ಹರಿ ಹರಿ ಎನ್ನಿ ಸಿರಿಲೋಲ ಎನ್ನಿ pa
ಹರಿ ಹರಿ ಎನ್ನಿ ಹರಿ ಹರಿ ಎನ್ನಿ ಹರಿ ಎಂದು ಮನದೊಳು ಸ್ಮರಿಸುವ ಬನ್ನಿ 1
ಹರಿ ಎಂದು ಪಡೆದ ಪ್ರಹ್ಲಾದ ಪ್ರತ್ಯಕ್ಷ ಹರಿ ಎಂದು ಪಾಂಡವರಿಗಾದ ಸುಪಕ್ಷ 2
ಹರಿ ಎಂದು ಉಪಮನ್ಯು ಪಡೆದ ಸುಕಾಲ ಹರಿ ಎಂದು ಧ್ರುವ ಏರಿದ ಅಢÀಳ 3
ಹರಿ ಎಂದು ಮುನಿಜನರಾದರು ಧನ್ಯ ಹರಿ ಎಂದವರಿಗೆ ಸರ್ವವು ಮಾನ್ಯ 4
ಹರಿ ಹರಿ ಎಂದು ಕೊಂಡಾಡುವ ಬನ್ನಿ ಹರಿ ಮಹಿಪತಿ ಗುರು ತಾಯಿ ತಂದ್ಯೆನ್ನಿ 5
***