Showing posts with label ತೋರೆ ಬೇಗನೇ ತೋಯ ಜನಯನೆ ಮದವಾರಣ shree krishna TORE BEGANE TOYE JANAYANE MADAVAARANA. Show all posts
Showing posts with label ತೋರೆ ಬೇಗನೇ ತೋಯ ಜನಯನೆ ಮದವಾರಣ shree krishna TORE BEGANE TOYE JANAYANE MADAVAARANA. Show all posts

Friday, 20 December 2019

ತೋರೆ ಬೇಗನೇ ತೋಯ ಜನಯನೆ ಮದವಾರಣ ankita shree krishna TORE BEGANE TOYE JANAYANE MADAVAARANA

tvgc+suvarna

csr+ at krishna vrundavana Dallas Tx USA



ರಾಗ ಮೋಹನ
Audio by Vidwan Sumukh Moudgalya


ಶ್ರೀ ವ್ಯಾಸರಾಯರ ಕೃತಿ 
 

ತೋರೆ ಬೇಗನೆ ತೋಯಜನಯನೆ । ಮದವಾರಣ ಗಮನೆ ॥ಪ॥
ಮಾರನ ತಾಪಕೆ ಸೈರಿಸಲಾರೆನೆ
ನೀರೆ ನಿನಗೆ ಮುತ್ತಿನ್ಹಾರವ ಕೊಡುವೆ ॥ಅ.ಪ॥

ನೀರೊಳು ಮುಳುಮುಳುಗಾಡುತ ಬಂದು।ಮಥಿಸಿದನವ ಸಿಂಧು ।
ಧಾರುಣಿ ಚಿಮ್ಮುತ ಮೇಲಕೆ ತಂದು। ದನುಜನ್ನ ಕೊಂದು।
ಮೂರು ಪಾದವ ಬೇಡುತ ನಿಂದು । ಮುನಿಕುಲದಲಿ ಬಂದು॥
ನಾರಿಬಿಟ್ಟು ಪರನಾರಿಯರಾಳಿದ
ತೋರೆ ರಮಣಿ ಹಯವೇರಿ ಮೆರೆದನ ॥1॥

ಕತ್ತಲೆದೈತ್ಯನೊಡನೆ ಕಾದಿದ ಧೀರ । ಕಡೆದನು ಕೂಪಾರ ।
ಕುತ್ತಿ ಮಣ್ಣಗಿದು ಮೆದ್ದನು ಬೇರ । ದಾನವ ಸಂಹಾರ ।
ಒತ್ತಿ ಬಲಿಯನ್ನು ಕಾಯ್ದನು ಶೂರ । ಕುಜನಕುಠಾರ ॥
ಹತ್ತುಶಿರನ ಕತ್ತರಿಸಿ ಗೋಕುಲದೊಳು
ಬತ್ತಲೆ ರಾಹುತನಾಗಿ ಮೆರೆದನ ॥2॥

ನಿಗಮ ಕದ್ದವನ ನೀಗಿದ ಧಿಟ್ಟ । ನೆಗಹಿದ ಬೆಟ್ಟ ।
ಅಗಿದು ಮಣ್ಣನೆ ಜಠರದಲಿಟ್ಟ । ಘುಡಿಘುಡಿಸುವಸಿಟ್ಟ ।
ಜಗಕೆಲ್ಲ ನೋಡೆ ಎರಡಡಿಯಿಟ್ಟ । ಕೊಡಲಿಯ ಪೆಟ್ಟ ॥
ಮೃಗವ ಕೆಡಹಿ ಕುಂತಿ ಮಗಗೆ ಸಾರಥಿಯಾಗಿ
ಜಗವ ಮೋಹಿಸಿ ಹಯವೇರ್ದ ಶ್ರೀಕೃಷ್ಣನ ॥3॥
*********

by vyasaraja
ವ್ಯಾಸರಾಯರು
ತೋರೆ ಬೇಗನೆ ತೋಯಜನಯನೆ
ಮದವಾರಣ ಗಮನೆ ಪ

ಮಾರನ ತಾಪವ ಸೈರಿಸಲಾರೆನೆನೀರೆ 
ನಿನಗೆ ಮುತ್ತಿನ್ಹಾರವ ಕೊಡುವೆನೆ ಅ.ಪ

ನೀರೊಳು ಮುಳು ಮುಳುಗಾಡುತ 
ಬಂದುಮಥಿಸಿದ ಪಯ ಸಿಂಧುಧಾರುಣಿ 
ಚಿಮ್ಮುತ ಮೇಲಕೆ ತಂದುದನುಜನ್ನ 
ಕೊಂದುಮೂರುಪಾದವ ಬೇಡುತ 
ನಿಂದುಮುನಿಕುಲದಲಿ ಬಂದುನಾರಿಬಿಟ್ಟು 
ಪರನಾರಿಯರಾಳಿದತೋರೆರಮಣಿ ಹಯವೇರಿ ಮೆರೆದನ 1

ಕತ್ತಲೆ(ತಾಮಸ ದೈತ್ಯ)ನೊಡನೆ ಕಾದಿದನು 
ಧೀರಕಡೆದನು ಕೂಪಾರಕುತ್ತಿ ಮಣ್ಣಗಿದು 
ಮೆದ್ದನು ಬೇರದಾನವ ಸಂಹಾರ ಒತ್ತಿ ಬಲಿಯನು 
ಕಾಯ್ದನು ಶೂರಕುಜನ ಕುಠಾರ 
ಹತ್ತು ಶಿರನ ಕತ್ತರಿಸಿ ಗೋಕುಲದೊಳು
ಬತ್ತಲೆ ರಾಹುತನಾಗಿ ಮೆರೆದನ 2

ನಿಗಮ ಕದ್ದವನ ನೀಗಿದ ಧಿಟ್ಟನೆಗಹಿದ 
ಬೆಟ್ಟಅಗಿದು ಮಣ್ಣನೆ ಜಠರದಲ್ಲಿಟ್ಟಘುಡಿ 
ಘುಡಿಸುವಸಿಟ್ಟಜಗಕೆಲ್ಲ ನೋಡೆ ಎರಡಡಿಯಿಟ್ಟ
ಕೊಡಲಿಯ ಪೆಟ್ಟಮೃಗವ ಕೆಡಹಿ ಕುಂತಿಮಗಗೆ 
ಸಾರಥಿಯಾಗಿಜಗವ ಮೋಹಿಸಿ 
ಹಯವೇರ್ದ ಶ್ರೀಕೃಷ್ಣನ 3
***