ಕಾಖಂಡಕಿ ಶ್ರೀ ಕೃಷ್ಣದಾಸರು
ರಘುನಾಥ ದೀನಾನಾಥ ಸದ್ಗತಿದಾತ ನೋಡಿರ್ಯೋ ಜಾನಕಿ ಧವಗರ್ಪಿತವೆನೆ ಅವನಿಯೊಳಗೆ ಶಬರಿ ಘವಘವಿಸುತಿಹ ಅವಿರಳ ಪದದನುಭವ ನೀಡಿದಾ1
ದಾವನು ಶೃತಿಗಳು ಭಾವಿಸೆ ನುಡಿಯದು ದೇವನು ಹಿತಗುಜ ಕೇವಲ ವನಚರ ಜೀವರೊಳಾಡುತ ಸೇವೆಗೆ ನಲಿಯುತ ಕೈವಿಡಿ ಬಿತ್ತನು ಕೈವಲ್ಯಾದಾ 2
ಬಾಂಧವ ನಿಂದಿಸಿ ನೂಕಲು ನೊಂದು ವಿಭೀಷಣ ಬಂದರ ಶರಣವ ತಂದೆ ಮಹಿಪತಿ ನಂದನ ಪ್ರಭು ಆ ನಂದದ ಸ್ಥಿರಪದ ಹೊಂದಿಸಿದಾ 3
***