Audio by Mrs. Nandini Sripad
ರಾಗ ಕಲ್ಯಾಣಿ
ಧ್ರುವತಾಳ
ಹರಿ ಪರಮ ಪುರುಷ ಇಂದಿರಾದೇವಿಯರಸ ಪರಿಪೂರ್ಣವತಾರ ಪಾಪ ವಿದೂರ
ನಿರುತ ಸಾಕಾರ ಸದ್ಗುಣ ಪಾರಾವಾರ
ಚರಿತವ ಪ್ರಾಕೃತ ಶರೀರಲಂಕೃತ
ಜರ ಜಡ ದುರಿತ ಜನನ ಮರಣ ರಹಿತ
ಸುರರಿಗೆ ದಾತಾರ ಆಗಮ ಗೋಚರ
ಪರಶಕ್ತಿರಾನಂತ ಗುಣ ಪರಮ ಶಾಂತ
ಸರುವೋತ್ತಮ ಹರಿ ಎಂದು ಸಾರಿ ಸಾರಿಗೆ
ಕರದು ಪಾವನನಾಗು ಕರ್ಮವನ್ನು ನೀಗು
ಅರೆ ಮರೆ ಬಿಡು ಕಿಂಕರನಾಗಿ ನೋಡು ದಾ -
ಸರ ದಾಸನಾಗು ನಿನ್ನ ಶಿರವನ್ನು ಬಾಗು
ಪರಮೇಷ್ಠಿ ನಾಮ ಶಿರಿ ವಿಜಯವಿಠ್ಠಲ ಕರುಣಿ
ಮರಿಯದೆ ಸ್ಮರಿಸಲು ನೇರವಾಗಿ ಬರುವ ॥ 1 ॥
ಮಟ್ಟತಾಳ
ಮಂದರಧರ ಗೋವಿಂದ ಮುಕುಂದ
ಚಂದಿರವದನ ವೈಕುಂಠವಾಸ
ನಂದನಂದನ್ನ ಉಪೇಂದ್ರ ವಾಮನ್ನ
ಶಿಂಧುಶಯನ ಎನ್ನ ವಿಜಯವಿಠ್ಠಲ
ಬಂಧು ಎಂದೆನಲು ಬಂದೀಗ ನಿಲುವ
ಎಂದೆಂದಿಗೆ ನೀ ವಂದಿಸಿ ಬೇಡೊ ॥ 2 ॥
ತ್ರಿಪುಟತಾಳ
ಕೇಶವ ಎನ್ನು ನಾರಾಯಣ ಎನ್ನು
ಕೇಶಿಮರ್ದನ ನರಕೇಸರಿ ಎನ್ನು
ವಾಸುದೇವ ಎನ್ನು ವಾಸುದೇವ ಎನ್ನು
ಈಶ ವಂದಿತ ಕಾಶಿವಾಸನೆನ್ನು
ದೋಷರಾಶಿ ಗಿರಿಗೆ ಕುಲಿಶ ಎನ್ನಿರೊ
ಮೀಸಲ ಪದವೀಯ ನೀವನೆನ್ನು
ಶಾಶ್ವಿತ ವಿಜಯವಿಠ್ಠಲನೆ ದೈವವೆನ್ನು
ನೀ ಸುಖಿಯಾಗಿ ನಿಷ್ಕಾಮವ ಬಯಸೂ ॥ 3 ॥
ಅಟ್ಟತಾಳ
ಭಾಗವತನಾಗು ಭಾಗೀರಥಿಗೆ ಪೋಗು
ಸಾಗರವನ್ನು ಮಿಂದು ಕೃತಾರ್ಥನೆಂದು
ಯೋಗಿಗಳರ್ಚಿಸು ಯತಾರ್ಥಭಾವಿಸು
ಭೋಗಾನುಸಾರದಿ ಭೋಗದೊಳು ಪೊಂದಿ
ಲೋಗರಿಗೆ ಶಿರಬಾಗಿ ಬೇಡದಿರೂ
ವಾಗ್ಮಿನೆ ವಿಜಯವಿಠ್ಠಲನ್ನ ನಂಬಲು
ಯೋಗಕ್ಷೇಮ ವಹಾಮ್ಯಹಂ ಎಂಬ ಮಾತಿಲಿ
ವೇಗದಿಂದಲಿ ಬಂದು ಭಾರವಹಿಸುವಾ ॥ 4 ॥
ಆದಿತಾಳ
ತತ್ವಸಾರದ ಬುತ್ತಿಯ ಕಟ್ಟು
ಉತ್ತಮ ಮಾರ್ಗದ ಸೋಪಾನ ಮೆಟ್ಟು
ಮಿಥ್ಯಾಚಾರದ ವಚನವ ಬಿಟ್ಟು
ಹತ್ತಿದ ದುರಿತದ ಭಯಗಳ ಕುಟ್ಟು
ಸತ್ಯ ವಿಜಯವಿಠ್ಠಲನ್ನ ಪಾದ
ಚಿತ್ತ ಮಧ್ಯದಲಿ ಚನ್ನಾಗಿ ಇಟ್ಟು ॥ 5 ॥
ಜತೆ
ಬಿಡು ಬಿಡು ಬಿಡು ಹಲವಂಗ ಆವಾವ ಕಾಲಕ್ಕೆ
ತೊಡು ತೊಡು ತೊಡು ವಿಜಯವಿಠ್ಠಲ ಕರುಣಕವಚ ॥
***********
ಶ್ರೀ ವಿಜಯದಾಸಾರ್ಯ ಕೃತ ಹರಿ ಕರುಣ ಸಂಪಾದನಾ ಸುಳಾದಿ
ರಾಗ ಕಲ್ಯಾಣಿ
ಧ್ರುವತಾಳ
ಹರಿ ಪರಮ ಪುರುಷ ಇಂದಿರಾದೇವಿಯರಸ |
ಪರಿಪೂರ್ಣವತಾರ ಪಾಪ ವಿದೂರ |
ನಿರುತ ಸಾಕಾರ ಸದ್ಗುಣ ಪಾರಾವಾರ |
ಚರಿತವ ಪ್ರಾಕೃತ ಶರೀರಾಲಂಕೃತ |
ಜರ ಜಡ ದುರಿತ ಜನನ ಮರಣ ರಹಿತ |
ಸುರರಿಗೆ ದಾತಾರ ಆಗಮ ಗೋಚರ |
ಪರಶಕ್ತಿರಾನಂತ ಗುಣ ಪರಮಶಾಂತ |
ಸರುವೋತ್ತಮ ಹರಿ ಎಂದು ಸಾರಿ ಸಾರಿಗೆ |
ಕರದು ಪಾವನನಾಗು ಕರ್ಮವನ್ನು ನೀಗು |
ಅರೆ ಮರೆ ಬಿಡು ಕಿಂಕರನಾಗಿ ನೋಡು ದಾ - |
ಸರ ದಾಸನಾಗು ನಿನ್ನ ಶಿರವನ್ನು ಬಾಗು |
ಪರಮೇಷ್ಠಿ ನಾಮ ಶಿರಿ ವಿಜಯವಿಠ್ಠಲ ಕರುಣಿ |
ಮರಿಯದೆ ಸ್ಮರಿಸಲು ನೆರವಾಗಿ ಬರುವ || ೧ ||
ಮಟ್ಟತಾಳ
ಮಂದರಧರ ಗೋವಿಂದ ಮುಕುಂದ |
ಚಂದಿರವದನ ವೈಕುಂಠವಾಸ |
ನಂದನಂದನ್ನ ಉಪೇಂದ್ರ ವಾಮನ್ನ |
ಶಿಂಧುಶಯನ ಎನ್ನ ವಿಜಯವಿಠ್ಠಲ |
ಬಂಧು ಎಂದೆನಲು ಬಂದೀಗ ನಿಲುವ |
ಎಂದೆಂದಿಗೆ ನೀ ವಂದಿಸಿ ಬೇಡೊ || ೨ ||
ತ್ರಿಪುಟತಾಳ
ಕೇಶವ ಎನ್ನು ನಾರಾಯಣ ಎನ್ನು |
ಕೇಶಿಮರ್ದನ ನರಕೇಸರಿ ಎನ್ನು |
ವಾಸುದೇವ ಎನ್ನು |
ಈಶ ವಂದಿತ ಕಾಶಿವಾಸನೆನ್ನು |
ದೋಷರಾಶಿ ಗಿರಿಗೆ ಕುಲಿಶ ಎನ್ನಿರೊ |
ಮೀಸಲ ಪದವೀಯ ನೀವನೆನ್ನು |
ಶಾಶ್ವಿತ ವಿಜಯವಿಠ್ಠಲನೆ ದೈವವೆನ್ನು |
ನೀ ಸುಖಿಯಾಗಿ ನಿಷ್ಕಾಮವ ಬಯಸೂ || ೩ ||
ಅಟ್ಟತಾಳ
ಭಾಗವತನಾಗು ಭಾಗೀರಥಿಗೆ ಪೋಗು |
ಸಾಗರವನ್ನು ಮಿಂದು ಕೃತಾರ್ಥನೆಂದು |
ಯೋಗಿಗಳರ್ಚಿಸು ಯತಾರ್ಥಭಾವಿಸು |
ಭೋಗಾನುಸಾರದಿ ಭೋಗದೊಳು ಪೊಂದಿ |
ಲೋಗರಿಗೆ ಶಿರಬಾಗಿ ಬೇಡದಿರೂ |
ವಾಗ್ಮಿನೆ ವಿಜಯವಿಠ್ಠಲನ್ನ ನಂಬಲು |
ಯೋಗಕ್ಷೇಮ ವಹಾಮ್ಯಹಂ ಎಂಬ ಮಾತಿಲಿ |
ವೇಗದಿಂದಲಿ ಬಂದು ಭಾರವಹಿಸುವಾ || ೪ ||
ಆದಿತಾಳ
ತತ್ವಸಾರದ ಬುತ್ತಿಯ ಕಟ್ಟು |
ಉತ್ತಮ ಮಾರ್ಗದ ಸೋಪಾನ ಮೆಟ್ಟು |
ಮಿಥ್ಯಾಚಾರದ ವಚನವ ಬಿಟ್ಟು |
ಹತ್ತಿದ ದುರಿತದ ಭಯಗಳ ಕುಟ್ಟು |
ಸತ್ಯ ವಿಜಯವಿಠ್ಠಲನ್ನ ಪಾದ |
ಚಿತ್ತ ಮಧ್ಯದಲಿ ಚೆನ್ನಾಗಿ ಇಟ್ಟು || ೫ ||
ಜತೆ
ಬಿಡು ಬಿಡು ಬಿಡು ಹಲವಂಗ ಆವಾವ ಕಾಲಕ್ಕೆ |
ತೊಡು ತೊಡು ತೊಡು ವಿಜಯವಿಠ್ಠಲ ಕರುಣಕವಚ ||
***********