Showing posts with label ನಾಗರಾಜ ನರಸುರ ನಮಿತೇ ಸಾಗರ ಕರುಣೀ ಸರಸ್ವತೀ govinda. Show all posts
Showing posts with label ನಾಗರಾಜ ನರಸುರ ನಮಿತೇ ಸಾಗರ ಕರುಣೀ ಸರಸ್ವತೀ govinda. Show all posts

Wednesday, 13 November 2019

ನಾಗರಾಜ ನರಸುರ ನಮಿತೇ ಸಾಗರ ಕರುಣೀ ಸರಸ್ವತೀ ankita govinda

by ಗೋವಿಂದದಾಸ
ನಾಗರಾಜ ನರಸುರ ನಮಿತೇ |ಸಾಗರ ಕರುಣೀ ಸರಸ್ವತೀ ||ಕೋಗಿಲ ಗಾನವಿನೋದಿತೇ ಬೇಗನೆವರಗಳ ಕೊಡು ಮಾತೇ ಪಶೃಂಗೇರಿ ಪುರವರ ನಿಲಯೇ |ಮಂಗಲಚರಣೆ ಶಾರದೆಯೇ |ಭೃಂಗಕುಂತಲೆಭವಭಂಗನಿವಾರಿಣಿ |ರಂಗನ ಸುತನರ್ಧಾಂಗಿಯೆ ರಕ್ಷಿಸು 1

ಪುಸ್ತಕಹಸ್ತಜಗದ್ಭರಿತೇ ಉತ್ತಮಳೆಮಕುಟಾನ್ವಿತದಾತೇ |ಪೃಥ್ವಿಪಾಲ ಮನದರ್ಥಿಯ ಸಲಿಸುವ |ಸ್ವಸ್ತಿಶ್ರೀಮನ್ಮಥನತ್ತಿಗೆ ಶಾರದೆ 2

ಕುಂದಮಂದಾರಪುಷ್ಪಗಳ |ಚಂದಣ ಕುಂಕುಮ ಗಂಧಂಗಳಮಂದಗಮನೆ ಅರವಿಂದನಯನೆ ಗೋವಿಂದನ ಸೊಸೆಗಾನಂದದೊಳರ್ಚಿಸಿ 3
*********