ಗಂಗೆ ಗೆಲಿಸಮ್ಮ ನಮ್ಮ ಪಂಥವ ಶ್ರೀರಂಗನ ರಾಣಿಯರ ಸೋಲಿಸುವೆ ಪ.
ಇಂದ್ರಲೋಕಕೆ ಬರಲು ವಂದಿಸಿ ಸುರರೆಲ್ಲಬಂದರು ಮೇರುಗಿರಿಗಾಗಬಂದರು ಮೇರುಗಿರಿಗಾಗ ಸ್ಕಂದನ ತಂದೆಯ ಭಾರ ವಹಿಸಿದ 1
ಸಗರನ ಮಕ್ಕಳ ಅಘದೂರವಾಗಲೆಂದುಭಗೀರಥ ಭಾಳ ತಪಮಾಡಿಭಗೀರಥ ಭಾಳ ತಪಮಾಡಲು ವ್ಯಾಜ್ಯದಿಜಗವ ನುದ್ಧರಿಸಿದ ಜಾಹ್ನವಿ2
ನಾಗಶಯನನ ಮಗಳು ಸಾಗರನ ನಿಜರಾಣಿಈಗ ನೀ ನಮ್ಮ ಗೆಲಿಸೆಂದುಈಗ ನೀ ನಮ್ಮ ಗೆಲಿಸೆಂದು ಸುಭದ್ರೆಬೇಗನೆ ಕೈಯ ಮುಗಿದಳು3
ಪ್ರಯಾಗ ರಾಜನ ಮುಂದೆ ವೇಗದಿ ಹರಿದಳುಹೋಗಿ ಸರಸ್ವತಿಯ ನೆರೆದಳುಹೋಗಿ ಸರಸ್ವತಿಯ ನೆರೆದು ಯಮುನೆಯ ಸೇರಿಸಾಗಿಹಳು ಕಾಶಿಪುರಕಾಗ 4
ಕಂಚಿ ಕಾಶಿ ಮುಂದೆ ಪಂಚಗಂಗೆಯೆನಿಸಿಅಂಚು ಅಂಚಿಗೆ ಮೆರೆಯೋಳುಅಂಚು ಅಂಚಿಗೆ ಮೆರೆಯುವರಾಮೇಶನ ಪಂಚಪ್ರಾಣಳ ಬಲಗೊಂಬೆ 5
****