sumateendra teertha rayara mutt yati stutih
ರಚನೆ : ಸಾಧ್ವೀ ಗಿರಿಯಮ್ಮನವರು
ರಾಮ ಶ್ರೀ ರಘುನಂದನ ಶರಣು । ಸಾರ್ವ ।
ಭೌಮ ಭೂಸುರ ವಂದ್ಯ ।। ಪಲ್ಲವಿ ।।
ಸೋಮಶೇಖರ ಮಿತ್ರ ಕಾಮಿತ ಫಲದಾತ ।
ಕಾಮಧೇನು ವಿಶ್ವ ಭೀಮ ಸನ್ನುತ ಸೀತಾ ।। ಆ. ಪ ।।
ಕ್ರೂರ ದಾನವ ಸಂಹಾರ ಕೌಸಲ್ಯಾ ಕುಮಾರ । ಭೂ ।
ಭಾರ ಹರ ಭಜಕ ಜನೋದ್ಧಾರ ವೇದಾಂತಸಾರ ।
ಚಾರುವದನ ಮಣಿ ಹಾರ ಕುಂಡಲಧರ ।
ವೀರ ರಾಘವ ವಿಶ್ವಾಧಾರ ಕರುಣಿಸು ಸೀತಾ ।। ಚರಣ ।।
ಪಾಪ ರಹಿತ ಪಾವನ ಚರಿತ ಅಹಲ್ಯಾ ।
ಶಾಪ ಹರಣ ದಿವ್ಯ ರೂಪ ರಮಾರಮಣ ।
ತಾಪ ವಿಚ್ಛೇದನ ತಾಮಸ ಗುಣ ಹರಣ । ದ ।
ಯಾ ಪರಬ್ರಹ್ಮ ಸ್ವರೂಪ ಮೂರುತಿ ಸೀತಾ ।। ಚರಣ ।।
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ ।
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ।
ಸದಾನಂದ ಸುಮತೀಂದ್ರ ।
ಹೃದಯಾಬ್ಜ ಭೃಂಗ ।
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ ।। ಚರಣ ।।
*****
ರಾಗ : ಶಂಕರಾಭರಣ ತಾಳ : ತ್ರಿವಿಡಿ (raga, taala may differ in audio)
Rama sri ragunandana saranu | sarva |
Bauma busura vandya || pa ||
Somasekara mitra kamita paladata |
Kamadhenu visva bima sannuta sita || A. Pa ||
Krura danava samhara kausalya kumara | BU |
Bara hara Bajaka janoddhara vedantasara |
Caruvadana mani hara kundaladhara |
Vira ragava visvadhara karunisu sita || 1 ||
Papa rahita pavana carita ahalya |
Sapa harana divya rupa ramaramana |
Tapa viccedana tamasa guna harana | da |
Ya parabrahma svarupa muruti sita || 2 ||
Madanakoti mohananga madhava punyacharita |
Karunapamga helavanakatte rangayya |
Sadanamda sumatimdra |hrudayabja brunga |
Kadana vikrama bahu kodandadhruta sita || 3 ||
***
ಭೌಮ ಭೂಸುರವಂದ್ಯ
ಸೋಮಶೇಖರಮಿತ್ರ ಕಾಮಿತ ಫಲದಾತ್ರ
ಕಾಮಧೇನು ವಿಶ್ವಭೀಮ ಸನ್ನುತ ಸೀತಾ ||pa||
ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-
ಭಾರಹರ ಭಜಕÀಜನೋದ್ಧಾರ ವೇದಾಂತಸಾರ
ಚಾರುವದನ ಮಣಿಹಾರ ಕುಂಡಲಧರ
ವೀರರಾಘವ ವಿಶ್ವಾಧಾರ ಕರುಣಿಸು ಸೀತಾ ||1||
ಪಾಪರಹಿತ ಪಾವನ ಚರಿತ ಅಹಲ್ಯಾ
ಶಾಪ ಹರಣ ದಿವ್ಯರೂಪ ರಮಾರಮಣ
ತಾಪ ವಿಚ್ಛೇದನ ತಾಮಸ ಗುಣಹರಣ ದ-
ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ ||2||
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ
ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ||3||
********
ರಾಮ ಶ್ರೀ ರಘುನಂದನ
ಶರಣು । ಸಾರ್ವ ।
ಭೌಮ ಭೂಸುರ ವಂದ್ಯ ।
ಸೋಮಶೇಖರ ಮಿತ್ರ
ಕಾಮಿತ ಫಲದಾತ ।
ಕಾಮಧೇನು ವಿಶ್ವ ಭೀಮ
ಸನ್ನುತ ಸೀತಾ ।। ಪಲ್ಲವಿ ।।
ಕ್ರೂರ ದಾನವ ಸಂಹಾರ
ಕೌಸಲ್ಯಾ ಕುಮಾರ । ಭೂ ।
ಭಾರ ಹರ ಭಜಕ ಜನೋದ್ಧಾರ
ವೇದಾಂತ ಸಾರ ।
ಚಾರು ವದನ ಮಣಿಹಾರ
ಕುಂಡಲಧರ ।
ವೀರ ರಾಘವ ವಿಶ್ವಾಧಾರ
ಕರುಣಿಸು ಸೀತಾ ।। ಚರಣ ।।
ಪಾಪ ರಹಿತ ಪಾವನ
ಚರಿತ ಅಹಲ್ಯಾ ।
ಶಾಪ ಹರಣ ದಿವ್ಯ
ರೂಪ ರಮಾರಮಣ ।
ತಾಪ ವಿಚ್ಛೇದನ
ತಾಮಸ ಗುಣ ಹರಣ । ದ ।
ಯಾಪರ ಬ್ರಹ್ಮ ಸ್ವರೂಪ
ಮೂರುತಿ ಸೀತಾ ।। ಚರಣ ।।
ಮದನಕೋಟಿ ಮೋಹನಾಂಗ
ಮಾಧವ ಪುಣ್ಯ ಚರಿತ ।
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ।
ಸದಾನಂದ ಸುಮತೀಂದ್ರ ಹೃದಯ -
ಪಂಕಜ ಭೃಂಗ ।
ಕದನ ವಿಕ್ರಮ ಬಾಹು ಕೋದಂಡ
ಧೃತ ಮೂಲ ಸೀತಾ ।। ಚರಣ ।।