ಕೃಷ್ಣಾ ಎನಬಾರದೆ..
ನರ ಜನ್ಮ ಬಂದಾಗ ನಾಲಿಗೆ ಇದ್ದಾಗ|
ಕೃಷ್ಣ ಎನಬಾರದೆ||
ಸ್ನಾನ ಸಂಧ್ಯಾವಂದನೆ ಬಿಟ್ಟು|
ಜ್ಞಾನಿಗಳಾದವರನು ಹಳಿವೆ|
ಧ್ಯಾನಿಪೆ ಸರ್ವದಾ ಪರರ ಕೇಡನು|
ಏನೆಂಥೇಳಲಿ ಯನ್ನಯ ಅವಗುಣ||
ಮರೆತಾದರು ಹರಿಯೊಂದೊಮ್ಮೆ| ಸ್ಮರಿಸಿದವರ ದುರ್ಗುಣಗಳನು|
ಪೊರೆದವನೆಂಬ ನಿನ್ನ ಬಿರುದು ಕೇಳಿ|
ಪದ ಸರಸಿಜಕ್ಕೆರಗಿದೆ|
ಕರುಣಿಸೋ ಮಾಧವ||
ಪುಸಿಯಲ್ಲವೋ ಇದು| ಅಜಾಮಿಳ ಪೆಸರಾಗಿಹ ಪಾಪಿಷ್ಟರೊಳು|
ವಶಮಿರಿ ಸುತನ ಕರೆಯಲಾಕ್ಷಣ|
ಪೋಷಿಸಿದೆ ತ್ವರದಿ ಶ್ರೀ ಪ್ರಾಣೇಶ ವಿಠ್ಠಲ|
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ
*******