Showing posts with label ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ rangavittala. Show all posts
Showing posts with label ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ rangavittala. Show all posts

Tuesday, 10 December 2019

ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ ankita rangavittala

ನಾರಾಯಣಿ ರಾಗ ಆದಿತಾಳ

ಸುಮ್ಮನೆ ವೈಷ್ಣವನೆಂಬಿರಿ ಪರ-
ಬೊಮ್ಮ ಸುಜ್ಞಾನವನರಿಯದ ಮನುಜನ ||ಪ||

ಮುಖವ ತೊಳೆದು ನಾಮವನಿಟ್ಟೆನಲ್ಲದೆ
ಸುಖತೀರ್ಥ ಶಾಸ್ತ್ರವನೋದಿದೆನೆ
ಸುಖಕೆ ಶೃಂಗಾರಕೆ ಮಾಲೆ ಹಾಕಿದೆನಲ್ಲದೆ
ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||೧||

ಊರು ಮಾತುಗಳಾಡಿ ದಣಿದೆನಲ್ಲದೆ
ನಾರಾಯಣ ಕೃಷ್ಣ ಶರಣೆಂದೆನೆ
ನಾರಿಯ ನುಡಿ ಕೇಳಿ ಮರುಳಾದೆನಲ್ಲದೆ
ಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ ||೨||

ನರೋತ್ತಮರಿಗಧಿಕ ಗಂಧರ್ವರಿಗಧಿಕ
ಸುರೇಂದ್ರಗಧಿಕ ಹರಗಧಿಕ
ವಿರಿಂಚಿಗಧಿಕ ಸಿರಿಗಧಿಕ
ಹರಿಸರ್ವೋತ್ತಮನೆಂದು ತಿಳಿದೆನೇನಯ್ಯ ||೩||

ಜಗತು ಸತ್ಯವೆಂದು ಪಂಚಭೇದವ ತಿಳಿದು
ಮಿಗೆ ರಾಗದ್ವೇಷಂಗಲನು ವರ್ಜಿಸಿ
ಭಗವಂತನ ಲೀಲೆ ಶ್ರವಣ ಕಥೆಗಳಿಂದ
ನಿಗಮಗೋಚರನೆಂದು ತಿಳಿದೆನೇನಯ್ಯ ||೪||

ಗಂಗೆಯಲಿ ಮೈಮಣ್ಣ ತೊಳೆದೆನಲ್ಲದೆ ಭವ
ಹಿಂಗುವ ಸ್ನಾನವ ಮಾಡಿದೆನೆ
ರಂಗವಿಠಲನ ನಿಜವಾದ ದಾಸರ
ಸಂಗಸುಖವೆಂದು ತಿಳಿದೆನೇನಯ್ಯ ||೫||
***

Summane vaishnavane nambiri | parabrahma suj~jaanavanariyada manujara || pa ||

Ooru maatugalaadi danidenallade | naaraayana krushna sharanendene ||
naariyara nudikeli marulaadenallade | aaryara maatu mannisidenenayya || 1 ||

Mukhava toledu naama balakondenallade | sukhateerthara shaastra Odidene ||
mukha shrungaarake manasotenallade | bhakutirasadalli omme mulugidenenayya || 2 ||


Jagatu satyavendu panchabheda tilidu | migeraaga dweshagalanu varjisi ||
hagalirulu bhaagavata kathaa shravanadi | nigamagocarananu bhajisidenenayya || 3 ||

Narottamagadhika gandharvagadhika | surendragadhika haragadhika ||
saraswatigadhika virinchigadhika | shreetarunigadhika shree hariyandenenayya || 4 ||

Gangeyolangavanaddidenallade | hingade snaanava maadidene ||
rangaviththalana nijavaada daasara | sangadolage olaadidenenayya || 5 ||
***

ಚಿಂತನ

ನಾಟಕ ಆಡುವವರು ರಂಜಿಸುತ್ತಾರೆ... ನಾಟಕ ಮಾಡುವವರು ವಂಚಿಸುತ್ತಾರೆ...


ನೂರಕ್ಕೆ ನೂರರಷ್ಟು ಸತ್ಯವಾದ ಮಾತು
ನಿಜವಾಗಿಯೂ ಗಾಢವಾದ ನಿದ್ರೆಯಲ್ಲಿದ್ದವನ್ನು ಕದಾಚಿತ್ ಪ್ರಸಂಗ ಒದಗಿ ಬಂದಲ್ಲಿ ಅನಿವಾರ್ಯವಾದಲ್ಲಿ ಸುಲಭವಾಗಿ ಎಬ್ಬಿಸಬಹುದು
ಆದರೇ....ನಿದ್ರೆಯ ನಾಟಕ ಮಾಡುವವನನ್ನು ಎಬ್ಬಿಸುವುದು 
ಅಷ್ಟೇ ಪ್ರಯಾಸವಾದುದು ಸಾಹಸವೆನಿಸುವುದು (ಕಷ್ಟಸಾಧ್ಯ)

ವಂಚಕ , ನಾಟಕ ಎರಡೂ ಪರಸ್ಪರ ಪರ್ಯಾಯ ಶಬ್ದಗಳು ಅಂದ್ರೆ ಬಹುಶಃ ತಪ್ಪಾಗಲಿಕ್ಕಿಲ್ಲ

ಗೋಮುಖವ್ಯಾಘ್ರ ರಂತೆ ನಾಟಕ ಮಾಡೋದು ಅಂದ್ರೂ ಒಂದೇ
ಅಮಾಯಕರನ್ನು ವಂಚಿಸೋದು ಅಂದ್ರೂ ಒಂದೇ (ಹೆಚ್ಚುಕಡಿಮೆ)

ಒಟ್ಟಾರೆ ಸಹಜತೆ(ಸರಳತೆ) ಅನ್ನೋದು ತಾರಕ 
ನಾಟಕ(ವಿಡಂಬನ) ವಂಚನೆ ಅನ್ನೋದು ಮಾರಕ
**

ನಾಟಕವಾಡುವವರು/ನಾಟಕ ಮಾಡುವವರು 

👆🏿
ಎರಡೂ ಪದಗಳೇ ಸಾಕ್ಷಿ..

ನಾಟಕವಾಡುವವರು 
ಇಲ್ಲಿ ಒಂದೇ ಪದ 

ನಾಟಕವಾಡುವವರು ನಾಟಕದಂತಿರುತ ನಾಟಕವಾಡುವರು..
ಇದು ರೂಢಿಯಲಿರುವ ವೇದಿಕೆಯ ನಾಟಕದ ಪರವಾಗಿ..


ನಾಟಕ ಮಾಡುವವರು..
ಇಲ್ಲಿ ಎರಡು ಪದಗಳು
ಇರುವುದೊಂದು ಮಾಡುವುದೊಂದು..
ನಿಜವಾಗಿ ವ್ಯವಹರಿಸುವರೆಂಬುದಕೆ ಒಗ್ಗಿಕೊಂಡಿಲ್ಲ..

ನಾಟಕ ಆಡುವವರು.. ತಮ್ಮ ತಮ್ಮ ಕರ್ತವ್ಯ ಚಾಚೂ ತಪ್ಪದೆ ಮಾಡುವವರು.. ಸಹಜವಾಗಿ ಸರಳವಾಗಿರುವವರು..
ಕಾಯಾ ವಾಚಾ ಮನಸಾ ಒಂದೇ ಆಗಿರುವವರು..

ಆದರೆ 

ನಾಟಕ ಮಾಡುವವರು ಅಂದರೆ...

ಸುಮ್ಮನೆ ವೈಷ್ಣವನೆಂಬಿರಿ ಪರ- ಬೊಮ್ಮ ಸುಜ್ಞಾನವನರಿಯದ ಮನುಜನ
 ||ಪ|| 

ಮುಖವ ತೊಳೆದು ನಾಮವನಿಟ್ಟೆನಲ್ಲದೆ ಸುಖತೀರ್ಥ ಶಾಸ್ತ್ರವನೋದಿದೆನೆ ಸುಖಕೆ ಶೃಂಗಾರಕೆ ಮಾಲೆ ಹಾಕಿದೆನಲ್ಲದೆ ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||

 ಊರು ಮಾತುಗಳಾಡಿ ದಣಿದೆನಲ್ಲದೆ ನಾರಾಯಣ ಕೃಷ್ಣ ಶರಣೆಂದೆನೆ ನಾರಿಯ ನುಡಿ ಕೇಳಿ ಮರುಳಾದೆನಲ್ಲದೆ ಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ ||

 ನರೋತ್ತಮರಿಗಧಿಕ ಗಂಧರ್ವರಿಗಧಿಕ ಸುರೇಂದ್ರಗಧಿಕ ಹರಗಧಿಕ ವಿರಿಂಚಿಗಧಿಕ ಸಿರಿಗಧಿಕ ಹರಿಸರ್ವೋತ್ತಮನೆಂದು ತಿಳಿದೆನೇನಯ್ಯ ||

 ಜಗತು ಸತ್ಯವೆಂದು ಪಂಚಭೇದವ ತಿಳಿದು ಮಿಗೆ ರಾಗದ್ವೇಷಂಗಲನು ವರ್ಜಿಸಿ ಭಗವಂತನ ಲೀಲೆ ಶ್ರವಣ ಕಥೆಗಳಿಂದ ನಿಗಮಗೋಚರನೆಂದು ತಿಳಿದೆನೇನಯ್ಯ ||

 ಗಂಗೆಯಲಿ ಮೈಮಣ್ಣ ತೊಳೆದೆನಲ್ಲದೆ ಭವ ಹಿಂಗುವ ಸ್ನಾನವ ಮಾಡಿದೆನೆ

 ರಂಗವಿಠಲನ

 ನಿಜವಾದ ದಾಸರ ಸಂಗಸುಖವೆಂದು ತಿಳಿದೆನೇನಯ್ಯ ||
***


ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ 
ಸುe್ಞÁನವನರಿಯದ ಮನುಜನ ||pa||

ಮುಖವ ತೊಳೆದು ನಾಮವನಿಟ್ಟೆನಲ್ಲದೆಸುಖತೀರ್ಥಶಾಸ್ತ್ರವನೋದಿದನೆ
ಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||1||

ಊರು ಮಾತುಗಳಾಡಿ ದಣಿದೆನಲ್ಲದೆನಾರಾಯಣ ಕೃಷ್ಣ ಶರಣೆಂದೆನೆ
ನಾರಿಯ ನುಡಿ ಕೇಳಿ ಮರುಳಾದೆನಲ್ಲದೆಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ||2||

ನರೋತ್ತಮರಿಗಧಿಕ ಗಂಧರ್ವರಿಗಧಿಕಸುರೇಂದ್ರಗಧಿಕ ಹರಗಧಿಕ
ವಿರಿಂಚಿಗಧಿಕ ಸಿರಿಗಧಿಕಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ||3||

ಜಗತು ಸತ್ಯವೆಂದು ಪಂಚಭೇದವ ತಿಳಿದುಮಿಗೆ ರಾಗದ್ವೇಷಂಗಳನು ವರ್ಜಿಸಿ
ಭಗವಂತನ ಲೀಲೆ ಶ್ರವಣ ಕಥೆಗಳಿಂದನಿಗಮಗೋಚರನೆಂದು ತಿಳಿದೆನೇನಯ್ಯ ||4||

ಗಂಗೆಯಲಿ ಮೈ ಬಣ್ಣ ತೊಳೆದೆನಲ್ಲದೆ ಭವಹಿಂಗುವ ಸ್ನಾನವ ಮಾಡಿದೆನೆ
ರಂಗವಿಠಲನ ನಿಜವಾದ ದಾಸರಸಂಗ ಸುಖವೆಂದು ತಿಳಿದೆನೇನಯ್ಯ ||5||
*******