Showing posts with label ಗುರುಗಳ ದರುಶನವಾಯಿತು ಎನಗೆ ಇನ್ನೇನಿನ್ನೇನು janakiramana. Show all posts
Showing posts with label ಗುರುಗಳ ದರುಶನವಾಯಿತು ಎನಗೆ ಇನ್ನೇನಿನ್ನೇನು janakiramana. Show all posts

Monday, 6 September 2021

ಗುರುಗಳ ದರುಶನವಾಯಿತು ಎನಗೆ ಇನ್ನೇನಿನ್ನೇನು ankita janakiramana

 ರಾಗ: ಸೌರಾಷ್ಟ್ರ/ಆರಭಿ ತಾಳ: ಅಟ


ಗುರುಗಳ ದರುಶನವಾಯಿತು ಎನಗೆ ಇನ್ನೇನಿನ್ನೇನು 

ಪರಮಾನುಗ್ರಹ ಮಾಡಿದರೆನೆಗೆ ಇನ್ನೇನಿನ್ನೇನು


ತುಂಗತೀರಕೆಪೋಗಿ ಸ್ನಾನವಗೈದೆನು ಇನ್ನೇನಿನ್ನೇನು 

ಮಂಗಳಮಹಿಮರತೀರ್ಥ ಪ್ರಾಶನಗೈದೆ ಇನ್ನೇನಿನ್ನೇನು 1

ಉದಯಕಾಲದೊಳೆದ್ದು ಗುರುಗಳ ಸ್ಮರಿಸಿದೆ ಇನ್ನೇನಿನ್ನೇನು

ಬೃಂದಾವನದಿಶೋಭಿಪ ಗುರುಗಳ ನೋಡಿದೆ ಇನ್ನೇನಿನ್ನೇನು 2

ಭಂಟನಾಗಿ ಬಾಗಿಲಕಾಯ್ದೆ ಗುರುಗಳ ಇನ್ನೇನಿನ್ನೇನು

ನೆಂಟರಿನ್ನ್ಯಾರೂ ಎನಗಿಲ್ಲವೆಂದೆ ಇನ್ನೇನಿನ್ನೇನು 3

ಜನ್ಮಜನ್ಮಾಂತರದಪಾಪಗಳ ಕಳೆದರು ಇನ್ನೇನಿನ್ನೇನು

ಕಣ್ಣಿನಿಂದಲಿನೋಡಿ ಧನ್ಯನಾದೆನು ಇನ್ನೇನಿನ್ನೇನು 4

ಘನಕರುಣವಾರಿಧಿ ರಾಘವೇಂದ್ರರ ಕಂಡೆ ಇನ್ನೇನಿನ್ನೇನು

ಜಾನಕಿರಮಣನ ಮನದಲಿ ಸ್ಮರಿಸಿದೆ ಇನ್ನೇನಿನ್ನೇನು 5

***