ಕೇಳುವದರೊಳಗೆ ಕಳದಿಯಲ್ಲ ದಿನ ಮಾಡುವ-
ದೆಂದ್ಹೇಳಲೆ ಮನವೆ ಪ
ಮನನ ಮಾಡಿ ಮಾಧವನ ಮಹಿಮೆ
ಅನುಭವಕೆ ತಾರದೆ ಈ ಪರಿಯಲಿ ಬರೆ ಅ.ಪ
ಪರರ ಹರಟೆಗೆ ಪರವಶನಾಗುತ ನಿರುತ ಈ
ಪರಿ ಕಾಲ ಕಳೆವೆ
ಮರಳಿ ಹರಿಸ್ಮರಿಸರೆಂದು ಡಂಗುರ ಹೊಯ್ಯವ
ಗುರುಹಿರಿಯರ ನುಡಿಗಳು 1
ಹೆಣ್ಣು ಮಣ್ಣು ಹಣವನ್ನು ನಂಬಿ ನೀನು
ಕೆಡದಿರೆಲೊಯಂದೆನುತ
ಚನ್ನಾಗಿ ಸರ್ವತ್ರ ಕೇಳಿ ನೀ ಮುನ್ನಿನಂತೆ
ಆಚರಿಸುತಿರುವಿಯಾ 2
e್ಞÁನವಿಟ್ಟು ಪವಮಾನ ವಂದಿತನ
ಗಾನಮಾಡು ಶ್ರೀಹರಿಗುಣವಾ
ಮಾನದ ಸಿರಿ ಗೋವಿಂದವಿಠಲಗೆ ಹೀನ
ಲೇಸುಗಳ ಅರ್ಪಿಸು ಮರೆಯದೆ 3
***