ್ರಾಣಿ1
ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು
ಯುಗದೊಳಗೆ ಕೋತ್ಯಾದನಲ್ಲೋ
ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ
ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ 2
ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ
ಅವನಿಪತಿ ಮೊರೆ ಹೊಕ್ಕನಲ್ಲೊ
ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ
ಸ್ರವಿಸುವುದು ಶಿರಸಿನಲ್ಲೀ ಪ್ರಾಣಿ 3
ಇಂದ್ರ ತರ್ಕವನೋದಿ ನರಿಯಾದ ಪರಸತಿ-
ಯಿಂದ ಮೇಷ ವೃಷಣನಾಭ
ಕಂದರ್ಪ ಶರೀರದಿಂದ ನಾಶನನಾಗಿ
ಬಂದ ಮೀನಿನ ಗರ್ಭದಿಂದ ಪ್ರಾಣಿ4
ಸೂರ್ಯ ಚಂದ್ರರ ನೋಡು ಮೂಲ ರೂಪದಿ ಪರ
ಭಾರ್ಯರಿಗೆ ಶಿಲುಕಿ ತಮ್ಮಾ
ವೀರ್ಯವನು ಕಳಕೊಂಡು ಬರಿದಾದರೋ ಕರ್ಮ-
ಕಾರ್ಯ ವಾರಿಗು ಬಿಡದೆಲೋ ಪ್ರಾಣಿ 5
ಪಾವಕನು ಸರ್ವಭಕ್ಷಕನಾದ ಮಿಕ್ಕಾದ
ಅವಾವ ಸುರರ ಕರ್ಮಂಗಳ
ಯಾವತ್ತು ವರ್ಣಿಸಲಳವಲ್ಲ ಎಚ್ಚತ್ತು
ಪಾವನ್ನ ನೀನಾಗೆಲೋ ಪ್ರಾಣಿ 6
ಆವಾವ ಸ್ಥಳದಲ್ಲಿ ಜನನ ಸ್ಥಿತಿಗತಿ ಮತ್ತೆ
ಸಾವು ಸಾಕಲ್ಯದಿ ಮರೆಯದಲೆ
ಕ್ಲುಪ್ತ ಮಾಡಿಪ್ಪನೋ ಅದನು
ಆವನಾದರು ಮೀರಲೊಳÀವೇ ಪ್ರಾಣಿ 7
ಉಣಬೇಕು ಉಣಬೇಕು ಮತ್ತೆ ಉಣಲೀಬೇಕು
ತ್ರಿ-ಗುಣ ಕಾರ್ಯರ ಭವಣೆ ಮನುಜ
ತೃಣ ಜನ್ಮ ಬಂದ ಕಾಲಕ್ಕು ತ್ರೈತಾಪಗಳು
ಅಣುಮಾತ್ರವೂ ತಪ್ಪವೋ ಪ್ರಾಣಿ 8
ಧೀರನಾಗಲಿ ಮಹಾಶೂರನಾಗಲಿ ಮತ್ತೆ
ಧಾರುಣೀಪತಿ ಭಾಗ್ಯನಾಗೆ
ಆರಿಗಾದರು ಬಿಡದು ಪರೀಕ್ಷಿತರಾಯನು
ನೀರೊಳಗಿದ್ದ ತಿಳಿಯೋ ಪ್ರಾಣಿ 9
ಜಲಗಿರಿವನ ಪೊದೆ ಹೊದರು ಗಹ್ವರ ಹುತ್ತ-
ಬಿಲ ಸಪ್ತದ್ವೀಪ ಪಾತಾಳದಿ
ನಭ ಸ್ವರ್ಗಾದಿಲೋಕ ಜನನಿಯ ಜಠರ-
ದೊಳಗಿರೆ ತಪ್ಪುವುದೆ ಬರಹಾ ಪ್ರಾಣಿ 10
ಅಣಿಮಾದಿ ಅಷ್ಟಾಂಗ ಯೋಗ ಮಾಡಲು ಮಹಾ
ಗುಣವಂತ ಜನರು ಒಂದು
ಕ್ಷಣವ ಮೀರಲುಬಹುದೆ ಮೃತ್ಯು ಬಂದೆದುರಾಗಿ
ಸೆಣಸುತಿರೆ ಬೇರುಂಟೆ ಕಾರ್ಯ ಪ್ರಾಣಿ 11
ಎಲ್ಲೆಲ್ಲೆ ಅನ್ನ ಮತ್ತೆಲ್ಲೆಲ್ಲಿ ಉದಕ ಇ-
ನ್ನೆಲ್ಲೆಲ್ಲಿ ನಿದ್ರೆ ಜಾಗರಣಿಯೊ
ಎಲ್ಲೆಲ್ಲಿ ಹೆಜ್ಜೆಗಳನಿಡುವ ಪರಿಮಿತಿಯುಂಟೊ
ಅಲ್ಲಿಲ್ಲಿಗೊಯ್ಯುವುದೊ ಬಿಡದೆ ಪ್ರಾಣಿ 12
ಧಿಕ್ಕಾರ ಸತ್ಕಾರ ನಿಂದೆ ವಂದನೆಗಳು
ರೊಕ್ಕಾ ಸುಖ ದುಃಖ ಕಾರಣಗಳು
ಉಕ್ಕೇರಿದಂತೆ ಬರುತಿಹುದೊ ನಮ್ಮ ದೇ-
ವಕ್ಕಿ ಕಂದನ ಆಜ್ಞಯಿಂದ ಪ್ರಾಣಿ 13
ಕಾಶಿಯಲ್ಲಿರೆ ಮರಣ ಆವಲ್ಲಿ ಇಪ್ಪುದಾ-
ದೇಶಕ್ಕೆ ಒಯ್ಯುವುದು ಕಾಲ
ಕಾಶಿರಾಯನ ನೋಡು ಒಡನೆ ಅಪಮೃತ್ಯು ವೇದ-
ವ್ಯಾಸರಿದ್ದರು ತಪ್ಪಲಿಲ್ಲ ಪ್ರಾಣಿ 14
ಮಾರುತ ಭಾರತಿ ಶೇಷ ಶಿವ ಪಾರ್ವತಿ-
ಸರಸಿಜ ಬಾಂಧವಾಗ್ನಿ ಧರ್ಮ
ಕಾಲ ಮೃತ್ಯು ಕಾಲನ ದೂತರು
ಅರಸುತಿಪ್ಪರು ಲವ ತೃಟಿಯ ಪ್ರಾಣಿ 15
ಇವರಿವರಿಗುತ್ತಮರು ಇವರಿವರಗಧಮರು
ಇವರೆಲ್ಲರಿಗೆ ಶ್ರೀ ಭೂಮಿ ದುರ್ಗಾ
ಅವಳಿಗೆ ಶ್ರೀ ಹರಿಯು ತಾನೆ ನಿಯಾಮಕನು
ವಿವರದಲಿ ತಿಳಿ ತಾರತಮ್ಯ ಪ್ರಾಣಿ 16
ಲಕುಮಿ ಮೊದಲು ಮಾಡಿ ಇವರೆಲ್ಲರಿಗೆ ಲೇಶ
ಶಕುತಿಯಿಲ್ಲವೊ ಕಾಣೊ ಮರುಳೆ
ಅಕಟಕಟ ಗುಣಪೂರ್ಣ ಸರ್ವ ಸ್ವಾತಂತ್ರ ವ್ಯಾ-
ಪಕ ಸರ್ವಾಂತರ್ಯಾಮಿಯೆನ್ನೋ ಪ್ರಾಣಿ 17
ಕರುಣಾ ಕಟಾಕ್ಷವುಳ್ಳನಕ
ಸುರ ನರೋರಗ ಯಕ್ಷಲೋಕದಲ್ಲಿದ್ದವರು
ಬರಿದೆ ಕೂಗಿದರೇನು ಆಹುದೋ ಪ್ರಾಣಿ 18
ಕಾಲ ತಪ್ಪಿಸಿ ಕಾವ ಹರಿತಾನು
ಸಾವ ಕಾಲವ ಮಾತ್ರ ತಪ್ಪಿಸನೋ
ಕಾವ ಕೊಲ್ಲುವ ಸ್ವಾಮಿ ಕಾಲನಾಮಕ ಪುರುಷ
ಜೀವಿಗಳು ಮುಖ್ಯವಲ್ಲ ಕಾಣೋ ಪ್ರಾಣಿ 19
ಭಗವವÀಸ್ವತಂತ್ರವನು ತಿಳಿಯದೆ ಮರುಳಾಗಿ
ಜಗದೊಳಗೆ ಚರಿಸದಿರೊ ಮಾನವ
ಅಘ ದೂರನಾಗೊ ನಾನಾ ಬಗೆಯಿಂದಲ-
ನ್ಯಗರ ಚಿಂತೆಗಳಲ್ಲಿ ಬಿಟ್ಟು ಪ್ರಾಣಿ 20
ಹಲವು ಮಾತೇನಿನ್ನು ದಾಸಭಾವವ ವಹಿಸಿ
ಕಲಿಯುಗದೊಳಗೆ ಸಂಚರಿಸೆಲೊ
ಬಲವಂತ ವಿಜಯವಿಠ್ಠಲನ ಪಾದಾಂಬುಜವ
ನಿಲಿಸಿ ವಲಿಸಿಕೊ ಮನಸಿನಲ್ಲಿ ಪ್ರಾಣಿ 21
********