..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕ್ರೋಧನ ನಾಮ ಸಂವತ್ಸರ ಸ್ತೋತ್ರ
ಕ್ರೋಧನ ಸಂವತ್ಸರ ನಿಯಾಮಕ ಸ್ವಾಮೀಶ್ರೀ ಪದುಮಾಲಯಪತಿ ನಾರಸಿಂಹನ ಪಾದ ಪದುಮದಲಿ ಶರಣಾದೆ ಸರ್ವಗ್ರಹದಲ್ಲಿ ಇದ್ದು ತಾ ಕೃತಿ ನಡೆಸಿ ಶರಣರ ಕಾಯ್ವ ಪ
ಈ ಸಂವತ್ಸರ ರಾಜಾ ಶುಕ್ರ ಮಂತ್ರೀ ಶನಿಯು ಶನೈಶ್ಚರನೇ ಸೈನ್ಯಾರ್ಘ ಮೇಘ ಸಸ್ಯಪತಿ ರಸಪಗುರು ನಿರಸ ಸಸ್ಯಪ ಮಂಗಳ ಸುಸೌಖ್ಯ ಬಹುಕ್ಷೀರ ಧಾನ್ಯ ವೃಷ್ಟಿದ ಚಂದ್ರ 1
ಕಾಡು ಕಿಚ್ಚು ಮೊದಲಾದ ಅಗ್ನಿಭಯ ರೋಗ ಪೀಡೆ ಜನರಲ್ಲು ರಾಜರಲು ಪರಸ್ಪರ ಅಡಿಗಡಿಗೆ ಸ್ನೇಹಹಾನಿ ಸೈನ್ಯಕಲಹ ದುಷ್ಟಭಯ ಕಳೆದು ಭಕ್ತರ ಕಾಯ್ವ ಹರಿ 2
ತತ್ವದೇವರ್ಗಳು ಸಭಾರ್ಯಾ ರವಿಸೋಮರು ಶಿವಾಶಿವ ವರ ಸಮೀರ ಇವರುಗಳಿಂ ಸೇವ್ಯ ಶ್ರೀ ಶ್ರೀಯುಕ್ ಪ್ರಾಣಯಮ್ಮೊಳ್‍ಜ್ವಲಿಸಿಕಾಯ್ವ ಸರ್ವಗ ವೇಧಪಿತ ಪ್ರಸನ್ನ ಶ್ರೀನಿವಾಸ 3
***