Tuesday 10 December 2019

ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ ankita rangavittala

ನಾರಾಯಣಿ ರಾಗ ಆದಿತಾಳ

ಸುಮ್ಮನೆ ವೈಷ್ಣವನೆಂಬಿರಿ ಪರ-
ಬೊಮ್ಮ ಸುಜ್ಞಾನವನರಿಯದ ಮನುಜನ ||ಪ||

ಮುಖವ ತೊಳೆದು ನಾಮವನಿಟ್ಟೆನಲ್ಲದೆ
ಸುಖತೀರ್ಥ ಶಾಸ್ತ್ರವನೋದಿದೆನೆ
ಸುಖಕೆ ಶೃಂಗಾರಕೆ ಮಾಲೆ ಹಾಕಿದೆನಲ್ಲದೆ
ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||೧||

ಊರು ಮಾತುಗಳಾಡಿ ದಣಿದೆನಲ್ಲದೆ
ನಾರಾಯಣ ಕೃಷ್ಣ ಶರಣೆಂದೆನೆ
ನಾರಿಯ ನುಡಿ ಕೇಳಿ ಮರುಳಾದೆನಲ್ಲದೆ
ಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ ||೨||

ನರೋತ್ತಮರಿಗಧಿಕ ಗಂಧರ್ವರಿಗಧಿಕ
ಸುರೇಂದ್ರಗಧಿಕ ಹರಗಧಿಕ
ವಿರಿಂಚಿಗಧಿಕ ಸಿರಿಗಧಿಕ
ಹರಿಸರ್ವೋತ್ತಮನೆಂದು ತಿಳಿದೆನೇನಯ್ಯ ||೩||

ಜಗತು ಸತ್ಯವೆಂದು ಪಂಚಭೇದವ ತಿಳಿದು
ಮಿಗೆ ರಾಗದ್ವೇಷಂಗಲನು ವರ್ಜಿಸಿ
ಭಗವಂತನ ಲೀಲೆ ಶ್ರವಣ ಕಥೆಗಳಿಂದ
ನಿಗಮಗೋಚರನೆಂದು ತಿಳಿದೆನೇನಯ್ಯ ||೪||

ಗಂಗೆಯಲಿ ಮೈಮಣ್ಣ ತೊಳೆದೆನಲ್ಲದೆ ಭವ
ಹಿಂಗುವ ಸ್ನಾನವ ಮಾಡಿದೆನೆ
ರಂಗವಿಠಲನ ನಿಜವಾದ ದಾಸರ
ಸಂಗಸುಖವೆಂದು ತಿಳಿದೆನೇನಯ್ಯ ||೫||
***

Summane vaishnavane nambiri | parabrahma suj~jaanavanariyada manujara || pa ||

Ooru maatugalaadi danidenallade | naaraayana krushna sharanendene ||
naariyara nudikeli marulaadenallade | aaryara maatu mannisidenenayya || 1 ||

Mukhava toledu naama balakondenallade | sukhateerthara shaastra Odidene ||
mukha shrungaarake manasotenallade | bhakutirasadalli omme mulugidenenayya || 2 ||


Jagatu satyavendu panchabheda tilidu | migeraaga dweshagalanu varjisi ||
hagalirulu bhaagavata kathaa shravanadi | nigamagocarananu bhajisidenenayya || 3 ||

Narottamagadhika gandharvagadhika | surendragadhika haragadhika ||
saraswatigadhika virinchigadhika | shreetarunigadhika shree hariyandenenayya || 4 ||

Gangeyolangavanaddidenallade | hingade snaanava maadidene ||
rangaviththalana nijavaada daasara | sangadolage olaadidenenayya || 5 ||
******


ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ 
ಸುe್ಞÁನವನರಿಯದ ಮನುಜನ ||pa||

ಮುಖವ ತೊಳೆದು ನಾಮವನಿಟ್ಟೆನಲ್ಲದೆಸುಖತೀರ್ಥಶಾಸ್ತ್ರವನೋದಿದನೆ
ಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||1||

ಊರು ಮಾತುಗಳಾಡಿ ದಣಿದೆನಲ್ಲದೆನಾರಾಯಣ ಕೃಷ್ಣ ಶರಣೆಂದೆನೆ
ನಾರಿಯ ನುಡಿ ಕೇಳಿ ಮರುಳಾದೆನಲ್ಲದೆಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ||2||

ನರೋತ್ತಮರಿಗಧಿಕ ಗಂಧರ್ವರಿಗಧಿಕಸುರೇಂದ್ರಗಧಿಕ ಹರಗಧಿಕ
ವಿರಿಂಚಿಗಧಿಕ ಸಿರಿಗಧಿಕಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ||3||

ಜಗತು ಸತ್ಯವೆಂದು ಪಂಚಭೇದವ ತಿಳಿದುಮಿಗೆ ರಾಗದ್ವೇಷಂಗಳನು ವರ್ಜಿಸಿ
ಭಗವಂತನ ಲೀಲೆ ಶ್ರವಣ ಕಥೆಗಳಿಂದನಿಗಮಗೋಚರನೆಂದು ತಿಳಿದೆನೇನಯ್ಯ ||4||

ಗಂಗೆಯಲಿ ಮೈ ಬಣ್ಣ ತೊಳೆದೆನಲ್ಲದೆ ಭವಹಿಂಗುವ ಸ್ನಾನವ ಮಾಡಿದೆನೆ
ರಂಗವಿಠಲನ ನಿಜವಾದ ದಾಸರಸಂಗ ಸುಖವೆಂದು ತಿಳಿದೆನೇನಯ್ಯ ||5||
*******

No comments:

Post a Comment