Showing posts with label ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ jagannatha vittala. Show all posts
Showing posts with label ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ jagannatha vittala. Show all posts

Saturday 14 December 2019

ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ankita jagannatha vittala

ಜಗನ್ನಾಥದಾಸರು
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ

ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ.

ಮಧುವಿರೋಧಿಯಮಲ ಗುಣವ
ನಲಿದು ಪಾಡುವವನು 1

ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು
ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2

ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ
ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3

ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ
ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4

ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ
ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5

ಕರ್ಮ ವಿಹಿತ ಅಸಜ್ಜನರು ಮಾಳ್ಪ
ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6

ಸ್ವರ್ಗ ಭೂಮಿ
ಕರ್ಮ ಹರಿಸುವ ಹರಿಯೆಂಬ ನರನು7

ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8

ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ
ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9

ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ
ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10

ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ
ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11

ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ
ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12

ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ
ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13

ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ
ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14

ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ
ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15

ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ
ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16

ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ
ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17

ಕರ್ಮ ಸುದತಿಯರೊಡಗೂಡಿ ಸಮಾ
ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18

ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ
ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19

ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ
ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20

ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ
ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
*******