Showing posts with label ಆಗಲಿ ಹರಿಕೃಪೆ ಭಾಗವತರ prasannavenkata. Show all posts
Showing posts with label ಆಗಲಿ ಹರಿಕೃಪೆ ಭಾಗವತರ prasannavenkata. Show all posts

Thursday, 7 November 2019

ಆಗಲಿ ಹರಿಕೃಪೆ ಭಾಗವತರ ankita prasannavenkata

by ಪ್ರಸನ್ನವೆಂಕಟದಾಸರು
ಆಗಲಿ ಹರಿಕೃಪೆ ಭಾಗವತರ 
ಸಂಗನೀಗುವೆ ನಿಮ್ಮ ದುರಿತಗಳಿರ ಪ.

ಹರಿನಂಟರೋಲೈಸಿ ಜ್ಞಾನಾಸ್ತ್ರ 
ಗಳಿಸುವೆಹರಿನಾಮ ವಜ್ರಕವಚ 
ತೊಡುವೆಹರಿನಿರ್ಮಾಲ್ಯದ ಉತ್ತಮಾಂಗಾಭರಣವಿಟ್ಟು
ನೆರೆನಿಮ್ಮ ನಾಮ ನಿರ್ನಾಮವ ಮಾಳ್ಪೆ1

ಶ್ರೀಲೋಲನಂಘ್ರಿ ಸಮ್ಮದ ಸೈನ್ಯವ 
ಕೂಡಿತಾಳ ದಂಡಿಗೆ ಗೀತಾಯುಧಗಳಿಂದ
ಕಾಲಕಾಲಕೆ ನಿಮ್ಮ ಮೇಳವ 
ಮುರಿದಾಡಿಹಾಳು ಮಾಡುವೆ ಕೈಯಲಿಕಡ್ಡಿಕೊಡುವೆ2

ಇಕ್ಷುಸ್ವಾದಾದರೆ ಬೇರಸಹಿತ ನೀವು
ಭಕ್ಷಿಸಬೇಡಿ ಬಾರದೆ ಮರಳಿಪಕ್ಷಿಗಮನ ಪ್ರಸನ್ನವೆಂಕಟೇಶನಪಕ್ಷದವರಹಗೆಹೊಲ್ಲಸಲ್ಲ3
******