Showing posts with label ಏಳು ವಾರಿಜನೇತ್ರ ಏಳು ಚಿನ್ಮಯಗಾತ್ರ prasannavenkata. Show all posts
Showing posts with label ಏಳು ವಾರಿಜನೇತ್ರ ಏಳು ಚಿನ್ಮಯಗಾತ್ರ prasannavenkata. Show all posts

Sunday 10 November 2019

ಏಳು ವಾರಿಜನೇತ್ರ ಏಳು ಚಿನ್ಮಯಗಾತ್ರ ankita prasannavenkata

by ಪ್ರಸನ್ನವೆಂಕಟದಾಸರು
ಏಳು ವಾರಿಜನೇತ್ರ ಏಳು ಚಿನ್ಮಯಗಾತ್ರಏಳು ಪಾಂಡವಪಾಲ ಏಳುಸಿರಿಭೂಲೋಲಏಳು ಪಾವನಚರಿತ ಏಳೆರಡು ಜಗಭರಿತಏಳು ಯದುಕುಲಲಲಾಮಾ  ಪ.

ಮೂಡುತಿವೆಅರುಣಕಿರಣೋಡುತಿವೆ ತಮದ ಕುಲಬಾಡುತಿವೆ ತಾರಿನನ ಬೇಡುತಿವೆ ಚಕ್ರವಾಕಾಡುತಿವೆಕೀರಬಲು ಪಾಡುತಿವೆತುಂಬಿನಲಿದಾಡುತಿವೆಖಗಸಮೂಹರೂಢಿಯೊಳು ಮುನಿಜನರು ನೋಡಿ ರವಿಗತ ಹರಿಯಷೋಡಶುಪಚಾರಾರ್ಚನೆ ಮಾಡಿ ಮನದಣಿಯೆ ಕೊಂಡಾಡಿ ಕುಣಿದಾಡಿ ಭವಕಾಡನೀಡಾಡಿವರಬೇಡುತೈದಾರೆ ಗಡ ಹರಿಯೆ 1

ವಿಷ್ಣುಪದೆ ವೃದ್ಧನದಿ ಕೃಷ್ಣವೇಣ್ಯಖಿಳ ಸಂಹೃಷ್ಟಿಪ್ರದೆ ಕಾವೇರಿ ಇಷ್ಟದಾ ಯಮುನೆಅಘನಷ್ಟಕಾರಣೆ ಭೀಮೆ ಶಿಷ್ಟಾಂಗೆ ತುಂಗೆವರತುಷ್ಟಿದಾಯಕ ನದಿಗಳುಕೃಷ್ಣ ನಿನ್ನಡಿಯುಗಳ ಸ್ಪøಷ್ಟರಾಗುತಲಿ ಉತ್ಕøಷ್ಟ ಪದ ಪಡೆವೆವೆಂದಷ್ಟ ದಿಗತಟದಿಂದಚೇಷ್ಟಿತ ತರಂಗದಿಂ ಸ್ಪಷ್ಟ ಬಂದಿರೆ ಕರುಣದೃಷ್ಟಿಯಿಂದವರ ನೋಡೈ ಹರಿಯೆ 2

ಕೇಶನಾಕೇಶ ಕಕುಭೇಶಾದಿ ಅಮರರಾಕಾಶದಲಿ ದುಂದುಭಿಯ ಘೋಷ ಮೊಳಗಿಸಿದರನಿಮೇಷ ಮುನಿ ವೀಣೆಯುಲ್ಲಾಸದಿಂ ಮಿಡಿಮಿಡಿದು ಧನಶ್ರೀ ಭೂಪಾಳಿಯಿಂದಶೇಷಶಯನಖಿಳ ನಿರ್ದೋಷಗುಣಪೂರ್ಣಸರ್ವೇಶ ಮುಕುಂದ ಭಟಕೋಶನೆಂದವರು ನಿನ್ನಬೇಸರದೆ ಪಾಡುತಿಹರು ಶ್ರೀಶ ಪ್ರಸನ್ವೆಂಕಟೇಶನೆ ಒಲಿದುಪ್ಪವಡಿಸೊ ಹರಿಯೆ 3
********