kruti by ಗುರುರಾಮವಿಠಲ
ರಾಗ: ದರ್ಬಾರು ತಾಳ: ಅಟ
ಗುರುವೆ ರಾಘವೇಂದ್ರ ಪ
ಗುರುವೆ ಆಶ್ರಿತ ಸುರತರುವೆನುತಲಿನಿನ್ನ
ಚರಣ ನಂಬಿದವರಿಗೆ ಪರಮಾನುಗ್ರಹ ಮಾಳ್ಪ ಅ.ಪ
ಮಂತ್ರಾಲಯದಲಿ ನೀನಿಂತುನಿರಂತರ
ಸಂತರಿಷ್ಟಾರ್ಥವ ಸಲಿಸುತಲಿರುವೆ ಸದ್ಗುರುವೆ 1
ಜಡಮೂಕಬಧಿರಾಂಧರು ನಿನ್ನ ಭಜಿಸಲು
ದೃಢ ಮಾಡಿ ಅವರ ಆದರಿಸುವೆ ಸತತಸದ್ಗುರುವೆ 2
ಸ್ಮರಣೆ ಮಾಳ್ಪರ ಭವ ದುರಿತಗಳ ತರಿವ
ಗುರುರಾಮವಿಠಲನ ಶರಣರಗ್ರಣಿಯೆ ಸದ್ಗುರುವೆ 3
***