Showing posts with label ನಂಬಿಗಿಲ್ಲಾ ಈ ಮನಸಿನಾ ಒಂದು ನೆನೆಯೆ ಮತ್ತೊಂದು gurumahipati. Show all posts
Showing posts with label ನಂಬಿಗಿಲ್ಲಾ ಈ ಮನಸಿನಾ ಒಂದು ನೆನೆಯೆ ಮತ್ತೊಂದು gurumahipati. Show all posts

Wednesday, 1 September 2021

ನಂಬಿಗಿಲ್ಲಾ ಈ ಮನಸಿನಾ ಒಂದು ನೆನೆಯೆ ಮತ್ತೊಂದು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಂಬಿಗಿಲ್ಲಾ ಈ ಮನಸಿನಾ ಪ 


ಒಂದು ನೆನೆಯೆ ಮತ್ತೊಂದು ನೆನೆಯುತಾ | ಒಂದರೆ ಘಳಿಗೆ ಹೊಂದದೆ ಸದ್ಗುಣ | ಕೂಪ ಹೋಗುವಂದದಿ ವಿಷಯ | ಮ | ದಾಂಧದಿ ಜೀವನ ಬಂಧಿಸುದೈಯ್ಯಾ 1 

ಧೀರ ಶಾಸ್ತ್ರ ವಿಚಾರ ಕರ್ಮದಿ | ಶೂರರ ತಪ ವಿಹಾರರ ಜಗದೊಳು | ಆರಾದರಾಗಲಿ ಕ್ರೂರ ಕರ್ಮದಾ | ಗಾರ ಹುಗಿಸಿ ಘನ ಹೊರುವದೈಯ್ಯಾ 2 

ಪುಣ್ಯದ ದಾರಿಗೆ ಕಣ್ಣವ ದೆರಿಯದು | ಅನ್ಯಾಯದಿ ಒಡಲನೇ ಹೊರುವದು | ಸನ್ನತ ಮಹಿಪತಿ ಚಿನ್ನನ ಪ್ರಭುದಯ | ಮುನ್ನಾದರ ಇನ್ನಾನರಿಯೇ 3

***