ನಿನ್ನ ನಂಬಿದೆ ರಾಘವೇಂದ್ರ
ನೀ ಎನ್ನ ಪಾಲಿಸು ಸುಯಮೀಂದ್ರ ||ಪ||
ಸನ್ನುತ ಸರಸ ಕವೀಂದ್ರ
ಪ್ರಪನ್ನ ಹೃತ್ಕುಮುದಸುಚಂದ್ರ ||ಅ.ಪ||
ಭಾರತೀಶ ಪದಾಬ್ಜಭೃಂಗ
ಖರಾರಿಯ ಕರುಣಾಂತರಂಗ
ಸಾರಿದವರ ಭವಭಂಗ
ಸಮೀರಮತಾಬ್ಜ ಪತಂಗ ||೧||
ಭೇದಮತಾಬ್ದಿವಿಹಾರ
ಕುವಾದಿ ಮದವನ ಕುಠಾರ
ಸಾಧಿತಾಖಿಳ ತತ್ತ್ವ ಸಾರ
ಮಧುಸೂದನ ಚಂದ್ರಚಕೋರ ||೨||
ಸುಧೀಂದ್ರ ಕರಕಂಜಜಾತ
ವಿಬುಧ ಸಂಘ ಸತತ ಸಮೇತ
ವಿಧಿಪಿತ ಗುರು ಜಗನ್ನಾಥವಿಠಲನು
ಅಧಿಕನೆಂದೊರೆದ ವಿಖ್ಯಾತ ||೩||
***
Ninna nambide raghavendra
ni enna palisu suyamindra ||pa||
Sannuta sarasa kavindra
prapanna hrutkumudasuchandra ||a.pa||
Bharatisha padabjabhrunga
kharariya karunantaranga
saridavara bhavabhanga
samiramatabja patanga ||1||
Bhedamatabdivihara
kuvadi madavana kuthara
sadhitakhila tattva sara
madhusudana chandrachakora ||2||
Sudhindra karakanjajata
vibudha sangha satata sameta
vidhipita guru jagannathavithalanu
adhikanendoreda vikhyata ||3||
***
ನಿನ್ನ ನಂಬಿದೆ ರಾಘವೇಂದ್ರ – ನೀ – ಎನ್ನ ಪಾಲಿಸು ಸುಯಮೀ೦ದ್ರ || ಪ ||
ಸನ್ನುತ ಸರಸ ಕವೀ೦ದ್ರ – ಪ್ರಸನ್ನ ಹೃತ್ಕುಮುದ ಸುಚ೦ದ್ರ || ಅ ||
ಭಾರತೀಶಪದಾಬ್ಜಭ್ಯ೦ಗ – ಖರಾರಿಯ ಕರುಣ ತರ೦ಗ
ಸಾರಿದವರ ಭವಭ೦ಗ – ಸಮೀರಮತಾಬ್ಜ ಪತ೦ಗ || ೧ ||
ಭೇದಮತಾಬ್ಧಿ ವಿಹಾರ – ಕುವಾದಿ ಮದವನ ಕುಠಾರ
ಸಾಧಿತಾಖಿಲ ತತ್ತ್ವಸಾರ – ಮಧುಸೂದನ ಚ೦ದ್ರಚಕೋರ || ೨ ||
ಸುಧೀ೦ದ್ರ ಕರಕ೦ಜಜಾತ – ವಿಬುಧ ಸ೦ಘ ಸತತ ಸಮೇತ
ವಿಧಿಪಿತಗುರು ಜಗನ್ನಾಥ ವಿಠ್ಠಲ – ನಧಿಕನೆ೦ದೊರೆದ ವಿಖ್ಯಾತ || ೩ ||
*******
ಸನ್ನುತ ಸರಸ ಕವೀ೦ದ್ರ – ಪ್ರಸನ್ನ ಹೃತ್ಕುಮುದ ಸುಚ೦ದ್ರ || ಅ ||
ಭಾರತೀಶಪದಾಬ್ಜಭ್ಯ೦ಗ – ಖರಾರಿಯ ಕರುಣ ತರ೦ಗ
ಸಾರಿದವರ ಭವಭ೦ಗ – ಸಮೀರಮತಾಬ್ಜ ಪತ೦ಗ || ೧ ||
ಭೇದಮತಾಬ್ಧಿ ವಿಹಾರ – ಕುವಾದಿ ಮದವನ ಕುಠಾರ
ಸಾಧಿತಾಖಿಲ ತತ್ತ್ವಸಾರ – ಮಧುಸೂದನ ಚ೦ದ್ರಚಕೋರ || ೨ ||
ಸುಧೀ೦ದ್ರ ಕರಕ೦ಜಜಾತ – ವಿಬುಧ ಸ೦ಘ ಸತತ ಸಮೇತ
ವಿಧಿಪಿತಗುರು ಜಗನ್ನಾಥ ವಿಠ್ಠಲ – ನಧಿಕನೆ೦ದೊರೆದ ವಿಖ್ಯಾತ || ೩ ||
*******