ರಾಗ: [ದರ್ಬಾರಿಕಾನಡ] ತಾಳ: [ಆದಿ]
ಗುರುದೇವಾ ಪ
ಗುರುದೇವಾ ಎನ್ನ ಗುರುದೇವಾ
ಕರುಣಿಸಿ ಪೊರೆಎನ್ನ ಮರುಕಪಡುವೆ ನಾನು
ಯಾರಾರ ನೋಡಿದೆ ಯಾರು ಎನಗೆ ಸಿಗಲಿಲ್ಲ
ಕಾರುಣ್ಯಮೂರ್ತಿಯೆ ನೀನೆನಗೆ ದಯೆತೋರಿದೆ 1
ಮಂದಮತಿಯು ನಾನು ಮನವು ತೋರದು ಏನು
ಸಂದಿತು ಎನ್ನಯ ಕಾಲವೆಲ್ಲ
ಇಂದು ನೀ ದಯೆತೋರಿ ಎನ್ನ ಮೊರೆಯಕೇಳ್ದೆ
ವಂದಿಪೆ ನಿನ್ನಯ ಚರಣದಡಿಗೆ ನಾನು 2
ತುಂಗಾಭದ್ರಾನದಿತೀರದಿ ನೆಲಸಿಹೆ
ಮಂಗಳಾ ನಿನ್ನ ಪಾಡುವೆನು
ರಂಗನಾಥನ ಭಕ್ತ ಶರಣರ ಪಾಲಿಪ
ಗಂಗಾಜನಕನ ಪಾದಸೇವಕ ನೀನು 3
***