ರಾಗ : ಮೋಹನ ತಾಳ : ಅಟ
ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ
ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ ।।ಪ॥
ವಿತ್ತವುಳ್ಳವನ ಕುಲ ಎಣಿಸುವುದುಂಟೆ
ಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ ।।೧।।
ಅತ್ತೆಮನೆ ಸೇರುವಗೆ ಅಭಿಮಾನವುಂಟೆ
ಬತ್ತಲೆ ತಿರುಗುವಗೆ ಭಯವು ಇನ್ನುಂಟೆ ।।೨।।
ಪೃಥ್ವಿಯೊಳಗೆ ಕಾಗಿನೆಲೆಯಾದಿ ಕೇಶವಗೆ
ಮರ್ತ್ಯದೊಳನ್ಯ ದೇವರು ಸರಿಯುಂಟೆ ।।೩।।
***
Hetta tayiginta atyadhika mayavunte
Uttama asvava katte holuvudunte ||pa||
Vittavullavana kula enisuvudunte
Svarthake nyaya endadaru unte ||1||
Attemane seruvage abimanavunte
Battale tiruguvage Bayavu innunte ||2||
Pruthviyolage kagineleyadi kesavage
Martyadolanya devaru sariyunte ||3||
***