ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಬೆಳಗುವೆನಾ ಮಹಿಪತಿ ಗುರುವಿನಾ ದೋರುವ ಪಾದುಕಿಗೆ ಒಪ್ಪಿಸಿ ಜೀವಪ್ರಾಣ ಪ
ಜಡಜೀವತಾರಿಸಲಿ :ವಸ್ತುಗುರುರೂಪತಾಳಿ ಪೊಡವಿಲಿನ್ನು ಮಹಿಮೆದೋರಿ ನಿಂತ ವಿಶ್ವಾತ್ಮದಲ್ಲಿ 1
ಇದ್ದಲ್ಲೆ ಭಾವಿಸಲಿ ಗುರುಜ್ಞಾನದಾಕೀಲಿ ಬುದ್ಧಿಪ್ರೇರಕನಾಗಿ ಹೇಳುವನು ಮೌನದಲಿ2
ಉದ್ಧವಗಯದುರಾಯಾ ನೀಡಿದಂತೆ ನಮ್ಮಯ್ಯಾ ಮುದ್ದು ಪಾದುಕೆಯಾಕೊಟ್ಟು ಮಾಡೆಂದು ಪೂಜೆಯಾ 3
***