ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳು ಕೇಳು ಕೇಳು ಮನವೇ ನಿನ್ನ ಸ್ವಹಿತವನು ಪ
ಕೇಳು ಕೇಳು ಕೇಳು ಮನವೇ ನಿನ್ನ ಸ್ವಹಿತವನು | ಬಾಳು ಬಾಳು ಬಾಳು ಗಳದು ಭವದ ಬೆಜ್ಜರವನು 1
ನೀಗು ನೀಗು ನೀಗು ನೀ ದುಸ್ಸಂಗಾ ಜಗದೊಳಗೆ | ಬೇಗ ಬೇಗ ಬೇಗ ಹೊಕ್ಕು ಶರಣಾಗು ಗುರುವಿಗೆ 2
ಬಾಗು ಬಾಗು ಬಾಗು ಗರ್ವ ತ್ಯಜಿಸಿ ಜಗದೊಳಗೆ | ಸಾಗು ಸಾಗು ಸಾಗು ಸಿಕ್ಕಿದೆ ಆರು ಅರಿಗಳಿಗೆ 3
ದಾರಿ ದಾರಿ ದಾರಿ ವಿಡಿದು ನಡೆಂದ ಹಿರಿಯರಾ | ಸೇರಿ ಸೇರಿ ಸೇರಿ ಸಂತ ನೆರಿಯ ನಿರಂತರಾ 4
ನಂಬಿ ನಂಬಿ ನಂಬಿ ನಂದನಸ್ವಾಮಿ ಮಹಿಪತಿಯಾ| ಇಂಬು ಇಂಬು ಪಡೆದರಹುದು ನಿಜಗತಿಯಾ 5
***