Showing posts with label ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ mahipati. Show all posts
Showing posts with label ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ mahipati. Show all posts

Wednesday, 1 September 2021

ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಪ 

ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 

ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 

ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3

****